ಕುಣಿಗಲ್ :
ಮಾರ್ಕೋನಹಳ್ಳಿ ಮತ್ತು ಮಂಗಳಾ ಜಲಾಶಯಗಳಿಗೆ ಹೇಮಾವತಿ ನೀರು ಹರಿಸುವಂತೆ ಒತ್ತಾಯಿಸಿ ಯಡಿಯೂರು ಹೇಮಾವತಿ ನಾಲಾ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಎಚ್ಚರಿಕೆ ಪತ್ರವನ್ನು ನೀಡುವ ಮೂಲಕ ರೈತಸಂಘದ ಪದಾದಿಕಾರಿಗಳು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಯಡಿಯೂರು ಹೇಮಾವತಿ ನಾಲಾವಲಯದ ಕಛೇರಿ ಆವರಣದಲ್ಲಿ ರೈತ ಸಂಘದ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡುತ್ತ ರೈತರೊಂದಿಗೆ ಅಧಿಕಾರಿಗಳಿಗೆ ಮನವಿ ಪತ್ರಸಲ್ಲಿಸಿ ಮಾತನಾಡಿದ ಅವರು
ಶಾಸಕರಾದ ರಂಗನಾಥ್ ಅವರು ರಾತ್ರಿಯೆಲ್ಲ್ಲಾ ಅಧಿಕಾರಿಗಳೊಂದಿಗೆ ಹೇಮಾವತಿ ನಾಲೆಯ ರಸ್ತೆಯಲ್ಲಿ ಓಡಾಡಿ ಕೇವಲ ಪ್ರಚಾರ ಗಿಟ್ಟಿಸಿಕೊಂಡರೆ ವಿನಃ ಹೇಮಾವತಿ ನೀರುಮಾತ್ರ ಕುಣಿಗಲ್ ಹಾಗೂ ಮಂಗಳ, ಮಾರ್ಕೋನಹಳ್ಳಿಗೆ ಹರಿಯಲಿಲ್ಲ ಎಂದು ಲೇವಡಿ ಮಾಡಿದರು.
ಮಾರ್ಕೋನಹಳ್ಳಿ ಹಾಗೂ ಮಂಗಳ ಜಲಾಶಯಗಳು ನಿಮ್ಮ ವ್ಯಾಪ್ತಿಯಲ್ಲೇ ಇದ್ದು ಕಳೆದ ಮೂರ್ನಾಲ್ಕು ವರ್ಷಗಳಿಂದ ಹೇಮಾವತಿ ನೀರನ್ನು ಹರಿಸುವಲ್ಲಿ ಅಧಿಕಾರಿಗಳು ವಿಫಲಾರಾಗಿದ್ದೀರ ಆದ್ದರಿಂದ ಈ ಭಾಗದ ರೈತರ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ ಹಾಗೂ ಕೃಷಿ ಚಟುವಟಿಕೆಗಳು ಮೊಟಕು ಗೊಂಡಿದೆ,É ರೈತರ ಕುಟುಂಬ ನಿರ್ವಹಣೆ ಸಾದ್ಯವಾಗದೆ ಬೇರೇ ಊರುಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣ ಗೊಂಡಿದೆ ಸುಮಾರು ಎರಡು ತಿಂಗಳಿನಿಂದ ತುಮಕುರಿಗೆ ಹೇಮಾವತಿ ನೀರು ಸಾಕಷ್ಟು ಹರಿಯುತ್ತಿದ್ದರು. ಅಧಿಕಾರಿಗಳ ನಿಲ್ರ್ಯಕ್ಷದಿಂದ ಕುಣಿಗಲ್ ಭಾಗಕ್ಕೆ ನೀರು ಹರಿಯುತ್ತಿಲ್ಲ ಮಂಗಳಾ ಹಾಗೂ ಮಾರ್ಕೋನಹಳ್ಳಿಗೆ ಬರುವ ಎಲ್ಲಾ ಗೇಟ್ಗಳನ್ನು ತೆಗೆದು ಒಂದು ವಾರದೊಳಗೆ ನೀರು ಹರಿಸದಿದ್ದರೆ ಇಲಾಖೆಯ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲ ತಾಲ್ಲೂಕಿಗೆ ಅನಧಿಕೃತವಾಗಿ ನೀರು ತೆಗೆದುಕೊಂಡು ಹೋಗಲು ಜಲಾಶಯದ ಒಳಗೆ ಗುಂಡಿಗಳನ್ನು ತೆಗೆದಿದ್ದೀರ ಈ ಗುಂಡಿಗಳಿಗೆ ಹಲವಾರು ರೈತರ ಸಾಕು ಪ್ರಾಣಿಗಳು ಬಿದ್ದು ಪ್ರಾಣ ಕಳದುಕೊಂಡಿವೆ ಯಾರಾದರೂ ಮನುಷ್ಯರು ಬಿದ್ದು ಪ್ರಾಣ ಬಿಟ್ಟರೆ ಅಧಿಕಾರಿಗಳೇ ನೇರ ಹೊಣೆಯಾಗುತ್ತೀರ ಎಂದ ಎಚ್ಚರಿಕೆ ನೀಡಿದರು.
ಕಾರ್ಯಪಾಲಕ ಇಂಜಿನಿಯರ್ ಮಂಜೇಗೌಡ ಮಾತನಾಡಿ 15 ದಿನಗಳಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನೀರು ಹರಿಸಲು ಪ್ರಯತ್ನ ಪಡುತ್ತೇನೆಂದು ಭರವಸೆ ನೀಡಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಕುಣಿಗಲ್ ಪೊಲೀಸ್ ಠಾಣೆಯ ಡಿ.ವೈ.ಎಸ್.ಪಿ. ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೂಬಸ್ತ್ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಅನಿಲ್ ಪದಾಧಿಕಾರಿಗಳಾದ ರಾಜೇಂದ್ರ, ಗೌರೀಶ್, ಗಂಗರಾಜು ವೆಂಕಟೇಶ ಮುಂತಾದವರು ಇದ್ದರು.