ತಿಪಟೂರು
ತಿಪಟೂರಿನಿಂದ ಎಡೆಯೂರು ರಾಜ್ಯಹೆದ್ದಾರಿಯಲ್ಲಿ ಹೊಸದಾಗಿ ಅಳವಡಿಸಿರುವ ಸೂಚನಾಫಲಕಗಳು ಸವಾರರಿಗೆ ಮಾರ್ಗತೋರಿಸಿ ದಿಕ್ಕು ತಪ್ಪಿಸಿ ಅಪಾಯಕ್ಕೆ ದಾರಿಮಾಡಿಕೊಡುತ್ತಿವೆ.
ಈ ಮಾರ್ಗದಲ್ಲಿ ಹೆಡಗರಹಳ್ಳಿ ಸರ್ಕಲ್ ಹತ್ತಿರ ಚನ್ನರಾಯಪಟ್ಟಣ ಹಾಗೂ ತುರುವೇಕೆರೆಗೆ ರಸ್ತೆ ವಿಭಜಕದ ಬಳಿ ಯಾವುದೇ ಸೂಚನಾಫಲಕವನ್ನು ಹಾಕಿಲ್ಲ, ರಸ್ತೆ ತಿರುವಿದ್ದರು ನೇರವಾಗಿದೆ ಎಂದು ಸೂಚನಾಫಲಕವನ್ನು ಅಳವಡಿಸಿದ್ದಾರೆ. ಇವುಗಳಲ್ಲಿ ಕೆಲವು ಅಂದರೆ ಎನ್.ಮೇಲನಹಳ್ಳಿ, ಕನ್ನುಘಟ್ಟದ ಬಳಿ ಕೂಡು ರಸ್ತೆಯಿದ್ದು ಇಲ್ಲಿ ಕೂಡುರಸ್ತೆಯ ಸೂಚನೆಯ ಬದಲಿಗೆ ತಿರುವಿದೆ ಎಂಬ ಸೂಚನಾಫಲಕವನ್ನು ಅಳವಡಿಸಿದ್ದು, ಈ ಸೂಚನಾಫಲಕಗಳು ಈ ರಸ್ತೆಯಲ್ಲಿ ಸಂಚರಿಸುವವರಿಗೆ ಅಪಾಯವುಂಟುಮಾಡುವ ಸಂಭವವಿದ್ದು ಕೂಡಲೇ ಇವುಗಳನ್ನು ಬದಲಾಯಿಸಿ ಸರಿಯಾದ ಸೂಚನಾಫಲಕಗಳನ್ನು ಅಳವಡಿಸಬೇಕೆಂದು ವಾಹನ ಸವಾರರು ಒತ್ತಾಯಿಸಿದ್ದಾರೆ.