ತುಮಕೂರು:
ನಗರದ ಶಿರಾಗೇಟ್ ನ ಉತ್ತರಬಡಾವಣೆ ಶಾಲೆಯಲ್ಲಿ ರಾಮಯ್ಯ ಸರ್ ಗೆ ಬೀಳ್ಕೊಡುಗೆ ಸಮಾರಂಭವನ್ನು 25-8-2018 ರಂದು ಏರ್ಪಡಿಸಲಾಗಿತ್ತು. ಆದ್ಯಕ್ಷತೆಯನ್ನು ಎಸ್.ಡಿ.ಎಂ.ಸಿ
ಅದ್ಯಕ್ಷರಾದ ಹರೀಶ್‍ಕುಮಾರ್ ವಹಿಸಿದ್ದರು. ವಿದ್ಯಾರ್ಥಿಗಳಾದ ಆರೀಫ್,ಅಂಕಿತ ಹಾಗೂ ಶಿಕ್ಷಕರುಗಳಾದ ವಿ.ನಾಗೇಶ್, ತ್ರೀವೇಣಿ, ಪುಟ್ಟಸ್ವಾಮಿ ರಾಮಯ್ಯನವರ ಕೆಲಸ-ಕಾರ್ಯಗಳ ಬಗ್ಗೆ ನೆನಸಿಕೊಂಡು ಅಭಿನಂದಿಸಿದರು. ಅರಳಿಮರದಪಾಳ್ಯದ ಮು.ಶಿ ರಾದ ರಾಜಣ್ಣನವರು ಸದರಿಯವರನ್ನು ಸನ್ಮಾನಿಸುತ್ತಾ ರಾಮಯ್ಯನವರನ್ನು ಅಭಿನಂದಿಸಿದರು. ರಾಮಯ್ಯನವರಿಗೆ ಶಾಲಾವತಿಯಿಂದ ಮುಖ್ಯ ಶಿಕ್ಷಕರಾದ ಡಿ.ಎಸ್.ಶಿವಸ್ವಾಮಿ,ಪ್ರಸನ್ನಕುಮಾರ್,ಎಸ್.ಡಿ.ಎಂ.ಸಿಯವರು,ಶಾಲಾಶಿಕ್ಷಕರು,ಎಲ್ಲರೂ ಸೇರಿ ಸನ್ಮಾನಿಸಿದರು.
ಡಿ.ಎಸ್.ಶಿವಸ್ವಾಮಿ ರವರು ಮಾತನಾಡುತ್ತಾ ರಾಮಯ್ಯನವರು ಏನು ಕನಸುಕಂಡಿದ್ದರು ಅದನ್ನು ನಾನು & ನನ್ನ ಸಿಬ್ಬಂದಿ ನನಸು ಮಾಡುತ್ತೇವೆ. ಇದರಲ್ಲಿ ಸಂಶಯಬೇಡ ಎಂದು ಹೇಳುತ್ತಾ, ತನ್ನ ಸಿಬ್ಬಂದಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು, ರಾಮಯ್ಯನವರು ಮಾತನಾಡುತ್ತಾ ಸರ್ಕಾರಿ ನೌಕರರಿಗೆ ವರ್ಗಾವಣೆ ಅನಿವಾರ್ಯ, ಇದ್ದ ಅವಧಿಯಲ್ಲಿ ನನಗೆ ತೃಪ್ತಿ ಆಗುವ ಮಟ್ಟಿಗೆ ಕೆಲಸ ಮಾಡಿದ್ದೇನೆ. ನನ್ನ ಶಿಕ್ಷಕರು ನನಗೆ ಪೂರ್ಣವಾದ ಸಹಕಾರ ನೀಡಿದರು. ಎಂದು ಹೇಳುತ್ತಾ ತಮ್ಮ ಅವಧಿಯಲ್ಲಿ ಸಹಕಾರ ನೀಡಿದ ಎಸ್.ಡಿ.ಎಂ.ಸಿ & ಪೋಷಕರುಗಳನ್ನು, ಅಧಿಕಾರಿಗಳನ್ನು ನೆನಸಿಕೊಂಡು ನಾನು ಅವರಿಗೆಲ್ಲಾ ಚಿರರುಣಿಯಾಗಿರುತ್ತೇನೆ. ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಸನ್ನಕುಮಾರ್ ಸಹಾ ರಾಮಯ್ಯನವರ ಕಾರ್ಯದಕ್ಷತೆ ಬಗ್ಗೆ ಪ್ರಶಂಸಿಸಿದರು. ಲೀಲಾವತಿ ನಿರೂಪಿಸಿದರು,ಪುಟ್ಟಸ್ವಾಮಿ ಸ್ವಾಗತಿಸಿದರು, ವಿ.ನಾಗೇಶ್ ವಂದನೆಗಳನ್ನು ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