ಹರಪನಹಳ್ಳಿ:
ತಾಲ್ಲೂಕಿನ ದುಗ್ಗಾವತಿ ಗ್ರಾಮದಲ್ಲಿ ಮಹಿಳೆಯೊಬ್ಬರು ಸಂಶಯಾಸ್ಪದವಾಗಿ ಮೃತಪಟ್ಟಿದ್ದಾರೆ. ಪತ್ನಿಯ ಮೇಲೆ ಅತ್ಯಾಚಾರ ನಡೆಸಿ, ವಿಷವುಣಿಸಿ ಕೊಲೆ ಮಾಡಲಾಗಿದೆ ಎಂದು ಯುವಕನ ವಿರುದ್ಧ ಹಲುವಾಗಲು ಠಾಣೆಗೆ ಪತಿ ದೂರು ನೀಡಿದ್ದಾರೆ.
`ಹರಪನಹಳ್ಳಿ ತಾಲ್ಲೂಕಿನ ತುಂಬಿಗೆರೆ ಗ್ರಾಮದ ನಾಗರಾಜ (22) ನನ್ನ ಪತ್ನಿಯ ಜೊತೆ ಸ್ನೇಹ ಬೆಳೆಸಿದ್ದ. ಮನೆಗೆ ಬಂದು ಆಕೆಯ ಜೊತೆಗೆ ಮಾತನಾಡುತ್ತಿದ್ದ. ಮನೆ ಕಡೆಗೆ ಬಾರದಂತೆ ಆತನಿಗೆ ಬುದ್ಧಿಮಾತು ಹೇಳಿದ್ದೆ. ಹೀಗಿದ್ದರೂ ಆಗಸ್ಟ್ 19ರಂದು ರಾತ್ರಿ ಮನೆಗೆ ಬಂದ ನಾಗರಾಜ ನನ್ನ ಪತ್ನಿಯನ್ನು ಬಲವಂತವಾಗಿ ಬೈಕ್‍ನಲ್ಲಿ ಕೂರಿಸಿಕೊಂಡು ಹೋಗಿದ್ದ. ಮರುದಿನ ಬೆಳಿಗ್ಗೆ ದೂರವಾಣಿ ಕರೆ ಮಾಡಿದ ಆತ, ಶಿರಗಾರನಹಳ್ಳಿಯ ಕೆರೆ ಬಳಿ ನನ್ನ ಪತ್ನಿ ವಿಷಸೇವಿಸಿದ್ದಾಳೆ ಎಂದು ತಿಳಿಸಿದ್ದ. ಸ್ಥಳಕ್ಕೆ ಹೋಗಿ, ಅಸ್ವಸ್ಥಗೊಂಡಿದ್ದ ಪತ್ನಿಯನ್ನು ತೆಲಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಸ್ಪಂದಿಸದೇ ಸೋಮವಾರ ಮೃತಪಟ್ಟಿದ್ದಾಳೆ’ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
