ತಿಪಟೂರು :
ತಾಲ್ಲೂಕಿನ ಹೊನ್ನವಳ್ಳಿಯ ಪ್ರಸಿದ್ದದೇವತೆಯಾದ ಉಡಿಸಲಮ್ಮ ತಾಯಿಗೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಅರ್ಚಕರಾದ ಹೊನ್ನರಾಜು ಮತ್ತು ಕೆಂಪರಾಜು ಮತ್ತು ಹೇಮರಾಜುರವರು ಮುತ್ತಿನ ಅಲಂಕಾರವನ್ನುಮಾಡಿ ವಿಶೇಷ ಪೂಜಾಕಾರ್ಯಕ್ರಮವನ್ನು ಗುಡಿಗೌಡರಾದ ಹೆಚ್.ಎಸ್.ಕೃಷ್ಣಮೂರ್ತಿ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ರಾತ್ರಿ ಉತ್ಸವವನ್ನು ಏರ್ಪಡಿಸಿದ್ದು ನಂತರ ದೂತರಾಯ ಸ್ವಾಮಿಗೆ ಮಂಡಕ್ಕಿ ಮಣೆವು ಏರ್ಪಡಿಸಲಾಗಿತ್ತು. ಸಾವಿರಾರು ಜನರು ದೇವಿಯ ದರ್ಶನಪಡೆದು ಪೂನೀತರಾದರು ಎಲ್ಲರಿಗೂ ಲಘುಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು.