ಕೊಡಗು :
ಕಳೆದ ವಾರದಿಂದ ಆಗುತ್ತಿದ್ದ ಭಾರಿ ಮಳೆ ಮತ್ತು ಪ್ರವಾಹದಿಂದ ದಿಕ್ಕುಕಾಣದೆ ಕೊಡಗಿನ ಕೆಎಸ್ಆರ್ಟಿಸಿ ಶುಭ ಸುದಿ ನೀಡಿದೆ ಬೆಂಗಳೂರು ಮತ್ತು ಮೈಸೂರಿನಿಂದ ಬಸ್ ಸೇವೆ ಪುನಃ ಆರಂಭವಾಗಿದೆ. ಶನಿವಾರ ರಾತ್ರಿಯಿಂದಲೇ ಮಡಿಕೇರಿಗೆ ಬಸ್ ಸಂಚಾರವನ್ನು ಪ್ರಾರಂಭಿಸಲಾಗಿದೆ. ಆದರೆ, ಮಂಗಳೂರಿನಿಂದ ಮಡಿಕೇರಿ ತಲುಪುವುದು ಇನ್ನೂ ದುಸ್ಥರ ಕಾರಣ ಈ ಮಾರ್ಗದಲ್ಲಿ ಹಲವು ಮಳೆಯಿಂದಾಗಿ ಕಡೆ ಗುಡ್ಡ ಕುಸಿದು ಬಿದ್ದಿದೆ. ಮೈಸೂರು ಮತ್ತು ಬೆಂಗಳೂರಿನಿಂದ ಕುಶಾಲನಗರ ಮಾರ್ಗವಾಗಿ ಮಡಿಕೇರಿಗೆ, ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ ಬಸ್ಸುಗಳು ಸಂಚಾರ ನಡೆಸುತ್ತಿವೆ. ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಸುಮಾರು 15 ಕಡೆ ಗುಡ್ಡ ಕುಸಿದಿದೆ ಎಂದು ಅಂದಾಜಿಸಲಾಗಿದೆ.
