ಹುಳಿಯಾರು:
ಗ್ರಾಮೀಣ ಪ್ರದೇಶದಲ್ಲಿ ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಜಾಗರೂಕತೆ ವಹಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯ ರಘು ಅವರು ಸಲಹೆ ನೀಡಿದರು.
ಹುಳಿಯಾರು ಹೋಬಳಿ ಹೋಯ್ಸಲಕಟ್ಟೆ ಗ್ರಾಪಂ ವ್ಯಾಪ್ತಿಯ ಲಕ್ಕೇನಹಳ್ಳಿಯಲ್ಲಿ ಹುಳಿಯಾರು ಪಟ್ಟಣದ ಸಾಕ್ಷ್ಯ ಕಣ್ಣು ಮತ್ತು ದಂತ ಆಸ್ಪತ್ರೆ ವತಿಯಿಂದ ನಡೆದ ಉಚಿತ ನೇತ್ರಾ ಹಾಗೂ ದಂತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಣ್ಣ– ಪುಟ್ಟ ತೊಂದರೆಗಳಾದರೆ ನಿರ್ಲಕ್ಷ್ಯ ವಹಿಸಿ ಬಿಡುತ್ತೇವೆ. ಆದರೆ ಮುಂದೆ ದೊಡ್ಡ ಮೊತ್ತದ ದಂಡ ತೆರಬೇಕಾಗುತ್ತದೆ. ಆರಂಭದಲ್ಲಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದರೆ ಸುಲಭವಾಗುತ್ತದೆ ಎಂದರು.
ಉಪನ್ಯಾಸಕ ನರೇಂದ್ರಬಾಬು ಮಾತನಾಡಿ, ಹಲವಾರು ಆಸ್ಪತ್ರೆಗಳ ನುರಿತ ವೈದ್ಯರು ಗ್ರಾಮೀಣ ಭಾಗದಲ್ಲಿ ದೊರಕುವುದರಿಂದ ಪಟ್ಟಣಗಳಿಗೆ ಹೋಗುವ ತೊಂದರೆ ತಪ್ಪುತ್ತದೆ ಎಂದರು.ಆಸ್ಪತ್ರೆಯ ಪವನ್ ಕುಲಕರ್ಣಿ, ಸಿಬ್ಬಂದಿ ನವೀನ್, ಇಮ್ರಾನ್, ಶ್ರುತಿ, ನಿಶ್ಚಿತಾ ಇದ್ದರು. ಸುಮಾರು 150 ಮಂದಿ ಶಿಬಿರದ ಪ್ರಯೋಜನ ಪಡೆದರು.