ಬೆಂಗಳೂರು:
ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದು ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಸಾಫ್ಟ್‍ವೇರ್ ಇಂಜಿನಿಯರೊಬ್ಬರು ಮೃತಪಟ್ಟಿರುವ ದುರ್ಘಟನೆ ಹುಳಿಮಾವು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನೇರುಘಟ್ಟ ರಸ್ತೆಯ ಡೆಕತ್ಲಾನ್ ಬಳಿ ನಡೆದಿದೆ.
ಮೃತಪಟ್ಟವರನ್ನು ಜಿಗಿಣಿಯ ಅಸೆಂಚರ್ ಕಂಪನಿಯಲ್ಲಿ ಕ್ಲಿನಿಕಲ್ ಡೆಟಾ ಮ್ಯಾನೇಜರ್ ಆಗಿದ್ದ ಆಗಿದ್ದ ಸ್ವಾಮಿ (25)ಎಂದು ಗುರುತಿಸಲಾಗಿದೆ.ಸ್ಕೂಟರ್‍ನಲ್ಲಿ ಹಿಂದೆ ಕುಳಿತಿದ್ದ ವಿಜ್ಞಾನಿ ತೇಜು (22) ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತುರುವೇಕೆರೆ ಮೂಲದ ಸ್ವಾಮಿ, ಚಿಕ್ಕ ಆಡುಗೋಡಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.ಅವರಿಗೆ ವಾಗ್ದೇವಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿ ತೇಜು ಸ್ನೇಹಿತರಾಗಿದ್ದರು.ಗುರುವಾರ ಸಂಜೆ ಕೆಲಸ ಮುಗಿದ ನಂತರ ಸ್ವಾಮಿ ಅವರನ್ನು ಮನೆಗೆ ಡ್ರಾಪ್ ಮಾಡುವಂತೆ ತೇಜು ಕರೆದಿದ್ದಾರೆ.
ಕಚೇರಿ ಕೆಲಸ ಮುಗಿಸಿಕೊಂಡಿದ್ದ ಸ್ವಾಮಿ ರಾತ್ರಿ 7ರ ವೇಳೆ ಡಿಯೋ ಸ್ಕೂಟರ್‍ನಲ್ಲಿ ಸ್ನೇಹಿತೆ ತೇಜು ಅವರನ್ನು ಬಿಳೇಕಳ್ಳಿಯ ಮನೆಗೆ ಬಿಟ್ಟು ಬರಲು ಹಿಂದೆ ಕೂರಿಸಿಕೊಂಡು ಬನ್ನೇರುಘಟ್ಟ ರಸ್ತೆಯಲ್ಲಿ ಬರುತ್ತಿದ್ದರು. ಮಾರ್ಗಮಧ್ಯೆ ಡೆಕತ್ಲಾನ್ ಬಳಿ ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಸ್ವಾಮಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರೆ, ತೇಜು ಗಾಯಗೊಂಡಿದ್ದಾರೆ. ಪ್ರಕರಣ ದಾಖಲಿಸಿರುವ ಹುಳಿಮಾವು ಸಂಚಾರ ಪೆÇಲೀಸರು ಬಸ್ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
