ಪುರಸಭಾ ಚುನಾವಣೆ: ಅಂತಿಮ ಕಣದಲ್ಲಿ 73 ಮಂದಿ

ಚಿಕ್ಕನಾಯಕನಹಳ್ಳಿ

                    ಪಟ್ಟಣದ ಪುರಸಭೆಯ 23 ವಾರ್ಡ್‍ಗೆ ನಡೆಯುವ ಚುನಾವಣೆಗೆ 79 ಮಂದಿ ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ 2ನಾಮಪತ್ರಗಳು ತಿರಸ್ಕøತಗೊಂಡಿದ್ದವು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಆ.23ರಂದು 4 ಜನ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದರಿಂದ ಚುನಾವಣಾ ಅಂತಿಮ ಕಣದಲ್ಲಿ 73 ಮಂದಿ ಉಳಿದಿದ್ದಾರೆ.

                      ಕಾಂಗ್ರೆಸ್ ಪಕ್ಷದಿಂದ 23 ಅಭ್ಯರ್ಥಿಗಳು, ಜೆಡಿಎಸ್ ಪಕ್ಷದಿಂದ 22 ಹಾಗೂ ಬಿಜೆಪಿ ಪಕ್ಷದಿಂದ 21 ಅಭ್ಯರ್ಥಿಗಳು, ಬಿಎಸ್‍ಪಿ ಪಕ್ಷದ ಒಬ್ಬರು ಹಾಗೂ ಆರು ಮಂದಿ ಪಕ್ಷೇತರರು ಕಣದಲ್ಲಿ ಉಳಿದಿದ್ದಾರೆ.

                       ವಾಪಸ್ ಪಡೆದವರು: 14 ವಾರ್ಡ್‍ನಿಂದ ಜೆಡಿಎಸ್‍ನಲ್ಲಿ ನಾಮಪತ್ರ ಸಲ್ಲಿಸಿದ್ದ ಸಿ.ಬಿ.ರೇಣುಕಸ್ವಾಮಿ, 19 ನೇವಾರ್ಡ್ ಪಕ್ಷೇತರರಾಗಿ ಸ್ಪರ್ಧಿಸಿದ್ದ ಆಶಾ ಹಾಗೂ 21ನೇ ವಾರ್ಡ್‍ನಿಂದ ಇಬ್ಬರು ಪಕ್ಷೇತರರಾಗಿ ಸ್ಪರ್ಧಿಸಿದ್ದು ಮಲ್ಲಿಕಾರ್ಜುನಯ್ಯ ಹಾಗೂ ಪಿಗ್ಮಿ ನರಸಿಂಹಮೂರ್ತಿ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ.

                        ಪಕ್ಷೇತರರಾಗಿ ಟಿ.ಪ್ರೇಮ, ಮಂಜುನಾಥ್, ರೇಣುಕಪ್ರಸಾದ್, ಸಿ.ಎಸ್.ಸಿದ್ದರಾಮಯ್ಯ, ಅಬ್ದುಲ್‍ಸಲಾಂ, ಎಸ್.ಕೆ.ಅನಂತಲಕ್ಷ್ಮೀ ಸ್ಪರ್ಧಿಸಿದ್ದಾರೆ.