ಉಜ್ಜಯಿನಿ ಲಿ. ಸಿದ್ದಲಿಂಗ ಜಗದ್ಗುರುಗಳವರ ಪುರಾಣ ಪ್ರವಚನ ಕೇಳೋದೆ ಒಂದು ವೈಭೋಗ

ಉಜ್ಜಿನಿ

     ಎಲ್ಲರ ಮನ ಮಂದಿರದ ನಂದದೀಪ ಜಗದ್ಗುರುಗಳು ಆಡಿದ ಮಾತು ನಡೆದ ದಾರಿ ಭೋದಿಸಿದ ಧರ್ಮಾಮೃತ ಮರೆಯಲಾಗದು ಅಂಗ ಗುಣಗಳನ್ನು ದೂರ ಮಾಡಿ ಲಿಂಗ ಗುಣ ಸಂಪನ್ನರಾದ ಜಗದ್ಗುರುಗಳ ಸಾಧನೆ ಸಿದ್ದಿ ಸಣ್ಣದಲ್ಲ ಇವರೊಂದು ವ್ಯಕ್ತಿಯಲ್ಲ ಮಹಾನ್ ಚೇತನÀ ಶಕ್ತಿ ನೋವು ನುಂಗಿ ಸಮಾಜಕ್ಕೆ ನಲಿವನ್ನು ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಪಾದ ವಿನ್ಯಾಸದಿಂದ ನಾಡು, ನೆಲ, ಜಲ, ಪುನೀತ ಲಿ. ಉಜ್ಜನಿ ಸಿದ್ದಲಿಂಗ ಜಗದ್ಗುರುಗಳವರು.
       ಲಿ. ಸಿದ್ದಲಿಂಗ ಜಗದ್ಗುರುಗಳವರ ಜನನ : ಶ್ರೀ ಮತ್ಪರ ಶಿವನ ಲೀಲಾನಾಟಕ ರಂಗಸ್ಥಳವಾದ ಈ ಪುಣ್ಯ ಭೂಮಿಯೊಳು ಪ್ರಸಿದ್ದವಾದ ಕರ್ನಾಟಕ ರಾಜ್ಯದ ಚಿತ್ರದುರ್ಗದ ಜಿಲ್ಲೆಯ ಜಗಳೂರು ತಾಲೂಕಿನ ಬಂಗಾರ ನಾಯಕನಹಳ್ಳಿ ಎಂಬ ಚಿಕ್ಕ ಗ್ರಾಮವು ಕೆಲವು ಶಿವಭಕ್ತ ಜನರು ಇನ್ನುಳಿದ ಜನಾಂಗದಿಂದಲೂ ದೇವಾಲಯಗಳಿಂದಲೂ ಶೋಭಿಸುತ್ತಿರಲು ಆ ಗ್ರಾಮದಲ್ಲಿ ಹಿರಿಯ ಮಠದ ವೀರ ಮಹೇಶ್ವರ ವಂಶದೊಳು ಜನಿಸಿ ಶ್ರೀಜಗದ್ಗುರುಗಳು ಧಾರುಕ ಶಿವಾಚಾರ್ಯ ಶಾಖಾನುವರ್ತಿಗಳು ಆಚಾರಶೀಲರು ಶಿವ ಪೂಜಾನಿಷ್ಟರು ಸುಜ್ಞಾನಿಗಳು ಅದಂಥ ವೇದಮೂರ್ತಿ ಚೆನ್ನಬಸವರ್ಯರೆಂಬವರಿಗೆ ಪವಿತ್ರ ಚರಣೆಯಿಂದ, ಸದ್ಗುಣ ಮಂಡಿತಳೊ ಪತಿ ಭಕ್ತಿ ಪರಿಯಣಳೂ ಎನಿಸಿದ ಗುರುಸಿದ್ದಾಂಬ ಎಂಬ ಸಾದ್ವೀಮಣಿಯ ಧರ್ಮ ಪತ್ನಿಯಾಗಿದ್ದಳು ಈ ದಂಪತಿಗಳಿಗೆ ಮೊದಲು ಮರುಳಸಿದ್ದಾರ್ಯನೆಂಬ ಒರ್ವ ಮಗನು ಜನಿಸಿದನು. ಮುಂದೆ ಕೆಲವು ದಿವಸಗಳು ಕಳೆದರು ಪುನಃ ಸಂತಾನ ಸೂಚನೆಯಾಗದೆ ಹೋಗಲು ಈ ದಂಪತಿಗಳು ಇನ್ನೊಂದು ಸಂತಾನವಾಗಲಿಲ್ಲವೆಂದು ಬಹು ಚಿಂತಾಕ್ರಂತರಾಗಿದ್ದರು. ಹೀಗಿರಲು ಶ್ರೀ ಗುರುಸಿದ್ದಮ್ಮ ಶ್ರೀ ಸಿದ್ದಲಿಂಗ ಜಗದ್ಗುರುಗಳವರ ತಾಯಿಯಾಗಿದ್ದರು. ಗುರುಸಿದ್ದಮ್ಮನವರು ತಮ್ಮ ಕುಲ ಗುರು ಮೂರ್ತಿಯಾದ ಶ್ರೀ ಮದ್ ಉಜ್ಜಯಿನಿ ಜಗದ್ಗುರು ಮರುಸಿದ್ದೇಶ್ವರನನ್ನು ಹಗಲಿರುಳು ಧ್ಯಾನಿಸುತ್ತಾ ಸ್ಥಾನ ಶಿವಾರ್ಚನೆ ಪತಿ ಸೇವಾತತ್ಪರಳಾಗಿ ಅತಿಥಿ ಅಭ್ಯಾಗತರನ್ನು ಸಂತಯಿಸುತ್ತಾ 3-4 ವರ್ಷಗಳವರೆಗೂ ಬಹು ನಿಷ್ಟೆಯಿಂದ ವ್ರತವನ್ನು ಆಚರಣೆ ಮಾಡುತ್ತಾಳೆ. ಗುರುಸಿದ್ದಮ್ಮ ಈ ಸಾದ್ವೀಮಣಿಯ ಪವಿತ್ರ ಭಾವಕ್ಕೂ, ವೀರ ವ್ರತಕ್ಕೂ ಮೆಚ್ಚಿದ ಶ್ರೀ ದಾರುಕ ಗುರುದೇವನ ಕೃಪಕಟಾಕ್ಷದಿಂದ ಗುರುಸಿದ್ದಮ್ಮರವರಿಗೆ ಒಂದು ದಿವಸ ಶುಭಾ ಸ್ವಪ್ನ ತೋರಿತು. ಈ ಶುಭ ಸೂಚನೆಯಿಂದ ಗರ್ಭದಾರಣೆಯಾಗಿ ದಿವ್ಯ ಶರೀರ ಕ್ರಾಂತಿಯಿಂಧ ಶೋಭಿಸಿದಳು. ಒಂದೊಂದೇ ಭಯಕೆಗಳು ಉಂಟಾದವು ಪವಿತ್ರವಾದ ವಿಭೂತಿಯನ್ನು ಸ್ವೀಕರಿಸುವುದು ಇಷ್ಟ್ರಲಿಂಗ ಪೂಜಾ ಮಾಡುವುದು. ಸದ್ಗೋಷ್ಠಿಯಲ್ಲಿರುವುದು ದಿವ್ಯ ತೇಜೋಮೂರ್ತಿ ನೆಲಸಿರುವುದರಿಂದ ಸರ್ವಾಂಗವೂ ಶರತ್ಕಾಲದ ಮೇಘದಂತೆ ಶುಭಕಾಂತಿಯಿಂದ ರಂಜಿಸಿತು. ಮಂದಾ ಗಮನವೂ ಮೃದು ಮದುರವಾದ ನುಡಿಗಳೂ ಪೂರ್ಣ ಚಂದ್ರನಂತೆ ಮುಖ ಕಮಲವು ಜನರಿಗೆ ಅತ್ಯಂತ ಮನೋಹರವಾಗಿ ತೋರುತ್ತಿದ್ದವು. ಹೀಗಿರುವಾಗ 8ನೇಯ ತಿಂಗಳಲ್ಲಿ ವೀರಶೈವ ಧರ್ಮಶಾಸ್ತ್ರದ 
“ವೀರಶೈವ ಸ್ಥಿತಾನಾಂತು ಮಾಸೆ ಗರ್ಭಾಷ್ಟಮೆ ಗುರು||
“ಪಂಚಸೂತ್ರ ಕೃತಂ ಲಿಂಗಂ|

“ಧಾರಯೇದ್ವಿದಿಮೃಭಂ||

ಎಂಬ ನಿಯಮಕ್ಕನು ಸರಿಸಿ ಮಹೇಶ್ವರ ಜಂಗಮ ಮೂರ್ತಿಯಿಂದ ಗರ್ಭಕ್ಕೆ ಲಿಂಗಧಾರಣವನ್ನು ವಿದ್ಯುಕ್ತವಾಗಿ ಕೆಲಸ ಕಾರ್ಯವನ್ನು ನಡೆಸುತ್ತಾರೆ. ಆನಂತರದಲ್ಲಿ ಒಂಬತ್ತು ತಿಂಗಳು ಪೂರ್ಣವಾದವು ಶ್ರೀಮದ್ ಜಗದ್ಗುರು ಧಾರುಕಾ ಶಿವಾಚಾರ್ಯ ಅವತಾರಿಯಾದ ಮಹಾ ಮೂರ್ತಿಯು ಶ್ರೀ ಶಾಲಿವಾಹನ ಶಕೆ 1812 ನೇಯ ವಿಕೃತಿನಾಮ ಸಂವತ್ಸರದ ಮೊಘ ಭಾನುವಾರ ರಾತ್ರಿ ಶುಭಾ ಮೊಹರ್ತದಲ್ಲಿ ಭೌತಿಕ ಶರೀರ ಧರಿಸಿ ಜಗದೋದ್ದಾರಕ ಮಾಡಲು ಈ ಧರಣಿಗವತಾರವಾಯಿತು. ಆ ಸಮಯದೋಳು ಮಂದಾ ಮಾರುತನು ಚತುಧಿರ್ಶೆಗಳಿಂದಲೂ ಮೆಲ್ಲ ಮೆಲ್ಲನೆ ಸುಳಿದಾಡುತ್ತಿದ್ದನು. ಆಕಾಶವು ನೀರಭ್ರವಾಗಿ ಸಜ್ಜನ ಹೃದಯದಂತೆ ನಿರ್ಮಲವಾಗಿ ವೀರಾಜಿಸುತ್ತಿತ್ತು. ವೀರಶೈವ ಧರ್ಮವೆಂದು ಮಹಾ ಸಾಗರವು ಘೋಡಶ ಕಲಾಭರಿತನಾದ ಪೂರ್ಣಚಂದ್ರನಂತಿರುವ ಈ ಬಾಲಕನನ್ನು ನೋಡಿ ಮಹಾ ಪೂರದಂತೆ ಉಕ್ಕೇರಿತು. ಶಿವಭಕ್ತರ ಬಲ ಭುಜವು ಬಲ ನೇತ್ರಗಳು ಸ್ಪೊರಣವಾದವು. ಸದ್ಗುರುವಿನ ಕೃಪೆಯಿಂದ ತಮ್ಮ ಮನೋಭಯಕೆಯಂತೆ ಪುತ್ರ ರತ್ನೋದಯವಾಯಿತೆಂದು ಈ ದಂಪತಿಗಳಿಗೆ ಪರಮ ಸಂತೋಷವಾಯಿತು. ಆ ಕೂಡಲೇ ಗುರುವರ್ಗ ಮಠಧಿಕಾರಿ ಜಂಗಮ ಮೂರ್ತಿಯಿಂದ ಈ ಮೊದಲು ಧರಿಸಿದ್ದ ಲಿಂಗಕ್ಕೆ ಪುನಃ ಸಂಸ್ಕಾರವನ್ನು ಸಕ್ರಮವಾಗಿ ನೆರವೆರಿಸಿ ಶಿಶುವಿನ ಕೊರಳಲ್ಲಿ ಧಾರಣ ಮಾಡಲ್ಪಟ್ಟಿತು ಬಳಿಕ ಸುಂಗಲೆಯರಾದ ವನಿತಾ ಸಮೂಹವು ಸಮ್ಮಿಳಿತರಾಗಿ ತತ್ಕಾಲದಲ್ಲಿ ಮಾಡತಕ್ಕ ನಿಯಾಮಾದಿಗಳನ್ನು ನಡೆಯಿಸಿದರು.
    ತರುವಾಯ ಶುಭಾ ಮೊಹರ್ತದೊಳು ಶಿಶುವಿಗೆ ಸಿದ್ದಲಿಂಗಾರ್ಯ ಎಂಬ ಶುಭಾ ನಾಮಕಾರಣವನ್ನು ಮಾಡಿ ಸುವಾಸಿನಿಯರು ಬಾಲಕನನ್ನು  ತೋಟ್ಟಿಲಲ್ಲಿರಿಸಿ ಜೋಗುಳ ಪದಗಳನ್ನು ನಾನಾ ರೀತಿಯಿಂದ ಮನೋಹರವಾಗಿ ಹಾಡಿ ಹರಿಸುತ್ತಾರೆ.
ಲಿ. ಸಿದ್ದಲಿಂಗ ಜಗದ್ಗುರುಗಳವರ ವಿಧ್ಯಾಭ್ಯಾಸ
       ಚಿಕ್ಕತನದಲ್ಲಿಯೇ ಆ ಬಾಲಕನ ಮುಖದ ಮೇಲೆ ಶಿವಕಲೆಯು ಪ್ರಜ್ವಲಿಸುತ್ತಿತ್ತು ಈ ಮಾತಾ ಪಿಥೃಗಳು ಬಾಲಕನನ್ನು 5ನೇ ವರ್ಷದ ಶುಭಾ ಸಮಯದಲ್ಲಿ ವಿದ್ಯಾಭ್ಯಾಸ ಮಾಡಲು ಕನ್ನಡ ಪ್ರಾಥಮಿಕ ಶಾಲೆಗೆ ಕಳುಹಿಸುತ್ತಾರೆ. ಬಂಗಾರನಾಯಕನ ಹಳ್ಳಿಯ ಶಾಲೆಯಲ್ಲಿ ವಿದ್ಯಾಭ್ಯಾಸವು ನಡೆಯುತ್ತದೆ ಹುಡುಗರ ಸಂಗಡ ಮಾತಾನಾಡುತ್ತಲೇ ಲಘು ಸಿಟ್ಟಿಗೇಳುತ್ತಿದ್ದ ಶ್ರೀಗಳು ಕೇವಲ ಶ್ರದ್ದೆಯಿಂದಲೂ ಕುಶಲಮತಿಯಿಂದಲೂ ಆ ಗ್ರಾಮದ ಶಾಲೆಯ ವಿದ್ಯೆಯನ್ನು ಪೂರೈಸಿದ ಬಳಿಕ ಸಮೀಪದಲ್ಲಿರುವ ಜಗಳೂರು ಪಟ್ಟಣದ ಶಾಲೆಗೆ ಹೋಗಿ ವಿದ್ಯಾಭ್ಯಾಸವನ್ನು ನಡೆಸಿದರು. ಮುಂದೆ ಈ ಬಾಲಕನಲ್ಲಿ ದಿನೇ ದಿನೇ ದಿವ್ಯಜ್ಞಾನ ಪ್ರಬೇಯು ಬೆಳೆಯಿತು. ಸ್ಥಾನ ಶಿವಪೂಜಾ ಮಾಡುವ ಲವಲವಿಕೆಯುಂಟಾಗಲೂ ತಂದೆ ತಾಯಿಗಳು ಶ್ರಮ ಅವಿರತವಾಗಿತ್ತು.
ಲಿ. ಸಿದ್ದಲಿಂಗ ಜಗದ್ಗುರುಗಳವರ ಬಾಲ ಲೀಲೆಗಳು : ಲಿ. ಸಿದ್ದಲಿಂಗ ಜಗದ್ಗುರುಗಳು ಶಿವಾಂಶ ಸಂಭೂತನಾದ ಈ ಬಾಲಕನು ಶುಕ್ಲ ಪಕ್ಷದ ಬಾಲಚಂದ್ರನಂತೆ ದಿನೇ ದಿನೇ ಅಭಿವೃದ್ದಿ ಹೊಂದುತ್ತಿರಲು ಕೋಮುಲವಾದ ಶರೀರದಿಂದಲೂ ಕಿಂಚಿತ್ ಶಾಮವರ್ಣದಿಂದಲೂ ಕುಲುಕುಲು ನಗುತ್ತಿರುವ ಮಂದಾಹಾಸದಿಂದಲೂ ಪರಿಶೋಭಿಸುತ್ತಿರುವ ಬಾಲಕನನ್ನು ನಾರಿಯರು, ವೃದ್ದರು, ಬಂದುಗಳು ನೋಡಿ ತಮ್ಮ ಮನಸ್ಸಿನಲ್ಲಿ ಆ ಮಗುವನ್ನು ಎತ್ತಿಕೊಂಡು ಪರಮ ಪ್ರೇಮದಿಂದ ಮುದ್ದಾಡಿ ಕೆಲಹೊತ್ತು ವಿನೋದಪಟ್ಟು ಹೋಗುತ್ತಿದ್ದರು. ಹೀಗೆ 2-3 ವರ್ಷಗಳು ಗತಿಸಿದವು ತಂದೆ ತಾಯಿಗಳಾದ ಚನ್ನಬಸವಾರ್ಯ, ಗುರುಸಿದ್ದಮ್ಮನವರು ಆ ಮುದ್ದು ಮುಖದ ಬಾಲಕನ ತೊದಲು ನುಡಿಗಳನ್ನು ಬೀಳುತ್ತೇಳುತ್ತಲೂ, ಅಂಭೆ ಗಾಲಿನಿಂದಲೂ ಹಸನ್ನುಖಿಯಾಗಿ ಅತ್ತಿಂದಿತ್ತೆ ಆನಂದ ತುದಿಲ ಮಾಡುತ್ತಾ ಕಾಲಹರಣ ಮಾಡುತ್ತಿದ್ದರು. ಬಾಲಕ ಸಿದ್ದಲಿಂಗ ಜಗದ್ಗುರುಗಳು ಚಿಕ್ಕ ವಯಸ್ಸಿನಲ್ಲಿ ಶಿವಾರ್ಚನೆ ಸದಾ ಭಸಿತ ರುದ್ರಾಕ್ಷ ದಾರಣ ಸದಾಚಾರ ಸುಶೀಲಾತ ಮುಂತಾದ ಸದ್ಗುಣಗಳು ಬೆಳಯಲಾರಂಬೆಸಿದೆವು. ಮುಂದೆ 13-14 ವರ್ಷ ವಯಸ್ಸಾಗಲು ಒಂದೊಂದು ಸಮಯದಲ್ಲಿ ಬಾಲಕನಿಗೆ ಬೇಸರವಾಗಿ ಊರ ಹೊರಗೆ ಬಹು ದೂರದವರೆಗೆ ಹೋಗಿ ತಂಪಾದ ಸ್ಥಳದಲ್ಲಿಯೂ ಹಳ್ಳ, ಕೊಳ್ಳ, ಸರೋವರಗಳ ತೀರದಲ್ಲಿಯೂ ಮನ ನೊಂದ ನೇತ್ರನಂದಕರವಾದ ಹಸಿರು ಹುಲ್ಲಿನ ಪ್ರದೇಶದಲ್ಲಿ ಮೌನದಿಂದ ಕೆಲಹೊತ್ತು ಕುಳಿತು, ಮಲಗಿ, 2-3 ತಾಸುಗಳವರೆಗೆ ಆನಂದದಿಂದ ಕಾಲ ಕಳೆದು ಶಾಂತನಾಗಿ ಪುನಃ ಮಂದಿರದ ಕಡೆಗೆ ಮರಳಿ ಬರುತ್ತಿದ್ದರು. ಈ ವಿಧವಾದ ಬಾಲ ಲೀಲೆಗಳನ್ನು ವಿಚಿತ್ರವಾದ ನಡೆ ನುಡಿಗಳನ್ನು ಮುಖದ ದಿವ್ಯ ತೇಜಸ್ಸನ್ನು ನೋಡುತ್ತಾ ಜನರು ಈ ಬಾಲಕನು ಮುಂದೆ ಜಗತ್ಪಸಿದ್ದನು ಮಹಿಮಾ ಶಾಲಿಯೂ ಆಗಬಹುದೆಂದು ಊಹಿಸಿ ತಮ್ಮ ತಮ್ಮೊಳಗೆ ಮತಾನಾಡುತ್ತಿದ್ದರು. ಈ ಮೂರ್ತಿಯ ಜನಿಸಿದ ಮೇಲಂತೂ ತಂದೆಯ ಮನೆಯಲ್ಲಿ ಧನ ಧಾನ್ಯಗಳು ಸಮೃದ್ದಿಯಾದವು ನಾನ ರೀತಿಯಿಂದ ಸುಖ, ನೆಮ್ಮದಿ, ಸಂತೋಷಗಳು ಹೆಚ್ಚುತ್ತಾ ಬಂದವು.

