ಗೃಹರಕ್ಷಕರ ಕುಂದುಕೊರತೆಗಳಿಗೆ ಸರ್ಕಾರ ಸ್ಪಂದಿಸುವಂತೆ ಗೃಹರಕ್ಷಕರ ಆಗ್ರಹ

ಪರಶುರಾಮಪುರ:

      ಸರ್ಕಾರ ರಾಜ್ಯದಲ್ಲಿ ಚುನಾವಣೆ-ಹಬ್ಬಹರಿದಿನಗಳ ವೇಳೆ ಪೊಲೀಸರ ಜತೆಯಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರ  ಬಹುದಿನಗಳ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಗೃಹರಕ್ಷಕರು ಸರ್ಕಾರಕ್ಕೆ ಮನಿವಿ ಮಾಡಿದ್ದಾರೆ.

      ನೆರೆ ರಾಜ್ಯಗಳಲ್ಲಿ ಗೃಹರಕ್ಷಕರಿಗೆ ನಿಯಮನಿತವಾಗಿ ಕರ್ತವ್ಯ ರೇಷನ್ ಕಾರ್ಡ್, ಉಚಿತ ಬಸ್‍ಪಾಸ್, ಪಿಎಫ್, ಪೊಲೀಸ್ ಠಾಣಾ ಕರ್ತವ್ಯ, ಮತ್ತಿತರೆ ಇಲಾಖೆಗಳ ಕರ್ತವ್ಯಕ್ಕೆ ನಿಯೋಜನೆ, ಹಾಗೂ ಮಾಸಿಕ ನಿಗಧಿತ ವೇತನವನ್ನು ನೀಡಿದಂತೆ ನಮ್ಮ ರಾಜ್ಯದ ಗೃಹರಕ್ಷಕರಿಗೂ ನೀಡಬೇಕು ಎಂದು ಪರಶುರಾಮಪುರ ಗೃಹರಕ್ಷಕ ದಳದ ಘಟಕಾಧಿಕಾರಿ ಓ ಚಿತ್ತಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಗ್ರಾಮದ ಗೃಹರಕ್ಷಕದಳದ ಘಟಕಧಿಕಾರಿಗಳ ಕಚೇರಿಯ ಆವರಣದಲ್ಲಿ ಹೋಬಳಿ ವ್ಯಾಪ್ತಿಯ ಗೃಹರಕ್ಷಕರಿಗೆ ಆಯೋಜಿಸಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

      ಇತ್ತೀಚೆಗೆ ಸರ್ಕಾರ ಗೃಹರಕ್ಷಕರನ್ನು ಚುನಾವಣಾ ಮತ್ತು ಜಾತ್ರೆ, ಹಬ್ಬ -ಹರಿದಿನಗಳ ವೇಳೆ ಬಂದೋಬಸ್ತ್ ಕರ್ತವ್ಯಗಳಿಗೆ ನಿಯೋಜಿಸುತ್ತದೆ. ಇದು ಸರಿಯಲ್ಲ ಗೃಹರಕ್ಷಕರಿಗೆ ವರ್ಷದ ಎಲ್ಲಾ ದಿನಗಳಲ್ಲಿ ಕರ್ತವ್ಯ ನೀಡಬೇಕು ಸಮಯಕ್ಕೆ ಸರಿಯಾಗಿ ವೇತನವನ್ನು ಮಂಜೂರು ಮಾಡಬೇಕು. ರೇಷನ್ ಕಾರ್ಡ್, ಉಚಿತ ಬಸ್‍ಪಾಸ್, ಶೂ, ಸಮವಸ್ತ್ರ, ಪ್ರತೀ ತಿಂಗಳೂ ಠಾಣಾ ಕರ್ತವ್ಯ, ನೀಡಬೇಕು. ಎಂದು ಗೃಹರಕ್ಷಕರು ಸರ್ಕಾರವನ್ನು ಒತ್ತಾಯಿಸಿದರು.

