ಪಾವಗಡ
ಮಂಜೂರಾಗಿರುವ ಬೆಳೆಸಾಲದ ವಿಮಾಹಣವನ್ನು ಸಾಲಕ್ಕೆ ಜಮಾ ಮಾಡದಂತೆ ಪಾವಗಡ ತಾಲ್ಲೂಕು ರೈತ ಮತ್ತು ಹಸಿರುಸೇನೆ ಸಂಘದ ವತಿಯಿಂದ ತಾಲ್ಲೂಕಿನ ಸಿ.ಕೆ.ಪುರ ಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕ್ ಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಜರುಗಿದೆ.
ಮುತ್ತಿಗೆಯಲ್ಲಿ ಸಂಘದ ತಾ ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ಬೆಳೆ ವಿಮೆ ಕಂಪನಿಯಿಂದ ಬಂದ ಹಣವನ್ನು ರೈತರ ಸಾಲಕ್ಕೆ ಜಮಾ ಮಾಡುತ್ತಿರುವುದು ಖಂಡನೀಯ ಎಂದು ಅಕ್ರೋಶ ವ್ಯಕ್ತ ಪಡಿಸಿದರು.
ಇಂದಿನ ಪರಿಸ್ಥಿಯಲ್ಲಿ ತಾಲ್ಲೂಕು ಬರದಿಂದ ತತ್ತರಿಸುತ್ತಿದ್ದು, ರೈತರು ಸಾಲಸೋಲಮಾಡಿ ವ್ಯವಸಾಯ ಮಾಡುತ್ತಿದ್ದಾರೆ, ಮಕ್ಕಳ ವಿದ್ಯಾಬ್ಯಾಸಕ್ಕೆ ಹಾಗೂ ಮತ್ತು ಜೀವನ ನಡೆಸುವುದು ಕಷ್ಟಕರವಾಗಿದೆ, ಅಲ್ಲದೆ ಮಳೆ ಇಲ್ಲದೆ ಮಳೆಗಾಲದಲ್ಲೂ ಬರಗಾಲವಾಗಿದೆ, ವಿಮಾ ಹಣವನ್ನು ಯಾವುದೆ ಕಾರಣಕ್ಕೂ ಸಾಲಕ್ಕೆ ಜಮಾ ಮಾಡದೆ ರೈತರಿಗೆ ನೀಡಬೇಕು ಎಂದು ಬ್ಯಾಂಕ್ ವ್ಯವಸ್ಥಾಪಕ ರಾಮಕೃಷ್ಣರೆಡ್ಡಿಗೆ ಒತ್ತಾಯಿಸಿದರು,
ಅಲ್ಲದೇ ಈ ಬಗ್ಗೆ ಜಿಲ್ಲೆಯ ಲೀಡ್ ಬ್ಯಾಂಕ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಗಮನ ಹರಿಸಿ. ತಾಲ್ಲೂಕಿನ ರೈತರ ಹಿತಾಸಕ್ತಿಯನ್ನು ಕಾಪಾಡಬೇಕೆಂದು ಒತ್ತಾಯಿಸಿದರು.ಮನವಿ ಸ್ವೀಕರಿಸಿದ ವ್ಯವಸ್ಥಾಪಕ ರಾಮಕೃಷ್ಣರೆಡ್ಡಿ ಮಾತನಾಡಿ ಮನವಿಯನ್ನು ಲೀಡ್ ಬ್ಯಾಂಕ್ ಮೇನೇಜರ್ ಹಾಗೂ ನಮ್ಮ ಬ್ಯಾಂಕಿ ನ ರೀಜಿನಲ್ ಮೇನೇಜರ್ ಗೆ ಪತ್ರ ಮುಖೇನ ತಲುಪಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ರೈತ ಮುಖಂ ಡರಾದ ಹನುಮಂತರಾಯ, ನಾಗಣ್ಣ, ಸಣ್ಣರಾಮಪ್ಪ, ಚಂದ್ರಪ್ಪ, ಚಿತ್ತಯ್ಯ,ಬಡಪ್ಪ, ಈರಣ್ಣ, ಮತ್ತಿತರರಿದ್ದರು.