ತುಮಕೂರು
ಮೇಲ್ಕಂಡ ವಿಷಯಕ್ಕೆ ಸಂಬಂದಿಸದಂತೆ ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ತುಮಕೂರು ಶಾಖೆವತಿಯಿಂದ ಕೊಡಗು ಜಿಲ್ಲೆಯ ನೆರೆಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ ಮಾಡಲಾಯಿತು ಕರುನಾಡಿನ ಕಾಶ್ಮೀರ ಎಂದೇ ಪ್ರಖ್ಯಾತಿಯಾಗಿರುವ ಹೆಸರಾಂತ ಪ್ರವಾಸ ತಾಣ ಕೊಡಗು ಜಿಲ್ಲೆಯು ಜೀವಮಾನದಲ್ಲಿಯೇ ಕಂಡರಿಯಾದ ಜಲಪ್ರಳಯಕ್ಕೆ ತುತ್ತಾಗಿದ್ದು ಅತ್ಯಂತ ಸಂಕಷ್ಟ ಸ್ಥಿತಿ ಎದುರಿಸುತ್ತಿದೆ. ದೇಶದ ರಕ್ಷಣೆಗಾಗಿ ಜನರಲ್ ಕಾರ್ಯಪ್ಪ ಅವರನ್ನ ಒಳಗೊಂಡಂತೆ ಯೋಧರ ಮಹಾಪಡೆಯನ್ನೇ ನೀಡಿ ತ್ಯಾಗ ಬಲಿದಾನ, ದೇಶದ ಪ್ರೇಮಕ್ಕೆ ಸಾಕ್ಷಿ ಪ್ರಜೆಯಾಗಿರುವ ಕೊಡಗಿನ ನಮ್ಮ ಸಹೋದದರು,ಸಹೋದರಿಯರು ಸಮಸ್ತ ಕೊಡಗಿನ ಜನತೆ ಈ ಭೀಕರ ಮಳೆಯ ಪ್ರವಾಹದಿಂದ ಸಂಕಷ್ಡಕ್ಕೆ ಸಿಲುಕಿದ್ದಾರೆ, ಅವರಿಗೆ ಎಬಿವಿಪಿ ತುಮಕೂರು ಶಾಖೆವತಿಯಿಂದ ತುಮಕೂರು ನಗರದಲ್ಲಿ ಕೊಡಗಿನ ನೆರೆಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ ಮಾಡಲಾಯಿತು ಈ ಸಂಧರ್ಭದಲ್ಲಿ ಕಾರ್ಯಕರ್ತರಾದ ನಂದಿನಿ, ಹರ್ಷಿತಾ, ದರ್ಶನ, ನಂದೀಶ, ಸಿದ್ದೇಶ, ಚೇತನ, ಗಿರೀಶ, ಪಲ್ಲವಿ, ಶಿವಕುಮಾರ, ನೀಹಾರ, ಸುಶ್ಮಾ, ಮಾರುತಿ ಇತರರು ಉಪಸ್ಥಿತರಿದ್ದರು








