ವಿವಿಸಾಗರಕ್ಕೆ ವಿಮಾ ಪ್ರತಿನಿಧಿಗಳಿಂದ ಕಾಲ್ನಡಿಗೆ ಜಾಥ

ಹಿರಿಯೂರು:

               ವಿವಿ ಸಾಗರ ಜಲಾಶಯಕ್ಕೆ ನೀರು ಹರಿದುಬರಲಿ ಎಂದು ಹಾಗೂ ಲೋಕಕಲ್ಯಾಣಕ್ಕಾಗಿ ಇಲ್ಲಿನ ಜೀವವಿಮಾ ಪ್ರತಿನಿಧಿಗಳು ವಿವಿಸಾಗರಕ್ಕೆ ಕಾಲ್ನಡಿಗೆ ಜಾಥಕ್ಕೆ ಚಾಲನೆ ನೀಡಿದರು.

               ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಜಟಂಗಿ ರಾಮಯ್ಯನವರು ಮಾತನಾಡಿ ವಿವಿ ಸಾಗರ ಜಲಾಶಯಕ್ಕೆ ಕಳೆದ ಹಲವಾರು ವರ್ಷಗಳಿಂದ ನೀರು ಬಂದೇ ಇಲ್ಲ ಇದರ ಹಿಂದೆ ಅನೇಕ ಚೆಕ್‍ಡ್ಯಾಂಗಳು ಇರುವುದರಿಂದ ನೀರು ಬರುವುದು ಕಷ್ಟಕರವಾಗಿದೆ, ವಿವಿಸಾಗರಕ್ಕೆ ಬೆನ್ನು ನೀಡಿ ಕುಳಿತಿರುವ ಮಾತೆ ಕಣಿವೆ ಮಾರಮ್ಮ ಹಾಗೂ ವರುಣನ ಕೃಪೆಯಿಂದ ಉತ್ತಮ ಮಳೆಬೆಳೆಯಾಗಲಿ ಎಂದರು.
ಮಾಜಿ ಯೋಧರಾದ ಸಿ.ಯೋಗರಾಜ್‍ರವರು ಮಾತನಾಡಿ ವಿವಿ ಸಾಗರಕ್ಕೆ ನೀರು ಹರಿದು ಬರಲಿ ಎಂದು ಕಣಿವೆ ಮಾರಮ್ಮ ದೇವತೆಗೆ ವಿಶೇಷವಾಗಿ ಪ್ರಾರ್ಥಿಸಿ ಜೀವ ವಿಮಾ ಪ್ರತಿನಿಧಿಗಳು ವಿವಿ ಸಾಗರಕ್ಕೆ ಕಾಲ್ನಡಿಗೆ ನಡೆಸುತ್ತಿರುವುದು ಸಂತೋಷದ ವಿಚಾರ ಎಂದರು.

              ಶಿವಮೊಗ್ಗ ವಿಭಾಗೀಯ ಉಪಾಧ್ಯಕ್ಷರಾದ ಪೂಜಾರ್ ಪರಸಪ್ಪ, ಹಿರಿಯೂರು ಜೀವವಿಮಾ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಟಿ.ರವೀಂದ್ರನಾಥ್, ಶಾಖಾ ಉಪ ವ್ಯವಸ್ಥಾಪಕ ಕೃಷ್ಣಪ್ಪ, ಕರೇಗೌಡ್ರು, ಮೋಹನ್ ಹೆಗ್ಗಡೆ, ಗಂಗಾಧರ್, ಪಿ.ವಿ.ನಾಗರಾಜ್, ಗುರುನಾಥ್, ಹೆಚ್.ಎನ್.ವೆಂಕಟೇಶ್, ಕೇಶವಮೂರ್ತಿ, ಕೃಷ್ಣಪ್ರಸಾದ್, ಹನುಮಂತಯ್ಯ, ಉಮೇಶ್ ಗುಡಾಣಮಠ್, ಇಂದ್ರಕುಮಾರಿ, ವತ್ಸಲ ಪುಷ್ಪಾವತಿ, ಮತ್ತಿತರರು ಉಪಸ್ಥಿತರಿದ್ದರು. ಸುಮಾರು ನೂರಕ್ಕೂ ಹೆಚ್ಚು ಜನ ವಿವಿ ಸಾಗರಕ್ಕೆ ಕಾಲ್ನಡಿಗೆ ಜಾಥ ಕೈಗೊಂಡರು.

Recent Articles

spot_img

Related Stories

Share via
Copy link