ಹಿರಿಯೂರು:
ನಗರದ ಜಮೀಯತ್ ಉಲಮಾ ಮತ್ತು ನವಜವಾನ್ ಕಮಿಟಿ ವತಿಯಿಂದ ಕೇರಳ ಮತ್ತು ಕೊಡಗು ನೆರೆ ಸಂತ್ರಸ್ಥರಿಗಾಗಿ ಸಂಗ್ರಹಿಸಿದ್ದ ನಿತ್ಯ ಬಳಕೆಯ ಸಾಮಾಗ್ರಿಗಳನ್ನು ವಿತರಿಸಲು ಸಾಮಾಗ್ರಿಗಳನ್ನು ಒಂದು ಲಾರಿಯಲ್ಲಿ ತುಂಬಿಕೊಂಡ ಸುಮಾರು ಐವತ್ತು ಜನ ಸ್ವಯಂ ಸೇವಕರು ಸೇವೆ ನಿರ್ವಹಿಸಲು ಹಿರಿಯೂರಿನಿಂದ ತೆರಳಿದರು.
ಈ ಸಂದರ್ಭದಲ್ಲಿ ಜಾಮಿಯಾ ಮಸೀದಿ ಮುತುವಲ್ಲಿ ಬಿ.ಎಸ್.ನವಾಬ್ಸಾಬ್ರವರು ಮಾತನಾಡಿ ಮಾನವ ಜನ್ಮ ಸಾರ್ಥಕವಾಗಲು ಮತ್ತೊಬ್ಬರಿಗೆ ಸಹಾಯ ಹಸ್ತ ನೀಡಬೇಕು ನೆರೆ ಸಂತ್ರಸ್ಥರಿಗೆ ಹಿರಿಯೂರಿನ ಜಮಿಯತ್ ಉಲಮಾಯೆ ಮತ್ತು ನವಜವಾನ್ ಕಮಿಟಿ ವತಿಯಿಂದ ಮುಸಲ್ಮಾನ್ ಬಾಂಧವರಿಂದ ಸಂಗ್ರಹಿಸಿದ್ದ ವಿವಿಧ ನಿತ್ಯೋಪಯೋಗಿ ಸಾಮಾಗ್ರಿಗಳನ್ನು ರವಾನಿಸಲಾಗುತ್ತಿದ್ದು ವಿವಿಧ ವಸ್ತುಗಳನ್ನು ತುಂಬಿದ ಸುಮಾರು ಮೂರು ಸಾವಿರ ಬೆಲೆ ಬಾಳುವಂತಹ ಐದುನೂರಕ್ಕೂ ಹೆಚ್ಚು ಚೀಲಗಳನ್ನು ತಯಾರಿಸಿದ್ದು ಕಳಸಿಕೊಡಲಾಗುತ್ತಿದೆ ಎಂದರು.
ಡಿ.ವೈ.ಎಸ್.ಪಿ ವೆಂಕಟಪ್ಪನಾಯಕ ರವರು ಮಾತನಾಡಿ ಪರೋಪಕಾರ ಮಾಡುವುದು ಮಾನವನ ಧರ್ಮ ಹಿರಿಯೂರಿನ ಮುಸ್ಲಿಂ ಬಾಂಧವರು ನೆರೆ ಪೀಡಿತರಿಗೆ ಸಹಾಯ ಹಸ್ತ ನೀಡುತ್ತಿರುವುದು ಒಂದು ಮಾದರಿಯಾದಂತ ಕಾರ್ಯಕ್ರಮ ಎಂದು ಶ್ಲಾಘಿಸಿದರು.
ವೃತ್ತ ನಿರೀಕ್ಷಕರಾದ ಕೆ.ಟಿ.ಗುರುರಾಜ್, ನಗರಠಾಣೆ ಪಿ.ಎಸ್.ಐ ಮಂಜುನಾಥ್, ಹಾಗೂ ಧರ್ಮಗುರುಗಳಾದ ಮೌಲಾನ ಸೈಯದ್ರಬ್ಬಾನಿ, ಮೌಲಾನ ಅಬ್ದುಲ್ಲಾ, ಮೌಲಾನವಾಸೀಮ್, ಹಾಗೂ ವಕೀಲರಾದ ನೂರ್ಅಹಮ್ಮದ್, ಸೂಯೋದಯ ಅಜೀಜ್, ಸೇರಿದಂತೆ ಜಮಿಯತ್ ಉಲಮಾಯೆ ಮತ್ತು ನವಜವಾನ್ ಕಮಿಟಿಯ ಅನೇಕ ಯುವ ಮುಸ್ಲೀಂ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥತಿರಿದ್ದರು. ಸ್ವಯಂ ಸೇವೆಗೆ ಹೊರಟವರು ಮತ್ತು ಸಾಮಾಗ್ರಿಗಳನ್ನು ದೇವತಾ ಪ್ರಾರ್ಥನೆ ಮೂಲಕ ಕಳಿಸಿಕೊಡಲಾಯಿತು.