      ಸರ್ಕಾರ ಈಚೆಗೆ ವಿಧಾನಸಭಾ ಚುನಾವಣೆಯಲ್ಲಿ ಗೃಹರಕ್ಷಕರಿಂದ ಸೇವೆ ಪಡೆದು ಈವರೆಗೆ ವೇತನವನ್ನು ಮಂಜೂರು ಮಾಡಿಲ್ಲ ಗೃಹರಕ್ಷಕರು ಪ್ರವಾಸೋದ್ಯಮ, ರೈಲ್ವೆ, ಕೆಎಸ್‍ಆರ್‍ಟಿಸಿ, ಅಗ್ನಿಶಾಮಕ, ಪೊಲೀಸ್ ಠಾಣೆ, ಮತ್ತಿತರೆ ಕರ್ತವ್ಯಗಳಿಗೆ ನಿಯೋಜಿಸಿದ ಇಲಾಖೆ ವರ್ಷಗಳಾದರೂ ಕರ್ತವ್ಯ ನಿರ್ವಹಿಸಿದವರಿಗೆ ಗೌರವ ಧನ-ಕೆಲ ಭತ್ಯೆಗಳನ್ನು ಮಂಜೂರು ಮಾಡುವಲ್ಲಿ ಮಲತಾಯಿ ಧೋರಣೆ ತಾಳುತ್ತಿರುವುದು ಸರಿಯಲ್ಲ, ಗೃಹರಕ್ಷಕರ ಜೀವನದ ಜೊತೆ ಆಟವಾಡುತ್ತಿರತುವುದು ಯಾವ ನ್ಯಾಯ ಎಂದು ಸರ್ಕಾರವನ್ನು ಮನವಿ ಮಾಡಿದ್ದಾರೆ.

      ಗೃಹರಕ್ಷಕದಳದ ಅಧಿಕಾರಿಗಳು ಕುದಾಪುರದ ಭಾರತೀಯ ವಿಜ್ಞಾನ ಸಂಸ್ಥೆ, ಧಾರ್ಮಿಕ ದತ್ತಿ ಇಲಾಖೆಗಳ ದೇವಸ್ಥಾನಗಳು, ಮತ್ತಿತರೆ ಖಾಸಗಿ ವಲಯದ ಕಂಪನಿಯವರ ಜತೆ ಸಮಾಲೋಚಿಸಿ ಗೃಹರಕ್ಷಕರಿಗೆ ಪ್ರತೀ ತಿಂಗಳೂ (ನಿಯಮಿತವಾಗಿ) ಕರ್ತವ್ಯಕ್ಕೆ ನಿಯೋಜಿಸಬೇಕು ದಿನನಿತ್ಯದ ಗೌರವ ಧನ 380 ರೂಗಳು ನೀಡಬೇಕೆಂದು ಸರ್ಕಾರ ಆದೇಶಿಸಿದ್ದರೂ ಕೂಡ ಈವರೆಗೆ ಕೇವಲ 320 ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಇಲ್ಲವಾದರೆ ಸಂಸ್ಥೆಯಲ್ಲಿ ಕೆಲಸ ಮಾಡಲು ಯಾರೂ ಮುಂದೆ ಬರುವುದಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

      ಸಂದರ್ಭದಲ್ಲಿ ಗೃಹರಕ್ಷಕರಾದ ಜೆ ಬೀರಣ್ಣ, ಜೆ ಚಂದ್ರಣ್ಣ, ಎಂ ಎನ್ ಆಂಜನೇಯ, ಕರಿಯಣ್ಣ, ವಸಂತಕುಮಾರ, ಶಶಿಕುಮಾರ, ಚಲುಮೇಶ, ಓ ತಿಪ್ಪೇಸ್ವಾಮಿ, ಎನ್ ತಿಪ್ಪೇಸ್ವಾಮಿ, ಸುರೇಶ, ರಮೇಶ, ಮತ್ತಿತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap