ಹರಿಹರ
ನಗರದ ಗೆಳಯರ ಬಳಗ(ಫ್ರೆಂಡ್ಸ್ ಗ್ರೂಪ್)ದವರಿಂದ ಕೊಡಗು ಜಿಲ್ಲೆಯಲ್ಲಿ ಕಳೆದ 15ದಿನಗಳಿಂದ ಅತಿಯಾಗಿ ಮಳೆಯಾಗಿ ಪ್ರವಾಹ ಉಂಟಾಗಿ ಅಲ್ಲಿನ ನಿವಾಸಿಗಳು ನೆರೆ ಹಾವಳಿಯಿಂದ ಸಂಪೂರ್ಣ ನಿರಾಶ್ರಿತರಾಗಿದ್ದು, ಅವರುಗಳಿಗೆ ನಮ್ಮ ಬಳಗದ ವತಿಯಿಂದ ಕೈಲಾದ ಸಹಾಯ ಮಾಡುವ ಇಚ್ಚೆಯಿಂದ ಹರಿಹರ ನಗರದಲ್ಲಿ ಅವಶ್ಯಕ ವಸ್ತುಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿದ್ದು, ಸುಮಾರು 60ಸಾವಿರ ರೂ.ಗಳಷ್ಟು ವಸ್ತುಗಳನ್ನು ಕೊಡಗು ಜಿಲ್ಲಾಧಿಕಾರಿಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದ್ದು, ಇಂದು ವಾಹನದ ಮುಖಾಂತರ ತಲುಪಿಸಲಾಗುವುದು ಎಂದು ಬಳಗದ ವತಿಯಿಂದ ಹಾಲಯ್ಯ ಹಿರೇಮಠರವರು ತಿಳಿಸಿದರು.
ಅವರು ಗುರುವಾರದಂದು ನಗರದ ರಚನಾ ಕ್ರೀಡಾಟ್ರಸ್ಟ್ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಮ್ಮ ಬಳಗದ ವತಿಯಿಂದ ಟವೆಲ್, ಪ್ಯಾಂಟ್, ಶರ್ಟ್, ಟೀ ಶರ್ಟ್, ಸೀರೆಗಳು, ನೈಟಿಗಳು, ಲೇಡಿಸ್ ಡ್ರಸ್, ಚೂಡಿದಾರ್, ಬೆಡ್ಸೀಟ್ ಮತ್ತು ಆಹಾರ ಸಾಮಾಗ್ರಿಗಳಾದ ಅಕ್ಕಿ, ಟೂತ್ ಪೇಸ್ಟ್, ಟೂತ್ ಬ್ರಾಸ್, ನೋವಿನ ಎಣ್ಣೆ, ಕ್ರೀಮ್, ಬಿಸ್ಕತ್ ಇತರೆ ಸಾಮಾಗ್ರಿಗಳನ್ನು ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರುದ್ರೇಶ್, ಸಿದ್ದೇಶ್, ಜಗದೀಶ್, ಗಜೇಂದ್ರಗೌಡ್, ರಾಘು, ವಿಶ್ವನಾಥ್, ಗಿರೀಶ್ ಮುಂತಾದವರು ಉಪಸ್ಥಿತರಿದ್ದರು.