ದಾವಣಗೆರೆ:
ಪೊಲೀಸ್ ಇಲಾಖೆಯಲ್ಲಿ ಪ್ರಶಂಶನೀಯ ಸೇವೆ ಮಾಡಿದ ದಾವಣಗೆರೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳಾದ ಪೂರ್ವ ವಲಯ ಐಜಿಪಿ ಕಛೇರಿಯಲ್ಲಿ ಪೊಲೀಸ್ ನಿರೀಕ್ಷಕರು ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಆರ್.ಆರ್.ಪಾಟೀಲ್ ಹಾಗೂ ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವೀರಬಸಪ್ಪ ಎಲ್. ಕುಸಲಾಪುರ ರವರುಗಳು 2017 ನೇ ಸಾಲಿನ ‘ಮುಖ್ಯ ಮಂತ್ರಿ ಪದಕ’ ಕ್ಕೆ ಭಾಜನಾರಾಗಿದ್ದಾರೆ.
ಬಿ.ಕಾಂ. ಪದವೀಧರರಾಗಿರುವ ಆರ್.ಆರ್.ಪಾಟೀಲ್ನವರು ಕರ್ನಾಟಕ ಪೊಲೀಸ್ ಇಲಾಖೆಗೆ ಸ್ಪೋಟ್ರ್ಸ ಕೊಟಾದಲ್ಲಿ ಪಿಎಸ್ಐ ಆಗಿ 2003 ರಲ್ಲಿ ನೇಮಕಗೊಂಡು ಕೊಪ್ಪಳ, ಬೀದರ್, ರಾಯಚೂರು ಹಾಗೂ ಹಾವೇರಿ ಜಿಲ್ಲೆಗಳಲ್ಲ್ಲಿ ಕರ್ತವ್ಯ ನಿರ್ವಹಿಸರುತ್ತಾರೆ. 2014 ರಲ್ಲಿ ಪೊಲೀಸ್ ನಿರೀಕ್ಷಕರಾಗಿ ಬಡ್ತಿ ಹೊಂದಿ ನಕ್ಸಲ್ ನಿಗ್ರಹ ಪಡೆ, ದಾವಣಗೆರೆ ಜಿಲ್ಲೆಯ ಚನ್ನಗಿರಿ ವೃತ್ತದಲ್ಲಿ ಪೊಲೀಸ್ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಹಾಲಿ ಪೂರ್ವ ವಲಯ ಐಜಿಪಿ ಕಛೇರಿಯಲ್ಲಿ ಪೊಲೀಸ್ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಇವರು ತಮ್ಮ ಸೇವಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಅಪರಾದ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುತ್ತಾರೆ.
ಬಿಎಸ್ಸಿ, ಬಿ.ಎಡ್. ಪದವೀಧರರಾಗಿರುವ ವೀರಬಸಪ್ಪ ಎಲ್. ಕುಸಲಾಪುರನವರು ಕರ್ನಾಟಕ ಪೊಲೀಸ್ ಇಲಾಖೆಗೆ ಪಿಎಸ್ಐ ಆಗಿ 2010 ರಲ್ಲಿ ನೇಮಕಗೊಂಡು ಚಿಕ್ಕಬಳ್ಳಾಪುರದಲ್ಲಿ ಪ್ರೊಬೇಷನರಿ ಕರ್ತವ್ಯ ಮುಗಿಸಿ, ಬೇಂಗಳೂರಿನ ಹಲಸೂರುಗೇಟ್ ಠಾಣೆ, ದಾವಣಗೆರೆ ಜಿಲ್ಲೆಯ ಸಂಚಾರ ಪೊಲೀಸ್ ಠಾಣೆ, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಹಾಲಿ ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಇವರು ತಮ್ಮ ಸೇವಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಅಪರಾದ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುತ್ತಾರೆ. ಇವರಿಬ್ಬರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಚೇತನ್ ಆರ್ ಹಾಗೂ ಹೆಚ್ಚುವರಿ ಎಸ್ಪಿ ಉದೇಶ ಟಿ.ಜೆ. ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
