ಕ್ರೀಡಾ ಕ್ಷೇತ್ರವೂ ಸಹ ವಿದ್ಯಾರ್ಥಿಗಳಿಗೆ ಹೊಸ ಕಾಯಕಲ್ಪವನ್ನು ನೀಡುವಲ್ಲಿ ಸಹಕಾರಿ

ಚಳ್ಳಕೆರೆ

               ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಜೀವನವನ್ನು ಉತ್ತಮ ಪಡಿಸಿಕೊಳ್ಳಳು ಶಿಕ್ಷಣ ಕ್ಷೇತ್ರವನ್ನು ಆಯ್ದುಕೊಂಡಂತೆ ಕ್ರೀಡಾ ಕ್ಷೇತ್ರವನ್ನು ಸಹ ಆಯ್ದುಕೊಳ್ಳಬೇಕು. ಕಾರಣ ಕ್ರೀಡೆಗಳು ನಮ್ಮನ್ನು ಕಡಿಮೆ ಅವಧಿಯಲ್ಲಿ ಅತಿ ಎತ್ತರಕ್ಕೆ ಬೆಳೆಸುತ್ತವೆ. ಯಾವುದೇ ಕ್ರೀಡೆಯಲ್ಲಿ ಮುಂಚೂಣಿ ಸಾಧಿಸಿದ ವಿದ್ಯಾರ್ಥಿ ಅವನು ಸದಾಕಾಲ ಮುಂದುವರೆಯುತ್ತಲೇ ಉತ್ತಮ ಭವಿಷ್ಯದ ಹಾದಿ ಹಿಡಿಯುತ್ತಾನೆ. ಹಾಗಾಗಿ ಕ್ರೀಡೆಗೆ ಉತ್ತಮ ಪ್ರೋತ್ಸಾಹ ನೀಡುವ ಕಾರ್ಯಕ್ಕೆ ಎಲ್ಲರೂ ಮುಂದಾಗಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ತಿಳಿಸಿದರು.

             ಅವರು, ಭಾನುವಾರ ತಾಲ್ಲೂಕಿನ ಹಿರೇಹಳ್ಳಿ ಗ್ರಾಮದ ಚಿಂತಾಮಣೇಶ್ವರ ಪ್ರೌಢಶಾಲೆ ಆರವಣದಲ್ಲಿ ತಳಕು ಹೋಬಳಿ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿನಿತ್ಯವೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವವರನ್ನು ನಾವು ಕಂಡಿದ್ದೇವೆ. ಪರಿಶ್ರಮದ ಸಾಧನೆಗೆ ಎಂದಿಗೂ ಗೌರವವಿದೆ. ಹಾಗಾಗಿ ವಿದ್ಯಾರ್ಥಿಗಳು ಆಟಗಳಲ್ಲಿ ಸೋಲಲಿ, ಗೆಲ್ಲಲಿ ಗುಣಾತ್ಮಕ ಆಟ ಪ್ರದರ್ಶನಕ್ಕೆ ಆದ್ಯತೆ ನೀಡಬೇಕು ಎಂದರು.

              ಧ್ವಜರೋಹಣ ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿಂತಾಮಣೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಡಿ.ಎಸ್.ಜ್ಞಾನೇಶ್ವರ ಮಾತನಾಡಿ, ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲೂ ಭಾಗವಹಿಸುವ ಮೂಲಕ ಅವರಲ್ಲಿರುವ ಪ್ರತಿಭೆಯನ್ನು ಅನಾವಣಗೊಳಿಸಲು ಪ್ರಯತ್ನಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ ಕೇವಲ ಶಿಕ್ಷಣ ಮಾತ್ರ ನೀಡದೇ ವಿವಿಧ ಚಟುವಟಿಕೆಗಳಲ್ಲೂ ಸಹ ವಿದ್ಯಾರ್ಥಿಗಳನ್ನು ಕ್ರಿಯಾಶೀಲವನ್ನಾಗಿಸುವ ಯೋಜನೆಗಳು ಇರುವುದು ಸ್ವಾಗತಾರ್ಹವೆಂದರು.

               ಕ್ರೀಡಾ ಜ್ಯೋತಿಯನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ.ಕೆ.ರಾಜು, ಅಕ್ಷರ ದಾಸೋಹ ಅಧಿಕಾರಿ ಎಂ.ತಿಪ್ಪೇಸ್ವಾಮಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಎ.ಜೆ.ಶಾರದಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ರೂಪ, ಓಬಯ್ಯ, ರಮೇಶ್, ಪ್ರೌಢಶಾಲೆಗಳ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಉಪಾಧ್ಯಕ್ಷ ನಾಗಲಿಂಗಾರೆಡ್ಡಿ, ಕಾರ್ಯದರ್ಶಿ ಡಿ.ಎಸ್.ಪಾಲಯ್ಯ, ಖಜಾಂಚಿ ನಜೀರ್, ಸಿಆರ್‍ಪಿ ಎನ್.ಮಾರಣ್ಣ ಭಾಗವಹಿಸಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap