ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನ ಚಿಕ್ಕಹೇಡಿಗೆಹಳ್ಳಿ ಗ್ರಾಮದ ರಂಗಸ್ವಾಮಯ್ಯ ಎಂಬುವರ ತೋಟದ ಮನೆಯಲ್ಲಿ ಕುರಿ ರೊಪ್ಪಕ್ಕೆ ನುಗ್ಗಿದ ಚಿರತೆ 18 ಕರಿಗಳನ್ನು ದಾಳಿ ಮಾಡಿದೆ. ಗುರುವಾರ ಸಂಜೆ 4ಗಂಟೆಯಲ್ಲಿ ರೊಪ್ಪಕ್ಕೆ ನುಗ್ಗಿದೆ. ಕುರಿಯ ಮಾಲಿಕ ರಂಗಸ್ವಾಮಯ್ಯ ಮಾತನಾಡಿ ಈ ಕುರಿಗಳನ್ನು ನಂಬಿ ನಮ್ಮ ಮನೆಯವರು ಜೀವನ ಸಾಗಿಸುತ್ತಿದ್ದವು ಆದರೆ ಇಂದು ಚಿರತೆ ದಾಳಿ ಮಾಡಿದೆ ಸುಮಾರು 1ಲಕ್ಷ ನಷ್ಠ ಉಂಟಾಗಿದೆ. ಸಂಬಮಧ ಪಟ್ಟ ಅಧಿಕಾರಿಗಳು ಸ್ಥಳ ಪರೀಶಿಲಿಸಿ ಪರಿಹಾರ ಕೊಡಬೇಕು ಎಂದರು.
ಪದೇ ಪದೇ ಕಾಡು ಪ್ರಾಣಿಗಳು ಊರಿನ ಒಳಗಡೆ ಬಂದು ದಾಳಿ ಮಾಡುತ್ತಿದೆ. ಸಂಬಂಧ ಪಟ್ಟ ಅರಣ್ಯಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಆದರೆ ಅಧಿಕಾರಿಗಳ ಬೇಜವಬ್ದಾರಿ ತನದಿಂದ ಇಂತಹ ಘಟನೆಗಳು ನಡೆಯುತ್ತಿವೆ ಇನ್ನು ಮುಂದಾದರೂ ಅರಣ್ಯಧಿಕಾರಿಗಳು ಸಂಜೆ ವೇಳೆ ಬೀಟು ಬರಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ತಾಲ್ಲೂಕ್ ಪಂಚಾಯಿತಿ ಸದಸ್ಯೆ ಕರಿಯಮ್ಮ ರಮೇಶ್ , ಗ್ರಾಮ ಪಂಚಾಯಿತಿ ಸದಸ್ಯ ತುಕರಾಮ್ , ಅರಣ್ಯಧಿಕಾರಿಗಳಾ ಬಸವರಾಜು , ಬೀಮ್ ರಾವ್ ಬೇಟಿ ನೀಡಿ ಪರಿಶೀಲಿಸಿದ್ದಾರೆ.