ಬೆಂಗಳೂರು:
ರಾಜ್ಯದ ಗ್ರಂಥಾಲಯಗಳಿಗೆ ಸುಮಾರು 1.5ಲಕ್ಷ ಪುಸ್ತಕಗಳನ್ನು ಉಚಿತವಾಗಿ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ.
ರಾಜ್ಯಾದ ಜಿಲ್ಲಾ ವ್ಯಾಪ್ತಿಯ ಗ್ರಂಥಾಲಯಗಳಿಗೆ ಇಲಾಖೆವಾರು, 1.5ಲಕ್ಷ ಪುಸ್ತಕಗಳನ್ನು ಉಚಿತವಾಗಿಯೇ ನೀಡಲಾಗುತ್ತಿದೆ ಎಂದು ಇಲಾಖೆ ನಿರ್ದೇಶಕ ಎಸ್.ಆರ್.ವಿಶುಕುಮಾರ್ ತಿಳಿಸಿದ್ದಾರೆ
ಪುಸ್ತಕ ಪ್ರಾಧಿಕಾರ ಸೇರಿದಂತೆ ಹಲವು ಇಲಖೆಗಳಲಲ್ಲಿ ಪುಸ್ತಕಗಳು ಮಾರಾಟವಾಗದೆ, ಉಳಿದಿದ್ದು, ಇವುಗಳನ್ನು ಗ್ರಂಥಾಲಯಗಳಿಗೆ ನೀಡಿ ಓದುಗರಿಗೆ ಉಪಯೋಗಕ್ಕಾಗಿ ಗ್ರಂಥಾಲಯ ಇಲಾಖೆ ಹಾಗೂ ಪುಸ್ತಕ ಪ್ರಾಧಿಕಾರದ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಕನ್ನಡ ಪುಸ್ತಕ ಪ್ರಾಧಿಕಾರ-300 ಶೀರ್ಷಿಕೆ, 150 ಪ್ರತಿ ಸೇರಿದಂತೆ ಒಟ್ಟು 45 ಸಾವಿರ ಪುಸ್ತಕ, ಕುವೆಂಪು ಭಾಷಾ ಭಾರತೀ ಪ್ರಾಧಿಕಾರದ – 150 ಶೀರ್ಷಿಕೆ, 200 ಪ್ರತಿ ಸೇರಿದಂತೆ ಒಟ್ಟು- 30 ಸಾವಿರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 30 ಸಾವಿರ ಪುಸ್ತಕ ಸೇರಿದಂತೆ ಒಟ್ಟು 1.5ಲಕ್ಷ ಪುಸ್ತಕಗಳನ್ನು ಗ್ರಂಥಾಲಯ ಕ್ಕೆ ರವಾನೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಇಲಾಖೆಯ ವಿವಿಧ ಭಾಗಗಳಲ್ಲಿ, ಅನೇಕ ಪುಸ್ತಕಗಳು ಉಳಿದಿದ್ದು, ಇದನ್ನು ಭಾರತೀಯ ಅಂಚೆ ಇಲಾಖೆ ಮೂಲಕ ನೀಡಲಾಗುವುದು ಎಂದು ಅವರು ಹೇಳಿದರು.
ಸಹಾಯ ಕೇಂದ್ರಕ್ಕೆ ಚಾಲನೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕುವೆಂಪು ಭಾಷಾ ಭಾರತಿ ಪ್ರಕಟಿಸಿರುವ ಪುಸ್ತಕಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಉಚಿತವಾಗಿ ನೀಡುವ ಕಾರ್ಯಕ್ರಮಕ್ಕೆ ಕೂಡ ಸಚಿವೆ ಜಯಮಾಲಾ ಸಾಂಕೇತಿಕ ಚಾಲನೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯ ಚಟುವಟಿಕೆಗಳನ್ನು ಸುಲಭವಾಗಿ ಜನರಿಗೆ ಮುಟ್ಟಿಸುವ ಹಿನ್ನೆಲೆಯಲ್ಲಿ ಸಹಾಯ ಕೇಂದ್ರ ನೆರವಾಗಲಿದೆ ಎಂದರು ಸಚಿವೆ ಡಾ.ಜಯಮಲಾ.
ಶನಿವಾರದಿಂದಇಲಾಖೆಯ ಕಾರ್ಯಕ್ರಮಗಳು ಸೇರಿದಂತೆ ಇನ್ನಿತರೆ ಬಗ್ಗೆ ಮಾಹಿತಿಯನ್ನು ಸಹಾಯ ಕೇಂದ್ರದಿಂದ ಪಡೆಯಬಹುದಾಗಿದೆ.ಜೊತೆಹೆ ಧನ ಸಹಾಯ, ಅರ್ಜಿ ಆಹ್ವಾನ ಹಾಗೂ ಗೌರವ ಧನ ಕುರಿತು ಮಾಹಿತಿಯೂ ದೊರೆಯಲಿದೆ.ಇದರಿಂದಾಗಿ, ಅನಕ್ಷರಸ್ಥ ಕಲಾವಿದರಿಗೆ ಉಪಯೋಗ ವಾಗಲಿದ್ದು, ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ
