ಮಹಿಳಾ ಆರೋಗ್ಯ ಸುರಕ್ಷಾ ಕಾರ್ಯಕ್ರಮ

ಮಿಡಿಗೇಶಿ

                ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಶ್ರೀದೇವಿ ಆಸ್ಪತ್ರೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಮಧುಗಿರಿ ಪಾ. ಆ ಕೇಂದ್ರ ಸಂಯುಕ್ತಾಶ್ರಯದಲ್ಲಿ ಮಹಿಳಾ “ ಮಹಿಳಾ ಆರೋಗ್ಯ ಸುರಕ್ಷಾ ಕಾರ್ಯಕ್ರಮ

                 ಪಾಥಮಿಕ ಆರೋಗ್ಯಕೇಂದ್ರ ಐ ಡಿ ಹಳ್ಳಿ ದಿನಾಂಕ 21/0/2018 ರಿಂದ ಹಮ್ಮಿಕೊಳ್ಳಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಮಹಿಳೆಯರಲ್ಲಿ ಕಂಡುಬರುವ Cervical cancer, Breast Cancer,Mouth cancer, STI, RTI ಮುಂತಾದ ರೋಗಗಳ ಬಗ್ಗೆ ಅರಿವುಮೂಡಿಸಲಾಯಿತು. ಮತ್ತು ಇ ಗರ್ಭತಂಡ ಕ್ಯಾನ್ಸರ್ ರೋಗವನ್ನು ತ್ವರಿತವಾಗಿ ರೋಗ ಹರಡುವ ಮುಂಚಿತವಾಗಿ ಪತ್ತೆಹಚ್ಚುವುದರಿಂದ ಶೇಕಡಾ50% ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದೆಂದು ತಿಳಿಸಿದರು.ಪ್ರತಿಯೊಬ್ಬ ಮಹಿಳೆಯು ಪ್ರತಿ 3 ವರ್ಷಕೊಮ್ಮೆ ಗರ್ಭತಂಡ ಕ್ಯಾನ್ಸರ್ ಬಗ್ಗೆ ತಪಾಸಣೆ ಮಾಡಿಸಿಕೊಳ್ಳಲು ತಿಳಿಸಲಾಯಿತು. ಸಾಮಾನ್ಯವಾಗಿ 21 ವರ್ಷದಿಂದ 65 ವರ್ಷ ಒಳಗಿನ ಮಹಿಳೆಯರು ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.

                  ಈ ಒಂದು ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರಿಗೂ ರಕ್ತದ ಒತ್ತಡ ಮತ್ತು ಸಕ್ಕರೆ ಕಾಯಿಲೆಯ ತಪಾಸಣೆ ಮಾಡಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಐ ಡಿ ಹಳ್ಳಿ ಗ್ರಾಮ ಪಂಚಾಯಿತಿ ಅದ್ಯಕ್ಷರಾದ ಶ್ರೀಮತಿ ಪ್ರಮೀಳಾ ಸಿದ್ದಲಿಂಗಯ್ಯನವರು, ಶ್ರೀದೇವಿ ಆಸ್ಪತ್ರೆಯ ಸ್ತ್ರೀರೋಗ ತಜ್ಞವೈದ್ಯರು, ಐ ಡಿ ಹಳ್ಳಿ ಪ್ರಾ.ಆ ಕೇಂದ್ರ ವೈಧ್ಯರಾದ ಡಾ|| ದೀಪಕ್ , ಡಾ|| ರಾಜೇಂದ್ರ, ತಾಲ್ಲೂಕು ಕಛೇರಿಯಿಂದ ಮಧು, ಆಸ್ಪತ್ರೆಯ ಸಿಬ್ಬಂದಿ,ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಐ ಡಿ ಹಳ್ಳಿ ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link