ಅಗತ್ಯ ದಾಖಲೆ ಸಲ್ಲಿಸಿದರೆ ಯೋಜನೆ ಅನುಷ್ಠಾನ: ಪೌರಾಯುಕ್ತರು

ಹರಿರಹ:

          ವಸತಿ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳು ಮನೆ ನಿರ್ಮಾಣದ ಅನುದಾನ ಪಡೆಯಲು ಆದಷ್ಟು ಬೇಗ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕೆಂದು ನಗರಸಭೆ ಪೌರಾಯುಕ್ತೆ ಎಸ್.ಲಕ್ಷ್ಮಿ ಹೇಳಿದರು.

          ವಿವಿಧ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳು ಗುರುವಾರ ನಗರಸಭೆ ಪೌರಾಯುಕ್ತರನ್ನು ಬೇಟಿಯಾಗಿ ಆದಷ್ಟು ಬೇಗ ಅನುದಾನ ಮಂಜೂರು ಮಾಡಲು ಕೋರಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಎಸ್.ಲಕ್ಷ್ಮಿ ದೇವರಾಜ ಅರಸ್ ವಸತಿ ಯೋಜನೆಯಡಿ ವಸತಿ ರಹಿತ ನೇಕರಾರರು ಹಾಗೂ ಹಮಾಲರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ವಿಶೇಷ ವರ್ಗವಾದ ಬೇಡಿಕೆ ಪಟ್ಟಿಯ ರೀತಿ ಒಟ್ಟು 176 ಫಲಾನುಭವಿಗಳನ್ನು ಜಿಲ್ಲಾ ಸಮಿತಿ ಆಯ್ಕೆ ಮಾಡಿ, ಗುರಿ ನಿಗಧಿಪಡಿಸಲಾಗಿದೆ.

          ನಿಗಧಿಪಡಿಸಿದ ಗುರಿ ಅನ್ವಯ ಫಲಾನುಭವಿಗಳು ಪ್ರಸಕ್ತ ಸಾಲಿನ ಖಾತಾ ಉತಾರ, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ನಕಲು, ಆಧಾರ್ ಕಾರ್ಡ್, ಕುಟುಂಬ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಮತ್ತಿತರೆ ದಾಖಲೆಗಳನ್ನು ಆದಷ್ಟು ಬೇಗ ಸಲ್ಲಿಸಿದರೆ ಅನುದಾನ ನೀಡಲಾಗುವುದು ಎಂದರು.

          ನಂತರ ಮಾತನಾಡಿದ ನೇಕಾರ ಸಮಿತಿ ಅಧ್ಯಕ್ಷ ಹೆಚ್.ಕೆ.ಕೊಟ್ರಪ್ಪ ಮಾತನಾಡಿ, ಅರ್ಜಿ ಸಲ್ಲಿಸಿದ ಎಲ್ಲರೂ ಫಲಾನುಭವಿಗಳಾಗಿ ಆಯ್ಕೆಯಾಗಿರುವುದು ನಮ್ಮೆಲ್ಲರ ಸೌಭಾಗ್ಯ. ಪೌರಾಯುಕ್ತರು ಸೂಚಿಸಿದಂತೆ ಅಗತ್ಯ ದಾಖಲೆಗಳನ್ನು ಎಲ್ಲರೂ ಸಕಾಲಕ್ಕೆ ಸಲ್ಲಿಸಬೇಕು. ಕಟ್ಟಡ ಪರವಾನಿಗೆಯನ್ನೂ ಸಹ ಪಡೆದು ಸಲ್ಲಿಸಬೇಕು ಎಂದರು.

          ನೇಕಾರ ಹಾಗೂ ಹಮಾಲರ ಸಂಘದ ಫಲಾನುಭವಿಗಳು ಖಾತಾ ಉತಾರ, ಕಟ್ಟಡ ಪರವಾನಿಗೆ ಮುಂತಾದ ದಾಖಲೆಗಳನ್ನು ಅದಷ್ಟು ಶೀಘ್ರ ನೀಡಬೇಕು. ಅಲ್ಲದೆ ಅನುದಾನವನ್ನೂ ಸಹ ಆದಷ್ಟು ಬೇಗ ಬಿಡುಗಡೆ ಮಾಡಿ, ಕಟ್ಟಡ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದ್ದಕ್ಕೆ ಪೌರಾಯುಕ್ತೆ ಲಕ್ಷ್ಮಿ ಸಮ್ಮತಿಸಿದರು.

          ನಗರಸಭೆ ಅಧ್ಯಕ್ಷೆ ಸುಜಾತಾ ರೇವಣಸಿದ್ದಪ್ಪ ಮಾತನಾಡಿ, ಫಲಾನುಭವಿಗಳು ಎಷ್ಟು ಬೇಗ ದಾಖಲೆ ಸಲ್ಲಿಸುವರೋ ಅಷ್ಟು ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು. ಫಲಾನುಭವಿಗಳು ಈ ಯೋಜನೆ ಸದ್ಬಳಕೆ ಮಾಡಿಕೊಂಡು ಸುಸಜ್ಜಿತ ಮನೆ ನಿರ್ಮಿಸಿಕೊಳ್ಳಬೇಕೆಂದು ಕರೆ ನೀಡಿದರು.

           ನಗರಸಭೆ ಸದಸ್ಯರಾದ ಎಸ್.ಎಂ.ವಸಂತ್, ಇಂಜಿನಿಯರ್ ಮಾಲತೇಶ್, ಮುಖಂಡ ಬಿ.ರೇವಣಸಿದ್ದಪ್ಪ, ಫಲಾನುಭವಿಗಳಾದ ಕುಬೇರಪ್ಪ ಗಡಾದ್, ಮಂಜುನಾಥ್ ಅಗಡಿ, ರೇವಣಸಿದ್ದಪ್ಪ ಚಾಕಣಿ, ಜಯ್ಯಮ್ಮ ಅಗಡಿ, ರಾಧಾ ರಮೇಶ್, ಲಕ್ಷ್ಮಮ್ಮ ಮಾಂತಾ ಮತ್ತಿತರರಿದ್ದರು.

Recent Articles

spot_img

Related Stories

Share via
Copy link