ಶ್ರೀ ಮರುಳಸಿದ್ದೇಶ್ವರ ಮೂರ್ತಿಯ ಕೃಪಾದೃಷ್ಟಿ
ಲಿ. ಸಿದ್ದಲಿಂಗ ಜಗದ್ಗುರುಗಳು ಚಿಕ್ಕ ವಯಸ್ಸಿನಲ್ಲಿ 14 ವರ್ಷ ವಯಸ್ಸಿನವನಾಗಿ ತನ್ನ ತಂದೆಯವರ ಸಂಗಡ ಶ್ರಾವಣ ಮಾಸದ ಪೂಜೋತ್ಸವಾದಿಗಳನ್ನು ನೋಡಲು ಉಜ್ಜಯಿನಿ ಸದ್ದರ್ಮ ಪೀಠಕ್ಕೆ ಬರುತ್ತಾರೆ. ಆ ದಿವಸ ಸೋಮವಾರವಿದ್ದುದರಿಂದ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ಮೂರ್ತಿಯನ್ನು ಪಲ್ಲಕಿಯಲ್ಲಿರಿಸಿ ಭಜನೆ, ಭಜಂತ್ರಿ ವಾದ್ಯಗಳೊಡನೆ ಅನೇಕ ಭಕ್ತರು ಸೇರಿ ಪಲ್ಲಕ್ಕಿ ಉತ್ಸವ ಮಾಡಲಾಂಭಿಸಿದರು. ಆಗ ಚಿಕ್ಕ ಬಾಲಕ ಸಿದ್ದಲಿಂಗ ಜಗದ್ಗುರುಗಳು ಬಾಲಕನು ಆ ಪಲ್ಲಕ್ಕಿಯ ಹತ್ತಿರಾ ಬಾಲಭಾಗಕ್ಕೆ ಉತ್ಸವ ಮೂರ್ತಿಯನ್ನು ನೋಡುತ್ತಾ ದೇವಾಲಯವನ್ನು ಪ್ರದಕ್ಷಿಣೆ ಮಾಡುವಾಗ ಆ ಮಹಾ ಮೂರ್ತಿಯು ತನ್ನ ಬೆಳ್ಳಿಯ ಮುಖವನ್ನು ಬಲಭಾಗಕ್ಕೆ ತಿರುಗಿಸಿ ಅ ಬಾಲಕನನ್ನೆ ನೋಡುತ್ತಿರುತ್ತದೆ . ಮೂರ್ತಿಯನ್ನು ಚಿಕ್ಕ ಬಾಲಕ ಸಿದ್ದಲಿಂಗ ತಿರುಗಿ ನೋಡುತ್ತಾ ಒಂದು ಸಾರಿ ಪ್ರದಕ್ಷಿಣೆ ಮಾಡಿದರು. ಆಗ ಇದೇನು ಈ ಮಹಾಸ್ವಾಮಿಯ ಮುಖವು ನನ್ನ ಕಡೆಗೆ ನೋಡುತ್ತಿರುತ್ತದೆ ಎಲ್ಲಾ ಇರಲಿ ಎಂದು ಆ ಪಲ್ಲಕ್ಕಿಯ ಎಡಭಾಗಕ್ಕೆ ಬಂದು ಪಲ್ಲಕ್ಕಿಯನ್ನು ಹಿಡಿದುಕೊಂಡು ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ಮೂರ್ತಿಯನ್ನು ನೋಡುತ್ತಾ ಹೋಗಲು ತಕ್ಷಣವೇ ಶ್ರೀ ಮೂರ್ತಿಯ ಮುಖವನ್ನು ಎಡಭಾಗಕ್ಕೆ ತಿರುಗಿಸಿ ಪುನಃ ಈ ಬಾಲಕನನ್ನು ನೋಡಲಿಕೆ ಹತ್ತಿತ್ತು. ಆಗ ಬಾಲಕನಿಗೆ ಒಂದು ವಿಧವಾದ ಆನಂದವು ಅಶ್ಚರ್ಯವೂ ಕಿಂಚಿತ್ ಭಯವು ತೋರಿದವು. ಅಷ್ಟರಲ್ಲಿ ಅರ್ಚಕರು ದೇವರನ್ನು ಎದುರುಗೊಂಡು ಮಂಗಲ ಮಾಡಿ ದೇವಲಾಯದೋಳಗೆ ಭದ್ರಸ್ಥಾನದ ಮೇಲೆ ಮೂರ್ತಿಗೊಳಿಸಿದರು. ಬಳಿಕ ಈ ವಿಷಯವನ್ನು ಬಾಲಕನು ತನ್ನ ತಂದೆ ಚನ್ನಬಸವಾರ್ಯನ ಮುಂದೆ ತಿಳಿಸಲು ಅವರು ಅನಂದಾಶ್ಚರ್ಯ ಭರಿತರಾಗಿ ತಮ್ಮ ಇದು ಶುಭ ಸೂಚನೆಯ ಮಹಾಸ್ವಾಮಿಯ ಕೃಪಾದೃಷ್ಟಿ ನಿನ್ನ ಮೇಲೆ ಪೂರ್ಣವಾಹಿತೆಂದು ಹೇಳಿದರು.

ಉಜ್ಜಯಿನಿ ಸದ್ದರ್ಮ ಪೀಠಧ್ಯಕ್ಷರಾಗಿ ಲಿ. ಸಿದ್ದಲಿಂಗ ಜಗದ್ಗುರುಗಳು
ಶ್ರೀ ಶಾಲಿವಾಹನಶಕೆ 1828ನೇ ಪರಾಭವನಾಮ ಸಂವತ್ಸರದ ವೈಶಾಖ ಬಹುಳ ಪಂಚಮಿ ಭಾನುವಾರ ಉದಯ ಶುಭ ಮುಹೋರ್ತದಲ್ಲಿ ಶ್ರೀ ಜಗದ್ಗುರು ಮರುಳಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳವರ ಹಸ್ತದಿಂದ (ತುಂಬ್ರ ಗುದ್ದಿ) ವೇ|| ವಿರೂಪಾಕ್ಷಶಾಸ್ತ್ರೀಗಳವರಿಗೆ ಶ್ರೀ ಜ|| ಸ್ಥಿರಪಟ್ಟಾಧಿಕಾರವು ಅನುಗ್ರಹಿಸಲ್ಪಟ್ಟು ಇವರಿಗೆ ಶ್ರೀ ಜ|| ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳೆಂಬ ನಾಮಾಂಕಿತವು ಕರೆಯಲ್ಪಟ್ಟಿತು. ಮತ್ತು ಬಂಗಾರನಾಯಕನಹಳ್ಳಿ ಬೃ|| ಮಠದ ಚನ್ನಬಸವಾರ್ಯರ ಪುತ್ರನಿಗೆ ಶ್ರೀ ಜ|| ಚರಪಟ್ಟಾಧಿಕಾರವು ಅನುಗ್ರಹಿಸಲ್ಪಟ್ಟು ಇವರಿಗೆ ಶ್ರೀ ಜ|| ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳೆಂಬ ಶುಭ ನಾಮಕರಣದಿಂದ ಕರೆಯಲ್ಪಟ್ಟಿತು.
