ಛಾಯಾಗ್ರಹಕರದ್ದು ಚರಿತ್ರೆ ಜೀವಂತ ಇಟ್ಟ ಹೆಗ್ಗಳಿಕೆ

 ದಾವಣಗೆರೆ:

      ದೇಶದ ಚರಿತ್ರೆಯನ್ನು ಜೀವಂತವಾಗಿಟ್ಟ ಹೆಗ್ಗಳಿಕೆಯು ಛಾಯಾಚಿತ್ರ ಕಲಾವಿದರಿಗೆ ಹಾಗೂ ಛಾಯಾಗ್ರಹಕರಿಗೆ ಸಲ್ಲಲಿದೆ ಎಂದು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಪ್ರತಿಪಾದಿಸಿದರು.

      ನಗರದ ಕುವೆಂಪು ಕನ್ನಡಭವನದಲ್ಲಿ ಭಾನುವಾರ ಜಿಲ್ಲಾ ಛಾಯಾಗ್ರಾಹಕರ ಸಂಘದ 39ನೇ ವಾರ್ಷಿಕೋತ್ಸವ, ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ನಡೆದು ಹೋಗಿರುವ ರಾಮಾಯಣ ಹಾಗೂ ಮಹಾಭಾರತದಲ್ಲಿ ಬರುವ ಪಾತ್ರಗಳ ಚಿತ್ರ ಬರೆದುಕೊಡುವ ಮೂಲಕ ಮಹಾಭಾರತದಲ್ಲಿ ಬರುವ ಶ್ರೀಕೃಷ್ಣ, ಅರ್ಜುನ, ಭೀಮ, ಭೀಷ್ಮ ಹಾಗೂ ರಾಮಾಯಣದ ರಾಮ, ಸೀತೆ, ಲಕ್ಷ್ಮಣ, ಭರತ, ದಶರಥ ಸೇರಿದಂತೆ ಹಲವರು ಹೀಗೆ ಇದ್ದರು ಎಂಬುದನ್ನು ಕಲ್ಪಿಸಿಕೊಂಡು, ಅವರುಗಳ ಕಲಾಕೃತಿಗಳನ್ನು ಬರೆದಿಡುವ ಮೂಲಕ ಇತಿಹಾಸ ಉಳಿಸಿದ ಹೆಗ್ಗಳಿಕೆ ಛಾಯಾಚಿತ್ರ ಕಲಾವಿದರಿಗೆ ಹಾಗೂ ಛಾಯಾಗ್ರಹಕರದ್ದಾಗಿದೆ ಎಂದು ಹೇಳಿದರು.

      ದೇಶದ ಚರಿತ್ರೆಯನ್ನು ಕಟ್ಟಿಕೊಟ್ಟ ಛಾಯಾಗ್ರಾಹಕರ ವೃತ್ತಿ ಇಂದು ಕಳಪೆಗೊಳ್ಳುತ್ತಿದೆ. ಏಕೆಂದರೆ, ಈಗಿನ ಛಾಯಾಗ್ರಾಹಕರು ಒಳ್ಳೆಯ ಚಿತ್ರಗಳನ್ನು ಸೆರೆಹಿಡಿಯುವ ಬದಲು ರಾಜಕಾರಣಿಗಳು ಏನು ಮಾಡಿದ್ದಾರೆಂಬುದನ್ನು ಕೆದಕಿ ಸರೆ ಹಿಡಿಯುವುದು, ಬಿದ್ದಿರುವ ಕಸದ ರಾಶಿಯನ್ನು ಸೆರೆ ಹಿಡುವುದನ್ನು ಮಾಡುತ್ತಿದ್ದಾರೆ. ಇದನ್ನು ಬಿಟ್ಟು ದೇಶ ಮತ್ತು ಸಮಾಜದ ಹಿತದೃಷ್ಟಿಯಿಂದ ಉತ್ತಮ ಛಾಯಾಚಿತ್ರಗಳನ್ನು ಸೆರೆಹಿಡಿಯಬೇಕೆಂದು ಕಿವಿಮಾತು ಹೇಳಿದರು.

