ಸೋಂಪುರ ಸಹಕಾರ ಸಂಘಕ್ಕೆ 12 ನಿರ್ದೇಶಕರ ಆಯ್ಕೆ

ಕೊರಟಗೆರೆ

               ಸೋಂಪುರದ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯು ವಿಧಾನಸಭಾ ಚುನಾವಣೆ ರೀತಿಯೆ ನಡೆಯಿತು. ಬಹಳ ಕುತೂಹಲ ಕೆರಳಿಸಿದ ಚುನಾವಣೆಯಲ್ಲಿ 12 ಜನ ನಿರ್ದೇಶಕರಾಗಿ ಜಯಭೇರಿ ಬಾರಿಸಿದ್ದಾರೆ.

                ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಅಕ್ಕಿರಾಂಪುರ ಗ್ರಾಪಂಯ ಸೋಂಪುರದಲ್ಲಿ ಗುರುವಾರ ನಡೆದÀ ವಿಎಸ್‍ಎಸ್‍ಎನ್ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರಕ್ಕೆ 975 ಮತದಾರರಲ್ಲಿ 823 ಜನ ಮತದಾನ ಮತ್ತು ಸಾಲಗಾರರು ಅಲ್ಲದ ಕ್ಷೇತ್ರಕ್ಕೆ 434 ಮತದಾರರಲ್ಲಿ 269 ಜನ ಮತದಾನ ಮಾಡಿ 12 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

                 ಸಾಲಗಾರರ ಕ್ಷೇತ್ರದಿಂದ ಎಸ್‍ಸಿಯಲ್ಲಿ ಶ್ರಿರಾಮುಲು ನಾಯ್ಕ 214 ಮತ ಪಡೆದು ಆಯ್ಕೆಯಾದರೆ, ಎಸ್‍ಟಿಯಲ್ಲಿ ಜಿ. ಲಾವಣ್ಯ 156 ಮತ ಪಡೆದು ಆಯ್ಕೆಯಾಗಿದ್ದಾರೆ. ಒಬಿಸಿ ಎ ಯಲ್ಲಿ ಎಸ್. ಹನುಮಾನ್ 475 ಮತ ಹಾಗೂ ಎ.ಎನ್ ಮಂಜುನಾಥ್ 285 ಮತ ಪಡೆದು ಆಯ್ಕೆಯಾಗಿದ್ದಾರೆ. ಮಹಿಳಾ ಮೀಸಲಾತಿಯಲ್ಲಿ ಶಿವರಾಜಮ್ಮ 280 ಮತ ಮತ್ತು ಬಿ.ಎಂ ಮಂಗಳ 245 ಮತ ಪಡೆದು ಜಯಗಳಿಸಿದ್ದಾರೆ.

                ಸಾಮಾನ್ಯ ಕ್ಷೇತ್ರದಲ್ಲಿ ಆರ್.ಎಂ ಈಶಪ್ರಸಾದ್ 414, ರಾಜಶೇಖರ್ 278, ಎ.ಎನ್ ನವೀನ್‍ಕುಮಾರ್ 215, ಟಿ.ಎಚ್ ಕೃಷ್ಣಮೂರ್ತಿ 208, ಆರ್.ಎಸ್ ಬಸವರಾಜು 208 ಮತ ಪಡೆದು ಜಯಶೀಲರಾಗಿದ್ದಾರೆ ಹಾಗೂ ಸಾಲಗಾರರು ಅಲ್ಲದ ಕ್ಷೇತ್ರದಿಂದ ಕೆ.ಜಿ ಪ್ರಕಾಶ್ 93 ಮತ ಪಡೆದು ಜಯಗಳಿಸಿದ್ದಾರೆ. ಒಟ್ಟು 32 ಜನ ಅಭ್ಯರ್ಥಿಗಳಲ್ಲಿ 12 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಯು. ರಾಮಯ್ಯ ಘೋಷಿಸಿದ್ದಾರೆ.

                ಜಿದ್ದಾ ಜಿದ್ದಿಯಿಂದ ನಡೆದ ಚುನಾವಣೆಯಲ್ಲಿ ಜಯಶೀಲರಾದ ನಿರ್ದೇಶಕರನ್ನು ಅಭಿನಂದಿಸಿ, ಶೀಘ್ರವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ನಡೆಸಲಾಗುವುದು ಎಂದು ಅವರು ತಿಳಿಸಿದರು. ಅಧ್ಯಕ್ಷರ ಆಯ್ಕೆಗೂ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದ್ದು, ಯಾರು ಅಧ್ಯಕ್ಷರಾಗ್ತಾರೆ ಎಂಬ ಕುತೂಹಲ ಹೆಚ್ಚಿದೆ.

Recent Articles

spot_img

Related Stories

Share via
Copy link