ಸಾಯಂಕಾಲಕ್ಕೆ ಶೃಂಗರಿಸಲ್ಪಟ್ಟ ಪಲ್ಲಕ್ಕಿಯಲ್ಲಿ ನೂತನ ಜಗದ್ಗುರುಗಳವರನ್ನು ಮೂರ್ತಗೊಳಿಸಿ ಉಜಯಿನಿ ಗ್ರಾಮದಲ್ಲಿ ಪ್ರಮುಖ ಮುಖ್ಯ ಬೀದಿಗಳಲ್ಲಿ ಅನೇಕ ವಾದ್ಯ-ವೈಭವಗಳಿಂದಲೂ ಸಕಲ ಬಿರುದಾವಳಿಗಳಿಂದಲೂ ಮಹೋತ್ಸವವು ಹೊರಟು ಮಂದಗತಿಯಿಂದ ಸಾಗುತ್ತ ಮಹಾಸಂಸ್ಥಾನ ಮಠಕ್ಕೆ ಆಗಮಿಸಿ ಶ್ರೀ ಮರುಳಸಿದ್ದೇಶ್ವರ ಮಹಾಲಿಂಗಕ್ಕೆ ಫಲ-ಪುಷ್ಪಾದಿಗಳನ್ನರ್ಪಿಸಿ ಮಂಗಲಮಾಡಿ ಬಂದು ಸರ್ವರ ಜಯಘೋಷದೊಡನೆ ಶ್ರೀ ಜಗದ್ಗುರು ಸದ್ದರ್ಮ ಸಿಂಹಾಸನದಲ್ಲಿ ಮಂಡಿಸಿದರು.
ಲಿ. ಸಿದ್ದಲಿಂಗ ಜಗದ್ಗುರುಗಳವರ ಪವಾಡಗಳು
ಶ್ರೀ ಸಿದ್ದಲಿಂಗ ಜಗದ್ಗುರುಗಳು ಚಿಕ್ಕ ವಯಸ್ಸಿನಲ್ಲಿ ಒಂದು ದಿನ ಗೋವುಗಳು ಮೇಯ್ದು ಮಲಗಿವೆ ಸಿದ್ದಲಿಂಗ ಮರದಡಿ ಲಿಂಗ ಧ್ಯಾನಸ್ಥನಾಗಿ ಕೂತಿದ್ದಾನೆ. ಸಂಜೆಯಾಗಿದೆ ಮಧ್ಯರಾತ್ರಿಯಾಗಿದೆ ಏಳಲಿಲ್ಲ ಬೆಳಕು ಹರಿದಿದೆ. ಮುಂಜಾನೆಯಾಗಿದೆ ಬಾಹುದರಿವಿಲ್ಲ ಸಿದ್ದಲಿಂಗ ಜಗದ್ಗುರುಗಳು ಕೂತ ಗಿಡದ ಟೊಂಗೆಯಲ್ಲಿರುವ ಅಪಾರ ಜೇನು ಹುಳ ಎದ್ದಿವೆ. ಧನಕಾಯ ಹುಡಗರು ಓಡಿ ಹೋದರು. ಜೇನು ಹುಳಗಳು ಸಿದ್ದಲಿಂಗಯ್ಯ ಮುಖ ಮೈಗೆ ಮುತ್ತಿ ಕಚ್ಚುತ್ತಿವೆ. ಸಿದ್ದಲಿಂಗ ಜಗದ್ಗುರುಗಳ ಮಾತ್ರ ಸ್ವಲ್ಪನು ಅಳದೇ ಅರಿವು ಇಲ್ಲದಂತೆ ಕೂತಿದ್ದಾರೆ. ಈ ಸುದ್ದಿ ತಿಳಿದು ಊರಿನ ಜನ ತಂದೆ ತಾಯಿ ಓಡಿ ಓಡಿ ಬರ್ತಾರೆ ನೋಡ್ತಾರೇ ಹುಳುಗಳು ಕಚ್ಚಿರುವ ಸ್ಥಿತಿಯನ್ನು ನೋಡಿ ತಾಯಿ ಗುರುಸಿದ್ದಮ್ಮ ಜೋರಾಗಿ ಅಳ್ತಾಳೆ ಬಹು ಹೊತ್ತಿನ ನಂತರ ಹುಳಗಳೆಲ್ಲಾ ಹಾರಿ ಹೋದಾಗ ಎಲ್ಲರು ಸಿದ್ದಲಿಂಗನೆ ಹತ್ತಿರ ಬರ್ತಾರೆ. ಮೈತುಂಬಾ ಕೆಂಪು ಗಾದರಿಗಳಾಗಿವೆ ತಾಯಿ ಸಿದ್ದಲಿಂಗ ಏನು ನಿನ್ನ ಆವಸ್ಥೆ ಎಂದು ಮುಖ ವರೆಸಿ ಅಳುತ್ತಾಳೆ. ಆಗ ಸಿದ್ದಲಿಂಗ ಎಚ್ಚರವಾಗಿ ಯಾಕಮ್ಮ ಆಳ್ತಿಯಾ ನಾನೆಗೇನು ಆಗಿದೆ ಎಂದು ನೀವೆಲ್ಲಾ ಸೇರಿದ್ದಿರಿ ಎಂದು ನಗುತ್ತಾ ಕೇಳ್ತಾನೆ ಇದು ಎಂಥ ದ್ಯಾನ.


ಉಜ್ಜಿನಿ ಹರಿಜನ ಕೇರಿಯ ಮರುಳಸಿದ್ದಪ್ಪನ ದೇವಸ್ಥಾನ
     ಸಿದ್ದ ಮಲ್ಲೇಶ ಜಗದ್ಗುರು ಸಿಂದೋಗಿ ಗೌಡ (ಅಸ್ಪಶ್ಯ)ನಿಗೆ ಸಂತಾನ ಫಲಾರ್ಶಿರ್ವಾದ ನೀಡಿದ ಗಂಡು ಮಗು ಹುಟ್ಟಿತು. ಮರುಳಸಿದ್ದನೆಂದು ಹೆಸರಿಸಿ ಸಿಂದೋಗಿಯಲ್ಲಿ ಮರುಳಸಿದ್ದ ದೇವಾಲಯ ಕಟ್ಟಿಸಿ ಅದರ ಉಸ್ತುವಾರಿ ಗೌಡ ಸಾಂತನಕ್ಕೀರಿಸಿದರು. ಮತ್ತು ಸಿಂದೋಗಿ ಗೌಡನ ಆಳು ಮಾರೆಪ್ಪಗೆ ಸಂತಾನ ಫಲಾರ್ಶೀವಾದ ನೀಡಿದ ಗಂಡು ಮಗು ಹುಟ್ಟಿದ ಆತನಿಗೆ ಮರುಳಸಿದ್ದನೆಂದು ಹೆಸರಿಸಿ ಉಜ್ಜನಿಗೆ ಕರೆತಂದು ಉಜ್ಜನಿ ಹರಿಜನ ಕೇರಿಯಲ್ಲಿ ಮರುಳಸಿದ್ದ ಗುಡಿ ಕಟ್ಟಿಸಿ ಪೂಜಾದಿ ಪತ್ಯಾವನ್ನು ಮಾರೆಪ್ಪ ಮರುಳಸಿದ್ದನಿಗೆ ಇರಿಸಿ ಹರಿಸಿದ. ದಲಿತೋದ್ದಾರಿ ಸಿದ್ದ ಮಲ್ಲೇಶರು ಇವೆ. ಸಿದ್ದಲಿಂಗ ಜಗದ್ಗುರುಗಳು ಆರ್ಶಿವಾದಿಸಿದರು. ಮೊದಲಾದ ಪೀಠದ ಹಾಗೂ ಪೀಠಚಾರ್ಯರರ ಸಿದ್ದಲಿಂಗ ಜಗದ್ಗುರು ಸಭೆ ಸಮಾರಂಭಗಳಲ್ಲಿ ಭೋಧಿಸಿ ಪ್ರಭವಿಸಿದರು.
ನೇಗಿಲಯೋಗಿ ಲಿ. ಸಿದ್ದಲಿಂಗ ಜಗದ್ಗುರುಗಳು
ಧರ್ಮ ಸಂಸ್ಕ್ರತಿ ಸಂವರ್ಥಿಸುವ ಜ್ಞಾನ ದಾಸೋಹ ನಿತ್ನಾನ್ನ ದಾಸೋಹ ಅಗಮಗಳ ಶೋಧನೆ ಸಂಗ್ರಹಣೆ ಪ್ರಕಟಣೆ ಕರ್ತೃ ಮರುಳಸಿದ್ದಲಿಂಗಕ್ಕೆ ರಾಜೋಪಚಾರಯುಕ್ತ ಆರ್ಚನೆ ಮುಂತಾದ ಕಾರ್ಯನುಷ್ಠಾನ ಪೀಠದಲ್ಲಿ ಸಾಂಗಗೊಳಿಸಿದ ಸಿದ್ದಲಿಂಗ ಸನ್ನಿಧಿಯು ಬಂತ್ರ ಕಾಲದಿಂದ ಪಡಬಿದಿದ್ದು ಪೀಠದ ಹೊಲಗದ್ದೆಗಳನ್ನು ಹದಗೊಳಿಸುವ ಸಂಕಲ್ಪ ಮಾಡಿ ಕುಂಟೆ, ರಂಟೆ, ಚಕ್ಕಡಿ, ಒಕ್ಕಲ ಸಾಮಾನುಗಳನ್ನು ಮಾಡಿಸಿ ಹತ್ತಾರು ರೈತಾಳುಗಳನ್ನು ಇರಿಸಿಕೊಂಡು ಹೊಲ ಗದ್ದೆಗಳ ನಟ್ಟು ಕಡಿಸುವ ರಂಟೆ, ಕುಂಟೆ ಹೂಡಿಸುವ ಕಾರ್ಯ ಪ್ರಾರಂಭಿಸುತ್ತಾರೆ. ದಿನಾಲೂ ಅಶ್ವಾರೂಢವಾಗಿ ಮಠದ ಎಲ್ಲ ಗದ್ದೆ ಹೊಲಗಳಿಗೆ ಅಲೆದಾಡಿ ಕೆಲಸ ಮಾಡಿಸುತ್ತಿದ್ದಾರೆ. ನೂರಾರು ಕೂಲಿ ಆಳುಗಳನ್ನು ಕೆಲಸಕ್ಕೆ ಹಚ್ಚಿ ಹೊಲಗದ್ದೆ ಹಸನ ಮಾಡಿಸುತ್ತಿದ್ದರು. ಮೈ ಮುರಿದು ದುಡಿದವರಿಗೆ ಹೆಚ್ಚಿಗೆ ಕೂಲಿ ಮೈಯುಳಿಸಿ ದುಡಿದವರಿಗೆ ಆರೆ ಕೂಲಿ ವೃದ್ದ ವೃದ್ದೆಯರಿಗೆ ಕೂರಿಸಿ ಕೂಲಿ ಬಸಿರ ಸ್ತ್ರೀಯರಿಗೆ ಮರದ ನೆರಳಲ್ಲಿ ಕೂರಿಸಿ ಉಪಚರಿಸಿ ಡಬಲ್ ಕೂಲಿ ಕೊಟ್ಟು ಕಳಿಸುವ ಕರುಣಾಮಯಿ ಸಿದ್ದಲಿಂಗ ಜಗದ್ಗುರು ಸನ್ನಿದಿಯ ಎತ್ತುಗಳು ಬಡಿಯದಂತೆ ಕಟ್ಟೆಚ್ಚರ ವಿಧಿಸಿದ್ದಾರೆ. ಎಂದಿನಂತೆ ಸಿದ್ದಲಿಂಗರು ಕುದುರೆಯೇರಿ ಹೊಲ ಗದ್ದೆಗಳಿಗೆ ಬರುತ್ತಾರೆ. ಒಂದು ಹೊಲದಲ್ಲಿ ರಂಟೆ ನಿಂತಿದೆ ರೈತಾಳು ರಾಮಪ್ಪ ಚಳಿಜ್ವರ ಬಂದು ನಡುಗುತ್ತಾ ಮಲಗಿದ್ದಾನೆ. ಗುರುಗಳು ನೋಡಿ ಮರುಗುತ್ತಾರೆ. ಹುಡುಕಾಡಿ ಸೊಪ್ಪು ತಂದು ರಸಮಾಡಿ ಕುಡಿಸಿ “ನಿದ್ರೆ ಬರುತ್ತೆ ಮಲಗು ಅರಾಮಗುತ್ತದೆ” ಎಂದು ತಮ್ಮ ಸೆಲ್ಲೆ ಹೊದಿಸಿ ಮಲಗಿಸುತ್ತಾರೆ. ಸಿದ್ದಲಿಂಗ ಜಗದ್ಗುರುಗಳು ಪದ ಹಾಡುತ್ತಾ ರಂಟೆ ಹೊಡೆಯುತ್ತಾರೆ. ಧಾರ್ಮಿಕ ಗುರು ಪೀಠದ ಸ್ವಾಮಿ ಈ ರೀತಿ ಮಣ್ಣಿನ ಮಗನಾಗಿ ಒಕ್ಕಲು ಮಾಡಿದ ಉದಾಹರಣೆ ಸಿಕ್ಕವುದು ವಿರಳ 4-5 ಗಂಟೆ ಬಿಡುವಿರದೆ ರಂಟೆ ಹುಳುವ ಕಾರ್ಯದಲ್ಲಿ ಸನ್ನಿದಿ ನಿರತರಾಗಿದ್ದರು.
ಕೂರಿಗೆ ಪೂಜೆ ಭಿತ್ತುವಿಕೆ
ಬೇಸಿಗೆಯಿಡೀ ಶ್ರಮಿಸಿದ ಫಲ ಹೊಲ ಗದ್ದೆ ಹದವಾಗಿದೆ ಸಮೃದ್ದ ಮಳೆಯಾಗಿ ಮೃದುವಾಗಿವೆ.
ಸಂಸ್ಕ್ರತ ಪಾಠಶಾಲೆ ಜ್ಞಾನ ಗುರು ವಿದ್ಯಾಪೀಠ ಸ್ಥಾಪನೆ
ಶ್ರೀ ದಾರುಕ ಸಂಸ್ಕ್ರತ ಪಾಠ ಶಾಲೆಯನ್ನು ಪೀಠದಲ್ಲಿ ಸ್ಥಾಪಿಸಿ ಉಮಚಗಿ ಶಂಕರ ಶಾಸ್ತ್ರಿಗಳನ್ನು ಆದ್ಯಾಪಕರನ್ನಾಗಿರಿಸಿ ಬಡ ಜಂಗಮ ಮಕ್ಕಳಿಗೆ ಊಟ, ವಸತಿ, ವಿದ್ಯೆ ಉಚಿತವಾಗಿ ನೀಡುತ್ತಾರೆ. ಶ್ರೀ ಜ್ಞಾನಗುರು ವಿದ್ಯಾಪೀಠವನ್ನು ಪೀಠದಲ್ಲಿ ಸ್ಥಾಪಿಸಿ ಕೈಕೊಂಡರು ಈಶ ಕೇನ ಮಂಡಕೋಪನಿವಷತಗಳಾದಿ ಶೋಧಿಸಿ ಶಂಕರ ಶಾಸ್ತ್ರಿಗಳಿಂದ ವೀರಶೈವ ಪರ ಶಾಂಕರೀ ಭಾಷ್ಯೆ ಶ್ರೀ ಸುಧಕರ ಮುಂತಾದ ಗ್ರಂಥ ಬರೆಸಿ ಪ್ರಕಟಿಸಿದರು ಪಂಡಿತರು ಕವಿಗಳು ಸಂಗೀತಗಾರರು ಪೀಠದಾಸ್ತಿಯೆಂದು ಹಲವರನ್ನು ಉಜ್ಜಿನಿ ಪೀಠದ ಆಸ್ತಾನ ವಿದ್ವಾನರನ್ನಾಗಿ ಮಾಡಿರಿಸಿಕೊಂಡು ಸಾಹಿತ್ಯಾ ಸಂಗೀತ ಪ್ರವಚನ ಕಲೆಗಳು ತ್ಥಾನಗೊಳಿಸುತ್ತಾರೆ.
ಉಜ್ಜಿನಿ ಪೀಠದಲ್ಲಿ ನ್ಯಾಯದ ಕೋರ್ಟು ನ್ಯಾಯಧೀಶ ಸಮರ್ಥ ಪೀಠಾಧೀಶ ಲೀ.ಸಿದ್ದಲಿಂಗ ಜಗದ್ಗುರುಗಳು
     ಪಂಚಾಚಾರಗಳ ಮಠಗಳೇ ಪಂಚರಂಗ ಮಠಗಳು ಅವೇ ಪಂಚಗಟ್ಟೆ ಮಠಗಳ ಕಟ್ಟೆ ನ್ಯಾಯದ ಕಟ್ಟೆ ಅವೇ ಪಂಚಗಟ್ಟೆ ಮಠಗಳ ಕಟ್ಟೆ ನ್ಯಾಯದ ಕಟ್ಟೆ ಕೋರ್ಟ್ ಮಠಗಳಲ್ಲಿವೆ ಮಹಾ ನ್ಯಾಯದ ಕಟ್ಟೆ (ಸುಪ್ರಿಂ ಕೋರ್ಟ್) ಪಂಚಪೀಠಗಳಲ್ಲಿವೆ ಉಜ್ಜಯಿನಿ ಪೀಠದಲ್ಲಿರುವ ನ್ಯಾಯದ ಕಟ್ಟೆ ಪೀಠಾರೋಹಿಸಿ ಜನಗಳಿಗೆ ನ್ಯಾಯ ಒದಗಿಸುವ ನ್ಯಾಯಧೀಶರು (ಜಡ್ಜರು) ಲೀ. ಸಿದ್ದಲಿಂಗ ಜಗದ್ಗುರುಗಳು ಆಗಿದ್ದರು. ಸಿದ್ದಯ್ಯ ಗುರುಸಿದ್ದಯ್ಯ, ಬಸಯ್ಯ, ತಿಪ್ಪೇಸ್ವಾಮಿ, ನ್ಯಾಯ ಅನ್ಯಾಯ ನಿರೂಪಿಸುವ ವಕೀಲರಾಗಿದ್ದರು. ಬಿಡಿಸಲಾಗದ ಸಮಸ್ಯೆ ಬಗೆಹರಿಸಿ ತೀರ್ಪು ನೀಡುವಲ್ಲಿ ಸನ್ನಿದಿ ನ್ಯಾಯ ದೇವರಂತೆ ರಾರಾಜಿಸುತ್ತಾರೆ. ಬ್ರೀಟಿಷ್ ಸರ್ಕಾರದ ಜಡ್ಜರು ವಕೀಲರು ಬಂದು ಸನ್ನಿದಿಯ ಅನುಭವ ಪಡೆದುಕೊಳ್ಳುತ್ತಾರೆ. ಕೊಟ್ಟೂರು, ಜಾಗಟಗೇರಿ, ದೊಡ್ಡವೀರಪ್ಪಯ್ಯ ಹರಪನಹಳ್ಳಿ ಬೆಟ್ಟಪ್ಪಗೌಡ, ಹಡಗಲಿ ಗುರುಶಾಂತಪ್ಪ, ಹೊಳಗುಂದಿ ಸಿದ್ದಲಿಂಗಪ್ಪ, ಉಚ್ಚಂಗಿ ದುರ್ಗದ ಸಿದ್ದನಗೌಡ ಅವರನ್ನು ಪಂಚರನ್ನಾಗಿ ನೇಮಿಸಿ ಪೀಠದಾಡಳಿತವನ್ನು ನಡೆಸುತ್ತಾರೆ ಸನ್ನಿದಿ.

