ತುಮಕೂರು:
ತುಮಕೂರು ನಗರಕ್ಕೆ ಹೇಮಾವತಿ ನೀರು ಪೂರೈಸುವ ಏಕೈಕ ತಾಣವಾದ ಬುಗುಡನಹಳ್ಳಿಯ ‘‘ಹೇಮಾವತಿ ಜಲಸಂಗ್ರಹಾಗಾರ’’ ಇನ್ನೂ ತುಂಬಿಲ್ಲ ಎಂಬ ಆತಂಕಕಾರಿ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಬುಡುಗಡನಹಳ್ಳಿ ಜಲಸಂಗ್ರಹಾಗಾರಕ್ಕೆ ಆರಂಭದಲ್ಲಿ ನಾಲ್ಕೆ‘ದು ದಿನಗಳ ಕಾಲ ನಾಲೆಯಿಂದ ಹೇಮಾವತಿ ನೀರು ಹರಿದು ಬಂದಿದ್ದು ಬಿಟ್ಟರೆ, ಆ ಬಳಿಕ ಮತ್ತೆ ಇಲ್ಲಿಗೆ ಹೇಮಾವತಿ ನೀರು ಹರಿದಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಜಲಸಂಗ್ರಹಾಗಾರದ ಏರಿಯು 12 ಅಡಿ ಎತ್ತರವಿದ್ದು, ಈಗ ಇಲ್ಲಿ ಕೇವಲ ನಾಲ್ಕೆ‘ದು ಅಡಿಗಳಷ್ಟು ಮಾತ್ರ ಹೇಮಾವತಿ ನೀರು ಸಂಗ್ರಹವಾಗಿದ್ದು, ಈಗಿರುವ ಈ ನೀರನ್ನು 2 ರಿಂದ ಎರಡೂವರೆ ತಿಂಗಳಷ್ಟೇ ಬಳಸಬಹುದಾಗಿದೆ ಎನ್ನಲಾಗುತ್ತಿದೆ.
ಮೊದಲಿಗೆ ಬುಗುಡನಹಳ್ಳಿ ಜಲಸಂಗ್ರಹಾಗಾರವನ್ನು ತುಂಬಿಸಿ, ಪಕ್ಕದ ನರಸಾಪುರ ಕೆರೆಗೂ ಹರಿಸಲಾಗುವುದು. ಜೊತೆಗೆ ಹೆಬ್ಬಾಕ ಕೆರೆಗೆ ನೀರನ್ನು ಪಂಪ್ ಮಾಡಿ ತುಂಬಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಬುಗುಡನಹಳ್ಳಿ ಜಲಸಂಗ್ರಹಾಗಾರವೇ ಇನ್ನೂ ಕಾಲು‘ಾಗದಷ್ಟು ಮಾತ್ರ ತುಂಬಿರುವುದರಿಂದ ಆತಂಕ ಉಂಟಾಗಿದೆ ಎಂದು ಹೇಳಲಾಗಿದೆ.
ಗೊರೂರು ಜಲಾಶಯದಿಂದ ಹೇಮಾವತಿ ನೀರು ಹರಿದುಬರುತ್ತಿದೆ. ಆದರೆ ಆ ನೀರನ್ನು ನೇರವಾಗಿ ಕುಣಿಗಲ್ ಕೆರೆಗೆ ಹರಿಸಲಾಗುತ್ತಿದೆ. ಮಾರ್ಗ ಮಧ್ಯೆ ತುಮಕೂರು ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೂ ತುಂಬಿಸಲಾಗುತ್ತಿದೆ ಎಂದು ತಿಳಿದಿದೆ.
‘‘ತಿಪಟೂರು ತಾಲ್ಲೂಕಿನಲ್ಲಿ ಅಲ್ಲಿನ ಶಾಸಕರು ವಿಶೇಷ ಆಸಕ್ತಿ ವಹಿಸಿ ತಾಲ್ಲೂಕಿನ ವಿವಿ‘ ಕೆರೆಗಳಿಗೆ ಹೇಮಾವತಿ ನೀರನ್ನು ತುಂಬಿಸುವಲ್ಲಿ ಸಲರಾಗಿದ್ದಾರೆ. ಆದರೆ ನಮ್ಮ ತುಮಕೂರು ನಗರದ ಜೀವನಾಡಿಯಾಗಿರುವ ಬುಗುಡನಹಳ್ಳಿ ಜಲಸಂಗ್ರಹಾಗಾರವನ್ನು ತುಂಬಿಸಲು ಏಕೆ ಇನ್ನೂ ಸಾಧ್ಯವಾಗಿಲ್ಲ ?’’ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ತುಮಕೂರು ನಗರಕ್ಕೆ ಸಮರ್ಪಕವಾಗಿ ನಿರಾತಂಕವಾಗಿ ಹೇಮಾವತಿ ನೀರು ಪೂರೈಸಬೇಕಾದರೆ ಮೊದಲಿಗೆ ಬುಗುಡನಹಳ್ಳಿ ಜಲಸಂಗ್ರಹಾಗಾರ ತುಂಬಬೇಕು. ಜೊತೆಜೊತೆಗೇ ನರಸಾಪುರ ಮತ್ತು ಹೆಬ್ಬಾಕ ಕೆರೆ ಸಹ ಭರ್ತಿಯಾಗಬೇಕು. ಆದರೆ ಈಗ ಬುಗುಡನಹಳ್ಳಿ ಜಲಸಂಗ್ರಹಾಗಾರವೇ ಕಾಲು ಭಾಗದಷ್ಟು ನೀರು ಹೊಂದಿದೆ. ಹಾಗಾದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟಾಗುವುದಿಲ್ಲವೇ? ಎಂದು ನಾಗರಿಕರು ಪ್ರಶ್ನಿಸತೊಡಗಿದ್ದಾರೆ.
ಮೂಲಗಳ ಪ್ರಕಾರ, ಬುಗುಡನಹಳ್ಳಿ ಜಲಸಂಗ್ರಹಾಗಾರದಿಂದ ಹೆಬ್ಬಾಕ ಕೆರೆಗೆ ನೀರನ್ನು ಪಂಪ್ ಮಾಡಬೇಕು. ಇಲ್ಲಿರುವ ತಾಂತ್ರಿಕ ವ್ಯವಸ್ಥೆಯ ಪ್ರಕಾರ ಈ ರೀತಿ ಸತತ ಮೂರು ತಿಂಗಳುಗಳ ಕಾಲ ನೀರು ಪಂಪ್ ಮಾಡಿದರಷ್ಟೇ ಆ ಕೆರೆ ಭರ್ತಿಯಾದೀತು. ಬರುವ ಡಿಸೆಂಬರ್ ಹೊತ್ತಿಗೆ ನಾಲೆಯಲ್ಲಿ ಹೇಮಾವತಿ ಹರಿದುಬರುವುದು ಸ್ಥಗಿತವಾಗುತ್ತದೆ. ಅಷ್ಟರೊಳಗೆ ಎಚ್ಚರ ವಹಿಸದಿದ್ದರೆ ತುಮಕೂರು ನಗರದ ಕುಡಿಯುವ ನೀರಿನ ಸಂಕಷ್ಟ ತಪ್ಪಿದ್ದಲ್ಲ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ, ಬುಗುಡನಹಳ್ಳಿ ಜಲಸಂಗ್ರಹಾಗಾರದಿಂದ ಹೆಬ್ಬಾಕ ಕೆರೆಗೆ ನೀರನ್ನು ಪಂಪ್ ಮಾಡಬೇಕು. ಇಲ್ಲಿರುವ ತಾಂತ್ರಿಕ ವ್ಯವಸ್ಥೆಯ ಪ್ರಕಾರ ಈ ರೀತಿ ಸತತ ಮೂರು ತಿಂಗಳುಗಳ ಕಾಲ ನೀರು ಪಂಪ್ ಮಾಡಿದರಷ್ಟೇ ಆ ಕೆರೆ ‘ರ್ತಿಯಾದೀತು. ಬರುವ ಡಿಸೆಂಬರ್ ಹೊತ್ತಿಗೆ ನಾಲೆಯಲ್ಲಿ ಹೇಮಾವತಿ ಹರಿದುಬರುವುದು ಸ್ಥಗಿತವಾಗುತ್ತದೆ. ಅಷ್ಟರೊಳಗೆ ಎಚ್ಚರ ವಹಿಸದಿದ್ದರೆ ತುಮಕೂರು ನಗರದ ಕುಡಿಯುವ ನೀರಿನ ಸಂಕಷ್ಟ ತಪ್ಪಿದ್ದಲ್ಲ ಎಂದು ಹೇಳಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