ತಿಪಟೂರು :
ನಗರದ ಮಾರುಕಟ್ಟೆಯಲ್ಲಿ ಕಳ್ಳರು ಇಂದು ಕೈಚಳಕೆ ತೋರಿದ್ದು ವರಮಹಾಲಕ್ಷ್ಮಿ ಹಬ್ಬವನ್ನು ಬೆಲೆಹೆಚ್ಚಳದ ನಡುವೆಯೂ ಸಂಭ್ರಮದಿಂದ ಆಚರಿಸಲು ಬಂದವರಿಗೆ ಕಳ್ಳರು ತಮ್ಮ ಕೈಚಳಕದ ರುಚಿ ತೋರಿಸಿದ್ದಾರೆ.
ನಗರದ ಎ.ಪಿ.ಎಂ.ಸಿ ಹಣ್ಣು ತರಕಾರಿ ಮಾರುಕಟ್ಟೆಯಲ್ಲಿ ಇಂದು ವರಮಹಾಲಕ್ಕ್ಮಿ ಹಬ್ಬದ ಪ್ರಯುಕ್ತ ವಿಪರೀತ ಜನಜಂಗುಳಿ ಹೆಚ್ಚಾಗಿದ್ದು ಇದನ್ನೇ ಬಳಸಿಕೊಂಡ ಕಳ್ಳರು ಹಲವಾರುಜನರ ಮೊಬೈಲ್, ಪರ್ಸ್ ಮತ್ತು ಹಣವನ್ನು ದೋಚಿದ್ದಾರೆ. ಇದಕ್ಕೆ ಮಾರುಕಟ್ಟೆಯ ಸೆಕ್ಯೂರಿಟಿ ಗಾರ್ಡ್‍ಗಳ ದಿವ್ಯ ನಿರ್ಲಕ್ಷ್ಯವೇ ಕಾರಣ. ಏಕೆಂದರೆ ಇಂದು ಹೆಚ್ಚು ಜನ ಬರುತ್ತಾರೆಂದು ತಿಳಿದಿದ್ದರುಸೆಕ್ಯೂರಿಟಿ ಗಾರ್ಡ್‍ಗಳು ತಮ್ಮ ಕತ್ರ್ಯವ್ಯವನ್ನು ಮರೆತು ವಾಹನಗಳನ್ನು ಮಾರುಕಟ್ಟೆಯ ಒಳಗಡೆ ಬಿಟ್ಟಿದ್ದರಿಂದ ಇಂದು ಹೆಚ್ಚಿನ ಜನಜಂಗುಳಿಯಲ್ಲಿ ಕಳ್ಳರು ತಮ್ಮ ಕೈಚಳಕವನ್ನು ತೋರಲು ದಾರಿಮಾಡಿಕೊಟ್ಟಿದ್ದಾರೆ. ಹಾಗೂ ಇಲ್ಲಿನ ಸಿ.ಸಿ. ಕ್ಯಾಮರಾಗಳು ಸರಿಯಾಗಿ ಕಾರ್ಯನಿರ್ವಸುತ್ತಿದ್ದರೆ ಕಳ್ಳರನ್ನು ಹಿಡಿಯಲು ಸುಲಭವಾಗಬಹುದೆಂದು ಮೊಬೈಲ್ ಕಳೆದುಕೊಂಡವರ ಅಭಿಪ್ರಾಯ.