      ಛಾಯಾಗ್ರಾಹಕರು ಪ್ರಕೃತಿಯಲ್ಲಿರುವ ವೈಶಿಷ್ಟ್ಯತೆಯ ಬಗ್ಗೆ ಹಾಗೂ ಗ್ರಾಮೀಣ ಪ್ರದೇಶಗಳ ಜನರ ಭಾವನೆಗಳನ್ನು ತಮ್ಮ ಕ್ಯಾಮೇರಾಗಳಲ್ಲಿ ಸೆರೆಹಿಡಿಯಬೇಕಾಗಿದೆ ಎಂದ ಅವರು, ಸಾಮಾಜಿಕ ಕಳಕಳಿಯೊಂದಿಗೆ ವೃತ್ತಿ ಬದುಕನ್ನು ನಿರ್ವಹಿಸುವ ಮೂಲಕ ನಿಮ್ಮ ವೃತ್ತಿಗೆ ಸರಿಯಾದ ನ್ಯಾಯ ಒದಗಿಸಿ ಕೊಡಿ ಎಂದು ಸಲಹೆ ನೀಡಿದರು.

      ಪ್ರಾಸ್ತಾವಿಕ ಮಾತನಾಡಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ, ವನ್ಯಜೀವಿ ಛಾಯಾಗ್ರಾಹಕ ಶಶಿ ಸಾಲಿ, ಕಳೆದ 30 ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ದೇಶದ ಹಲವು ವನ್ಯಜೀವಿ ತಾಣಗಳಿಗೆ ಭೆಟಿ ನೀಡಿ ಫೋಟೊಗಳನ್ನು ಸೆರೆಹಿಡಿದಿದ್ದೇನೆ. ಹಿಂದೆ ಫೋಟೊ ತೆಗೆಯಲು ಇದ್ದ ಸಮಸ್ಯೆಗಳು ಈಗಿಲ್ಲ. ಅಲ್ಲದೆ, ಪ್ರಸ್ತುತ ತಂತ್ರಜ್ಞಾನವೂ ಸಾಕಷ್ಟು ಅಭಿವೃದ್ಧಿಯಾಗಿದೆ. ಆದ್ದರಿಂದ ಹಿಂದಿಗಿಂತಲೂ ಈಗ ಉತ್ತಮ ಫೋಟೊಗಳು ತೆಗೆಯಬಹುದಾಗಿದೆ. ಆದರೆ, ಇಂದಿನ ಛಾಯಾಚಿತ್ರಗಾರರಿಗೆ ತಾಳ್ಮೆ, ಶ್ರದ್ಧೆ ಇಲ್ಲವಾಗಿದೆ. ಏಕೆಂದರೆ, ಪ್ರಕೃತಿಯ ವೈಶಿಷ್ಟತೆಯ ಫೋಟೊ ತೆಗೆಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಅದಕ್ಕೆ ತಾಳ್ಮೆ ಬಹಳ ಮುಖ್ಯ. ಉತ್ತಮ ಛಾಯಾಚಿತ್ರಗಾರ ಆಗಲು ಕಲ್ಪನೆ, ಶ್ರದ್ಧೆ, ತಾಳ್ಮೆ ಅತ್ಯವಶ್ಯವಾಗಿದೆ ಎಂದು ಹೇಳಿದರು.

      ಶಶಿ ಸಾಲಿ ಮತ್ತು ಶೋಭಾ ಸಾಲಿ ಅವರು ಸೆರೆ ಹಿಡಿದಿರುವ ಹಕ್ಕಿಗಳ ಇಂಚರ ಛಾಯಾಚಿತ್ರ ಪ್ರದರ್ಶನದಲ್ಲಿ ಪಕ್ಷಿಗಳ ಅದ್ಭುತ ವಿಹಂಗಮ ನೋಟದ ಚಿತ್ರಗಳು ವಿಶೇಷ ಗಮನ ಸೆಳೆಯುತ್ತಿದ್ದವು.

      ಅಧ್ಯಕ್ಷತೆಯನ್ನು ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಆರ್.ಎನ್. ಪಾಟೀಲ್ ವಹಿಸಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕøತ ಹೆಚ್.ಬಿ.ಮಂಜುನಾಥ್, ಸುರಭಿ ಶಿವಮೂರ್ತಿ, ಗಜಾನನ ಭೂತೆ, ಎ.ಎಲ್.ತಾರಾನಾಥ್, ಶೋಭಾ ಸಾಲಿ, ಎಂ.ಮನು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕುಮಾರ್ ಸ್ವಾಗತಿಸಿದರು, ಸುಮಾ ಪ್ರಾರ್ಥಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link