ಸಂತ್ರಸ್ಥರ ನಿಧಿಗೆ 1 ಲಕ್ಷ ರೂ. ದೇಣಿಗೆ ನೀಡಿದ ರೈತ

ತುಮಕೂರು:

               ಉದ್ಯಮಿಗಳು, ವ್ಯವಹಾರಸ್ಥರು, ನಿಗದಿತ ಉತ್ತಮ ಆದಾಯ ಇರುವವರು ದೇಣಿಗೆ ನೀಡಿದರೆ ಅದೇನು ಅತಿಶಯೋಕ್ತಿ ಎನಿಸದು. ಆದರೆ ವ್ಯವಸಾಯ ಕ್ಷೇತ್ರದಲ್ಲಿರುವ ರೈತರೊಬ್ಬರು 1 ಲಕ್ಷ ರೂ. ರೂ.ಗಳನ್ನು `ಪ್ರಜಾಪ್ರಗತಿ ಕೊಡಗು ಸಂತ್ರಸ್ಥರ ಪರಿಹಾರ ನಿಧಿಗೆ’ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

               ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ಬಾಗೂರಿನ ರೈತ ಬಿ.ಎಸ್.ರುದ್ರಯ್ಯ ಎಂಬುವರು ಪ್ರಜಾಪ್ರಗತಿ ಪತ್ರಿಕಾಲಯಕ್ಕೆ ಆಗಮಿಸಿ 1 ಲಕ್ಷ ರೂ.ಗಳ ಚೆಕ್‍ನ್ನು ನೀಡಿದರು. ಟಿ.ವಿ. ಮಾಧ್ಯಮಗಳಲ್ಲಿ ದೃಶ್ಯಗಳನ್ನು ನೋಡಿದೆ. ತಡೆಯಲು ಆಗಲಿಲ್ಲ. ಅವರಿಗೆ ನನ್ನ ಕೈಲಾದ ಸಹಾಯ ಮಾಡಬೇಕೆಂದು ನಿರ್ಧರಿಸಿ ಈ ಹಣವನ್ನು ನೀಡುತ್ತಿದ್ದೇನೆ. ಅಲ್ಲಿ ಬಹಳಷ್ಟು ಜನರು ತೊಂದರೆಯಲ್ಲಿ ಸಿಲುಕಿದ್ದಾರೆ. ಅದನ್ನೆಲ್ಲಾ ನೋಡಿ ನನಗೆ ಅಳು ಬಂದಿತ್ತು. ಅದಕ್ಕಾಗಿ ಈ ರೀತಿಯ ಸಹಾಯ ಮಾಡಲು ನಿರ್ಧರಿಸಿದೆ ಎನ್ನುತ್ತಾರೆ ರುದ್ರಯ್ಯ ಅವರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link