 ಮಡ್ರಳ್ಳಿ ಚೌಡೇಶ್ವರಿ ದೇವಿಯ ಗುಡಿಯ ಬಾಗಿಲು ತೆರೆದಿರುವಂತೆ ಆರ್ಶಿವಧಿಸಿದ ಲಿ. ಸಿದ್ದಲಿಂಗ ಜಗದ್ಗುರುಗಳು
          ಮಡ್ರಹಳ್ಳಿಯಲ್ಲಿ ಸನ್ನಿಧಿಯ ವಾಸ್ತವ್ಯವಿದೆ. ಭಕ್ತರೊಡನೆ ಸಾಯಂಕಾಲ ವಾಯು ಸೇವನೆಗೆ ಕಾನನದತ್ತ ಸಿದ್ದಲಿಂಗ ಜಗದ್ಗುರುಗಳು ನಡೆದಿದ್ದಾರೆ. ದೂರದಲ್ಲಿ ಕಾಣುವ ಗುಡಿ ನೋಡಿ ಅದಾವ ಗುಡಿ ಎಂದು ಸನ್ನಿಧಿ ಭಕ್ತರನ್ನು ಕೇಳಿದಾಗ “ಮಡ್ರಳ್ಳಿ ಚೌಡೇಶ್ವರಿ ಪುರಾತನ ಗುಡಿ” ಎಂದರು ಸನ್ನಿಧಿಯವರು ನೋಡೋಣೋ ನಡೆಯಿರಿ ಎಂದೆನ್ನಲು ಜನ ಅಂಜಿ “ಬೇಡ ಬುದ್ದಿ ದೇವಿ ಉಗ್ರಳಂತೆ ವಿಧಿ ತಪ್ಪಿದ ಅರ್ಚಕನನ್ನೇ ನುಂಗಿದಳಂತೆ ಅದಕ್ಕೆ ನಮ್ಮ ಹಿರಿಯರು ಕೀಲಿ ಹಾಕಿದ್ದಾರೆ. ಆ ಕಡೆ ನಾವ್ಯಾರು ಹೋಗುವುದಿಲ್ಲ ಹೋದರೆ ಪ್ರಾಣ ಅಪಾಯವಿದೆ ಎನ್ನುತ್ತಾರೆ ಜನರು. “ಹಾಗಾದರೆ ಅವಶ್ಯಾ ನೋಡಬೇಕು ಎಂದು ಸನ್ನಿಧಿ ಆ ಕಡೆಗೆ ನಡೆಯುತ್ತಾರೆ. ಬೇಡ ಬೇಡವೆಂದರೂ ಕೇಳದಂತೆ ಹೋಗುತ್ತಾರೆ. ಭಕ್ತರು ಗುಡಿ ಮುಂದೆ ಬಂದು ನಿಂತು ನೋಡ್ತಾರೆ ಪುರಾತನ ಗುಡಿ 40-50 ವರ್ಷದ ಹಿಂದೆ ಹಾಕಿದ ಕೀಲಿ ಜಂಗು ನುಟ್ಟು ಗೂಡಗಟ್ಟಿದೆ ದಿಟ್ಟಿಸಿ ನೋಡಿದರು ವಿಚಿತ್ರ ಚಟ ಚಡಲ್ ಅಂತ ಸಿಡಿಲ ಸದ್ದ ಮಾಡಿ ಕೀಲಿ ಬಿಚ್ಚಿ ಬಿದ್ದಿತು. ಬಾಗಿಲು ದಡ ದಡನೆಂದು ತೆರೆದುಕೊಂಡಿತು. ಸನ್ನಿದಿ ಒಳಗೆ ದಡ ದಡನೆಂದು ತೆರೆದುಕೊಂಡಿತು ಸನ್ನಿದಿ ಒಳಗೆ ಹೋಗುತ್ತಾರೆ. ಎಡ ಬಲ ದೀಪ ಬೆಳಗುತ್ತಿವೆ. ಹಚ್ಚಿದವರಾರು ದೇವಿ ನೀನೇ ಎಂದು ನೋಡುತ್ತಾರೆ. ಸುಂದರ ಕಲಾಕೃತಿ ದೇವಿ ಮೂರ್ತಿ ಝಗ ಝಗಿಸುತ್ತಿದೆ. ಸದ್ದಮಾಡಿ ಕೀಲಿ ಬಿಚ್ಚಿ ಬಿದ್ದಿತು. ಬಾಗಿಲು ದಡ ದಡನೆಂದು ತೆರೆದುಕೊಂಡಿತು. ಕೈ ಮುಗಿಯುತ್ತಾರೆ ಸಿದ್ದಲಿಂಗ ಜಗದ್ಗುರುಗಳು ಡಣ ಡಣನಾದ ಝೇಂಕಾರ ಕೇಳಿ ದೂರಿದ್ದ ಭಕ್ತರು ಗುಡಿ ಹತ್ತಿರಾ ಬಾಗಿಲಿಗೆ ಬರುತ್ತಾರೆ ಸನ್ನಿಧಿ ಆನಂದದಿಂದ ದೇವಿಸ್ಥುತಿ ಮಾಡುತ್ತಾರೆ. ನಂತರ ಬರ್ರೆಪ್ಪಾ ಒಳಗೆ ದೇವಿ ಜಾಗ್ರತಳಿದ್ದಾಳೆ ಈಕೆ ಮಾಡ್ರಹಳ್ಳಿಯ ಶುಭ ಗ್ರಾಮ ದೇವತೆ ಯಾರೋ ಕೊಹಕಿಗಳು ಸುಳ್ಳು ಸುದ್ದಿ ಹಬ್ಬಿಸಿ ಕೀಲಿ ಹಾಕಿಸಿದ್ದಾರೆ. ಎಂದು ಹೇಳಿ ವಿಶೇಷ ಪೂಜೆಯನ್ನು ಮಡ್ರಳ್ಳಿ ಚೌಡೇಶ್ವರಿ ದೇವಿಗೆ ನೇರವೇರಿಸುತ್ತಾರೆ. ಲೀ. ಸಿದ್ದಲಿಂಗ ಜಗದ್ಗುರುಗಳು ಅಂದಿನಿಂದ ಇಂದಿಗೂ ಮಡ್ರಳ್ಳಿ ಚೌಡೇಶ್ವರಿ ದೇವಿಗೆ ದಿನಂಪ್ರತಿ ಪೂಜೆ ನಡೆಯುತ್ತದೆ ಮಡ್ರಳ್ಳಿಯಲ್ಲಿ.
ಬುಕ್ಕಾಂಬುದಿಯಲ್ಲಿ ತಪಸ್ಸು ಲೀ ಸಿದ್ದಲಿಂಗ ಜಗದ್ಗುರುಗಳು :
           “ವಿಜಯನಗರದ ಸೊತ್ತಿಗೆಯ ಬುಕ್ಕ ಉಜ್ಜನಿ ಪೀಠದ ಶಿಷ್ಯಾ ಆತ ಕಟ್ಟಿಸಿದ ಕೆರೆ ಬುಕ್ಕುಂಬುದಿ ಗ್ರಾಮವಾಗಿದೆ. ಇದು ಪೀಠದ ಶಾಖೆ ಮರುಳಸಿದ್ದಪ್ಪನ ಗುಡಿ ಗುಂಹಂತರವಿದೆ. ಊರಿಗೆ ಆನತಿ ದೂರದಲ್ಲಿ ಕಾನನ ಮಧ್ಯೆ ಬೆಟ್ಟವದೆ ಮೇಲೊಂದು ಪುರಾತನ ಗುಹೆ ಅಲ್ಲಿ ರಂಭಾಪುರಿ ಪೀಠಕ್ಕೆ ಒದಗಿ ಬಂದ ಕಷ್ಟವನ್ನು ನಿವಾರಣೆ ಮಾಡುವ ಸಲುವಾಗಿ ಸಿದ್ದಲಿಂಗ ಜಗದ್ಗುರುಗಳು ಉಗ್ರ ತಪಸ್ಸಿಗೆ ಸನ್ನಿಧಿ ಕೂರುತ್ತಾರೆ. ಆಹಾರ ತ್ಯಾಜಿಸಿ ಹಣ್ಣು ಹಂಪಲು ಸೇವಿಸುವ ಕಠೋರ ವ್ರತ ಕೈಗೊಂಡರು. ಹುಲಿ ಚಿರತೆ ಮಿಕಗಳ ವಾಸಸ್ಥಾನ ಅನೇಕ ವಿಷ ಜಂತುಗಳ ಭರಿತ ಅರಣ್ಯದ ಗುಡ್ಡದಲ್ಲಿ ಒಬ್ಬರೇ ಲಿಂಗಾನುಷ್ಠಾನ ತಪಸ್ಸು ಚರಿಸುತ್ತಾರೆ ಸಿದ್ದಲಿಂಗ ಜಗದ್ಗರುಗಳು.
ಮುಂ.ಭವಿಷ್ಯ ನುಡಿದ ಲೀ ಸಿದ್ದಲಿಂಗ ಜಗದ್ಗುರುಗಳು
ಮುದೇನೂರು ಭಕ್ತರಾಗ್ರಾಹಕೊಲಿದು ಆಗಮಿಸಿ ಹಿರೇಮಠದಲ್ಲಿ ವಾಸ್ತವ್ಯ ಮಾಡಿ ಧರ್ಮ ಕಾರ್ಯ ನಡೆಸಿದ್ದಾರೆ. ಸನ್ನಿಧಿಯವರು ಈ ಪಿರಿಮಠದಣುಗ ಜಾಣ ಆದರೂ ರೋಗಿಷ್ಟ್ರ ಹಿರಿಯರ ಮೊರೆಗೇಳಿ ಔಷಧೋಪಚಾರದಿಂದ ರೋಗ ವಾಸಿಮಾಡಿ ಮಹಾಗುರುವಾಗುವ ಯೋಗವಿದೆ. ಈ ಮಗುವಿಗೆ ಎಂದು ಹರುಸುತ್ತಾರೆ ಸಿದ್ದಲಿಂಗ ಜಗದ್ಗುರುಗಳು ಈ ಬಾಲಕನೇ ಮುಂದೆ ಶ್ರೀ ಶೈಲಜಗದ್ಗುರು ವಾಗೀಶರಾಗುತ್ತಾರೆ.


ಸತ್ತ ಬಾಲಕನನ್ನು ಬದುಕಿಸಿದ ಪವಾಡ ಪುರುಷ ಲೀ ಸಿದ್ದಲಿಂಗ ಜಗದ್ಗುರುಗಳು
ಒಂದು ಗ್ರಾಮದಲ್ಲಿ ಚಿಕ್ಕ ಬಾಲಕನು ವಿಪರೀತ ಜ್ವರದಿಂದ ಬಳಲಿ ಬಳಲಿ ಸಾಯುತ್ತಾನೆ. ಅಂದೇ ಅ ಮನೆಯಲ್ಲಿ ಸಿದ್ದಲಿಂಗ ಜಗದ್ಗುರುಗಳಿಗೆ ಪಾದಸೇವೆ ಕಾರ್ಯಕ್ರಮವಿರುತ್ತದೆ. ಅ ಬಾಲಕನ ಕೈಯಲ್ಲಿ ಪಾದ ಪೂಜೆ ನಡೆಸಲು ಪ್ರಾರಂಭವಾಗುತ್ತೆ ಗುರುಗಳ ದಯಾಮಾಡಿಸಿದ್ದಾರೆ ಬಾಲಕನ ತಾಯಿ ಬಾಲಕನ್ನು ಕರೆದುಕೊಂಡು ಬರಲು ಒಳಗೆ ಹೋಗುತ್ತಾಳೆ. ಅ ಬಾಲಕನು ಕುಳೀತ್ತಿದ್ದ ಕಟ್ಟೆಯ ಮೇಲೆ ಹಿಂದಕ್ಕೆ ಬೀಳುತ್ತಾನೆ ಕಣ್ಣು ಮುಚ್ಚುತ್ತಾನೆ ತಾಯಿ ಗಭಾರಿಗೊಂಡು ಅಯ್ಯೆ ಮಗನೇ ಕೈಬಿಟ್ಟು ಹೊದೆಯೋ ಎಂದು ಎದೆ ಬಡಿದುಕೊಂಡು ದುಃಖಿಸುತ್ತಾಳೆ ಆಗ ತಂದೆಯು ದುಃಖಿತನಾಗುತ್ತಾನೆ. ಈ ಸಮಯದಲ್ಲಿ ನಮ್ಮ ಸಂಕಟವನ್ನು ಬಯಲಿಗೆ ತೋರಿಸಬಾರದು ಶಾಂತಳಾಗು “ಹರಿ ಮುನಿದರು ಗುರು ಕಾಯುವನೆಂದು ಹೇಳುವರು ಈಗ ಗುರು ಕೃಪೆ ಇದ್ದಂತಾಗಲಿ ಎನ್ನುತ್ತಾ ಬಟ್ಟೆಯನ್ನು ತುಂಬಾ ಹೊದಿಸಿ ಆ ಹುಡುಗನನ್ನು ಇಬ್ಬರು ಒಂದೇ ಕಡೇ ಮಲಗಿಸಿ ಬಿಟ್ಟರು. ಅಷ್ಟರಲ್ಲಿ ಮಹಾಸವಾರಿಯು ಡಮಣಿಗಾಡಿಯಲ್ಲಿ ಮನೆಗೆ ದಯಾಮಾಡಿಸಿದರು. ಸ್ನಾನ ಶಿವಾರ್ಚನೆ ನಡೆದು ಪಾದತೀರ್ಥ ಸ್ವೀಕರಕ್ಕೆ ಎಲ್ಲಿ ನಿನ್ನ ಮಗನೆಲ್ಲೆರುವನು ಕರೆದುಕೊಂಡು ಬಾ ಎಂದಾಗ ಈ ದಂಪತಿಗಳಿಗೆ ದುಃಖ ತಡೆಯವಂತಿರಲಿಲ್ಲ. ಮಹಾ ಗುರುವೇ ಇನ್ನೆಲ್ಲಿ ಮಗನು ಶಿವನ ಪಾದ ಸೇರಿ ಒಂದು ತಾಸು ಆಯಿತು. ಎಂದು ಗುರುಗಳಲ್ಲಿ ಕಣ್ಣೀರು ಹಾಕುತ್ತಾ ಹೇಳಿದಾಗ ಸನ್ನಿಧಿ ನಿನ್ನ ಮಗನನ್ನು ಕರೆದುಕೊಂಡು ಬಾ ಎಂದಾಗ ಸತ್ತ ಬಾಲಕನಿಗೆ ಶ್ರೀಗಳವರು ಪಾದೋದಕವನ್ನು ಸಿಂಪಡಿಸಿ ಜಲಭಸ್ಮವನ್ನು ಸರ್ವಾಂಗಕ್ಕೂ ಲೇಪನಮಾಡಿ ತಮ್ಮ ಅಮೃತ ಹಸ್ತದಿಂದ ಒಂದು ಘಳಿಗೆವರೆಗೆ ಕೈಯಾಡಿಸುತ್ತಿರಲು ಆ ಹುಡುಗನು ಮೆಲ್ಲಗೆ ಕಣ್ಣುಗಳು ತೆರೆದು ನೋಡಲಾರಂಭಿಸಿ ಹೊರಳಾಡಿ ಅವ್ವ ಅವ್ವ ಎಂದು ಕರೆದಾಗ ತಂದೆ ತಾಯಿಗಳ ಸಂತೋಷ ಪಡುತ್ತಾರೆ. ಅಲ್ಲಿ ನೆರೆದಿದ್ದ ಜನರು ಆಶ್ಚರ್ಯ ಪಡುತ್ತಾರೆ ಸಿದ್ದಲಿಂಗ ಜಗದ್ಗುರುಗಳು ಅ ಬಾಲಕನನ್ನು ಬದುಕಿಸಿ ದೊಡ್ಡ ಪವಾಡ ಪುರುಷರೆಂದನಿಸಿದರು. ಲಿ. ಸಿದ್ದಲಿಂಗ ಜಗದ್ಗುರುಗಳು ಒಂದಲ್ಲಾ ಎರಡಲ್ಲಾ ನೂರಾರು ಪವಾಡಗಳನ್ನು ಮಾಡಿ ಪವಾಡ ಪುರುಷರೆನ್ನಿಸಿಕೊಂಡರು.
ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘ :
   ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘವೆಂಬ ನಾಮಂಕಿತ ಹೊಂದಿದ ಈ ಸಂಸ್ಥೆಯು 1917ನೇ ಇಸವಿಯಲ್ಲಿ ಪ್ರಾರಂಭಗೊಂಡ ವಿಧ್ಯಾವರ್ಧಕ ಸಂಘವು ಅಂದಿನಿಂದ ಇಂದಿನವರೆಗೂ ಉನ್ನತ ಮಟ್ಟಕ್ಕೆ ಮೇಲೆರುತ್ತಿದೆ. ಎಂದರೆ ಉಜ್ಜಿನಿ ಸಿದ್ದಲಿಂಗ ಜಗದ್ಗುರುಗಳು ತಪೋ ಶಕ್ತಿಯೇ ಕಾರಣ.
ಅನಾರೋಗ್ಯದಲ್ಲಿಯೂ ಧರ್ಮ ಕಾರ್ಯ ನಿರತ ಉಜ್ಜಿನಿ ಸಿದ್ದಲಿಂಗ ಜಗದ್ಗುರುಗಳು
      ಲೀ. ಸಿದ್ದಲಿಂಗ ಜಗದ್ಗುರುಗಳ ಪೂರ್ತಿ ಕಾಲು ನೋವು ವಾಸಿಯಾಗಿಲ್ಲ. ಆದರೆ ಭಕ್ತರ ಅಪೇಕ್ಷೇಯಂತೆ ಸಂಚಾರ ಧರ್ಮ ಭೋದೆ ಕಾರ್ಯ ಮಾಡುತ್ತಲಿದ್ದಾರೆ ಸನ್ನಿದಿ. ಜಗಳೂರಿಗೆ ಬಂದಿದ್ದಾರೆ 3 ದಿವಸ ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಧರ್ಮ ಭೋದನೆಗೈಯುತ್ತಾರೆ. ಜ್ವರ ಬಂದು ಸುಸ್ತಾದರು ಅದರಲ್ಲಿಯೇ ಕೊನ್‍ಭೇವ ಗ್ರಾಮಕ್ಕೆ ಬರುತ್ತಾರೆ. ತ್ರಿಕಾಲ ಪೂಜೆ ಭಕ್ತೋದ್ದಾರÀ ಕಾರ್ಯ ಬಿಡದೆ ನಡೆಸಿದ್ದಾರೆ. ಹೀಗಿರುವಾಗ 3ನೇ ಬಾರಿ ಎಡವಿ ಬೀಳುತ್ತಾರೆ. ರಕ್ತ ಧಾರೆಯಾಯಿತು ಕಾಲು ಬುರುಬುರು ಬಾತಿತು, ಜ್ವರ ಹೆಚ್ಚಾಯಿತು. ಅಂತದ್ರÀಲ್ಲಿಯೇ ಒಪ್ಪಿದ ಕಾರ್ಯಕ್ರಮ ಬಿಡಬಾರದೆಂದು ತುರುವನೂರಿಗೆ ಬರುತ್ತಾರೆ. ಬಹುಹೊತ್ತು ನಡೆದ ಧರ್ಮ ಸಭೆ ಮುಗಿಸಿ ಬರುವುದರಲ್ಲಿ ಸನ್ನಿದಿಗೆ ಜ್ವರ ವಿಪರೀತವಾಗಿ ಹೆಚ್ಚಾಗಿ ಬಳಲಿ ಮಲಗುತ್ತಾರೆ ಹಿಂದೆಗಿಂತಲೂ ಅಧಿಕ ಸುಸ್ತಾಗಿ ಹಾಸಿಗೆ ಹಿಡಿದರು.
ಭಕ್ತಾಧಿಗಳಿಗೆ ಮುಂಭವಿಷ್ಯ ನುಡಿದ ಉಜ್ಜಯಿನಿ ಲಿ. ಸಿದ್ದಲಿಂಗ ಜಗದ್ಗುರು ಸನ್ನಿಧಿ.
        ಸನ್ನಿಧಿಯವರ ಆರೋಗ್ಯ ದಿನೇ ದಿನೇ ಹದಗಡುತ್ತಾಲೆ ಬಂದಾಗ ಸನ್ನಿಧಿ ಭಕ್ತರಿಗೆ ಮುಂದಿನ ಭವಿಷ್ಯ ನುಡಿಯುತ್ತಾರೆ. “ಇದು ರುಜೆಯಲ್ಲ ಭಕ್ತರೆ ಇದು ಮರುಳಸಿದ್ದನ ಕರೆ ಬರುವ ಪುಷ್ಯ ಬಹಳ ಚವತಿ ಭಾನುವಾರ ಲಿಂಗ ಲೀನಾರಾಗುತ್ತೇವೆ ಎಂದು ಸನ್ನಿದಿ ಋಷಿಯಿಂದ ಹೇಳುತ್ತಾರೆ”. ಜನರು ದುಃಖಿಸುತ್ತಾರೆ ಎಷ್ಟು ವೈದೋಪಚಾರ ಗೈಸಿದರು ಗುಣಕಾಣಲಿಲ್ಲ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಇಡೀ ದಿನವಿದ್ದಾಗ ತುರುವ ನೂರು ಗ್ರಾಮಸ್ಥರು ಪೀಠಕ್ಕೆ ವಿಷಯವನ್ನು ತಿಳಿಸುತ್ತಾರೆ. ಪೀಠಕ್ಕೆ ಸಿದ್ದಲಿಂಗ ಜಗದ್ಗುರುಗಳನ್ನು ಕರೆದುಕೊಂಡು ಒಳಗೆ ಬಂದಾಗ ಮರುಳಸಿದ್ದನಿಗೆ ಕೈ ಮುಗಿದು ನಮಿಸುತ್ತಾರೆ. ಕೊನೆಗೆ 1936ನೇ ಭಾನುವಾರ ಸಿದ್ದಲಿಂಗ ಜಗದ್ಗುರುಗಳು ಲಿಂಗೈಕ್ಯೆರಾಗುತ್ತಾರೆ ಮಹಾ ತಪಸ್ವಿ ಉಜ್ಜಿನಿ ಸಿದ್ದಲಿಂಗ ಜಗದ್ಗುರುಗಳು.
ಸದ್ದರ್ಮ ಪೀಠದಲ್ಲಿ ಲಿಂಗೈಕ್ಯೆ ಸಿದ್ದಲಿಂಗ ಜಗದ್ಗುರುಗಳವರ ಪುರಾಣ ಪ್ರವಚನ
ಉಜ್ಜಯಿನಿ ಸದ್ದರ್ಮ ಪೀಠದಲ್ಲಿ ಲಿಂಗೈಕ್ಯೆ ಸಿದ್ದಲಿಂಗ ಜಗದ್ಗುರುಗಳವರ ಪುರಾಣ ಪ್ರವಚನವನ್ನು ಶ್ರಾವಣ ಮಾಸದಲ್ಲಿ ಪ್ರತೀ ವರ್ಷ ಶ್ರೀ ಪೀಠದಲ್ಲಿ ನಡೆಯುತ್ತದೆ. ಪೀಠದ ಜಗದ್ಗುರುಗಳಾದ ಸಿದ್ದಲಿಂಗ ಜಗದ್ಗುರುಗಳು ಪ್ರತಿ ವರ್ಷ ಪುರಾಣ, ಪ್ರವಚನಕಾರರನ್ನು ಕರೆಯಿಸಿ ಪೀಠದ ಆಸ್ಥಾನ ಕಲಾವಿದರಾದ ಜೆ.ಹೆಚ್.ಎಮ್ ಶಿವಕುಮಾರ್, ಜೆ.ಹೆಚ್.ಎಮ್.ವಾಗೀಶ್ ಕರೆಯಿಸಿ ಪೀಠದಲ್ಲಿ ಒಂದು ತಿಂಗಳ ಕಾಲ ಮಹಾತಪಸ್ವಿ ಸಿದ್ದಲಿಂಗ ಜಗದ್ಗುರುಗಳವರ ಪುರಾಣ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಮತ್ತು ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮೀ ಹಬ್ಬದ ನಿಮಿತ್ತ 5000 ಮುತೈದೆಯರಿಗೆ ಹುಡಿ ತುಂಬುವ ಕಾರ್ಯಕ್ರಮವನ್ನು ಪೀಠದ ಪ್ರಸ್ತುತ ಸಿದ್ದಲಿಂಗ ಜಗದ್ಗುರುಗಳು ಪ್ರತಿ ವರ್ಷ ಆಯೋಜಿಸುತ್ತಿದ್ದಾರೆ.
ಪೀಠದ ಅಭಿವೃದ್ದಿಗಾಗಿ ಹಗಲಿರುಳು ಧರ್ಮ ಕಾರ್ಯದಲ್ಲಿ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳು
ಉಜ್ಜಯಿನಿ ಸದ್ದರ್ಮ ಪೀಠದ ಶ್ರೀ ಸಿದ್ದಲಿಂಗ ಜಗದ್ಗುರುಗಳು ಪೀಠದ ಅಭಿವೃದ್ದಿಗಾಗಿ ಹಗಲಿರುಳು ಎನ್ನದೇ ಧರ್ಮ ಕಾರ್ಯದಲ್ಲಿ ನಿರತರಾಗಿ ವಿಶ್ರಾಂತಿ ಲೆಕ್ಕಿಸದೆ ಭಕ್ತರ ಉದ್ದರಕ್ಕಾಗಿ ನಾಡಿನೆಲ್ಲಡೆ ಧರ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪೀಠದ ಸರ್ವತೊ ಮುಖ ಅಭಿವೃದ್ದಿಗೆ ಜಗದ್ಗುರುಗಳು ನಾನಾ ಕೆಲಸ ಕಾರ್ಯಗಳನ್ನು ಕೈಗೊಂಡಿದ್ದಾರೆ ಪೀಠದಲ್ಲಿ.

ಸೋವೆನಹಳ್ಳಿ ಪ್ರಕಾಶ ಉಜ್ಜನಿ

Recent Articles

spot_img

Related Stories

Share via
Copy link