ರಕ್ಷಾ ಬಂಧನ

ಗುತ್ತಲ:

ಸೋದರ ಸಂಬಂಧದ ಪ್ರತೀಕವಾದ ರಕ್ಷಾ ಬಂಧನ ಅರ್ಥಪೂರ್ಣವಾಗುವುದು ನಮ್ಮ ಆಚರಣೆಯಿಂದ ನಾವಿಬ್ಬರು ಒಟ್ಟು ಒಟ್ಟಾಗೆ ನಮ್ಮ ಪಯಣ ಅಂತ ಮೌನಭಾಷೆಯಲ್ಲಿ ನಮಗೆ ಹೇಳಿ ,ಯಾವತ್ತೂ ನಾವು ಒಬ್ಬಂಟಿ ಅಲ್ಲ ಅನ್ನೊ ಪ್ರೀತಿಗೆ ಇರುವಂತಹ ಇನ್ನೊಂದು ಹೆಸರೇ ರಕ್ಷೆ.

ಈ ಸಂಧರ್ಭದಲ್ಲಿ ಆರ್.ಎಸ್.ಎಸ್.ವಕ್ತಾರರಾದ ನಿರಂಜನ್ ಪೂಜಾರ ಮಾತನಾಡಿ,ನಮ್ಮ ಸಮಾಜದಲ್ಲಿ ಸ್ತ್ರೀಯರು ಪುರುಷರಿಗೆ ರಕ್ಷೆ ಕಟ್ಟಿ ಪರಸ್ಪರ ಸಹೋದರಿ,ಸಹೋದರ ಸಂಭಂಧವನ್ನು ಭದ್ರಗೊಳಿಸುವಂತ ಈ ಹಬ್ಬಕ್ಕೆ ಸಂಘವು ವ್ಯಾಪಕವಾದ ರಾಷ್ಟ್ರೀಯ ಸ್ವರೂಪವನ್ನು ಕೊಟ್ಟಿದೆ.ನಮ್ಮ ಸಮಾಜ ಭಾಂದವರು ಅನುದಿನವೂ ಪರಸ್ಪರರನ್ನು ಸ್ನೇಹಿತರಂತೆ ಕಾಣುತ್ತಾ,ಸುಖ ದು:ಖಗಳಲ್ಲಿ ಸಮರಸರಾಗಿ ಬಾಳುವ ಹಾಗೂ ರಾಷ್ಟ್ರ ರಕ್ಷಣೆಯ ಸಂಕಲ್ಪ ತೊಡುವ ಸಂದರ್ಭವೆ ರಕ್ಷಾಬಂಧನ. ರಕ್ಷಾ ಬಂಧನ ಎನ್ನುವ ಈ ಹಬ್ಬ ನಮಗೋಸ್ಕರ ನಾವು ಮಾಡುವ ಹಬ್ಬ ಇದು.ಹಿಂದೂ ಧರ್ಮದಲ್ಲಿ ಪ್ರತಿ ಒಂದು ಹಬ್ಬಕ್ಕೆ ಒಬ್ಬ ದೇವರನ್ನ ಆರಾಧನೆ ಮಾಡುತ್ತೇವೆ.ನಮ್ಮ ಸಂಸ್ಕøತಿಯಲ್ಲಿ ಬಲವಾದ ಅನುಭವಗಳಿಗೆ ಬಲಹೀನವಾದ ದಾರಗಳೇ ಆಧಾರ ಎಂದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಂಭಣ್ಣ ಲಕ್ಷ್ಮೇಶ್ವರಮಠ ವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರಸನ್ ಜಾನ್ಮನಿ,ರಮೇಶ ಜಮಾದರ,ಗಿರೀಶ್ ತರ್ಲಿ,ರಮೇಶ್ ಮಠದ,ವೀರಯ್ಯ ಪ್ರಸಾದಿಮಠ,ಬಿಂದಪ್ಪ ಅರ್ಕಸಾಲಿ,ಗುರುಪ್ರಸಾದ ಸಾಗರ,ಮಹೇಶ್ ಅರ್ಕಸಾಲಿ,ಉಮೇಶ್ ಕಲಾಲ,ಜಗದೀಶ್ ಸುತ್ತೂರಮಠ,ಪ್ರಕಾಶ ಹೊನ್ನಮ್ಮನವರ,ಗುಡ್ಡಪ್ಪ ತರ್ಲಿ,ರಾಮಾಚಾರಿ ಬಡಿಗೇರ,ಮಣಿಕಂಠ ಬಂಡಿವಡ್ಡರ,ರಾಜಾರಾಮ್ ಕುಲಕರ್ಣಿ,ಚನ್ನಪ್ಪ ಕಾಗಿನೆಲ್ಲಿ,ರಾಜು ಹೂಗಾರ,ಮಂಜುನಾಥ ಯರವಿನತಲಿ,ನವೀನ ದಾಮೋದರ್,ರಾಜು ಚನ್ನದಾಸರ,ಮಂಜು ತೇಲ್ಕರ್ ಮತ್ತಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link