ಬೆಂಗಳೂರು
ಮಕ್ಕಳು ಮತ್ತು ಮಹಿಳಾ ಕಳ್ಳ ಸಾಗಾಣೆಯಲ್ಲಿ ದೇಶದಲ್ಲಿ ಕರ್ನಾಟಕವು 5ನೇ ಸ್ಥಾನದಲ್ಲಿದೆ. ದಿನೇ ದಿನೇ ಮಕ್ಕಳು ಮತ್ತು ಮಹಿಳಾ ಕಳ್ಳ ಸಾಗಾಣೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದರ ತಡೆಗೆ ಪೊಲೀಸ್ ಇಲಾಖೆ ಮುಂದಾಗಿದೆ.
ನಗರದಲ್ಲಿ ಮಕ್ಕಳು ಮತ್ತು ಮಹಿಳಾ ಕಳ್ಳ ಸಾಗಾಣೆಯ ಮೇಲೆ ನಿಗಾ ವಹಿಸಲು ನುರಿತ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೊಳಗೊಂಡ ವಿಶೇಷ ಪೊಲೀಸ್ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ಮಕ್ಕಳು ಮತ್ತು ಮಹಿಳಾ ಕಳ್ಳ ಸಾಗಾಣೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಪ್ರಕರಣಗಳನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಲು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಯಲ್ಲಿ ಮೂರು ವಿಶೇಷ ಪೆÇಲೀಸ್ ತಂಡಗಳನ್ನು ರಚಿಸಲಾಗಿದೆ.ತಂಡಗಳು ಮಕ್ಕಳು ಮತ್ತು ಮಹಿಳಾ ಕಳ್ಳ ಸಾಗಾಣೆ ಜಾಲಗಳ ಮೇಲೆ ಹದ್ದಿನ ಕಣ್ಣಿಟ್ಟು ದುಷ್ಕರ್ಮಿಗಳನ್ನು ಪತ್ತೆಹಚ್ಚಲಿದೆ.
ಪ್ರಕರಣಗಳಲ್ಲಿ ಏರಿಕೆ
ನಗರದಲ್ಲಿ ಮಕ್ಕಳ ಮತ್ತು ಮಹಿಳೆಯರ ಸಾಗಾಣೆ ವರ್ಷದಿಂದ ವರ್ಷಕ್ಕೆ ಸಾಕಷ್ಟು ಏರಿಳಿತವಾಗುತ್ತಿದ್ದು, 2016 ರಲ್ಲಿ ಒಟ್ಟು 1012 ಪ್ರಕರಣಗಳು ದಾಖಲಾಗಿವೆ. ಖಾಕಿ ಇನ್ನು 2017 ರಲ್ಲಿ 1050 ಮಕ್ಕಳು ಮತ್ತು ಮಹಿಳೆಯರ ಸಾಗಾಣೆಯಾಗಿದೆ.ಇದಾದ ಬಳಿಕ ಹೇಗಾದರೂ ಮಾಡಿ ಪ್ರಕರಣದ ಆರೋಪಿಗಳನ್ನ ಹಿಡಿಯಬೇಕು ಎಂದುಕೊಂಡಿದ್ದ ಪೊಲೀಸರಿಗೆ ಈ ವರ್ಷ ಮತ್ತೊಂದು ತಲೆನೋವು ಎದುರಾಗಿದೆ. ಈ ವರ್ಷ ಇದೇ ಪ್ರಕರಣದಲ್ಲಿ ಏರಿಕೆಯಾಗಿದ್ದು, 1250 ಮಹಿಳೆಯರು ಮತ್ತು ಮಕ್ಕಳ ಸಾಗಾಣೆ ಆಗಿದೆಯಂತೆ. ಅಲ್ಲದೆ ಮಾನವ ಮತ್ತು ಮಕ್ಕಳ ಸಾಗಾಣೆಯಲ್ಲಿ ಇಡೀ ದೇಶದಲ್ಲಿ ಕರ್ನಾಟಕ 5 ನೇ ಸ್ಥಾನದಲ್ಲಿದೆ.
ರಾಷ್ಟ್ರೀಯ ಅಪರಾಧ ದಾಖಲಾತಿ ವರದಿ ಪ್ರಕಾರ ನಗರದಲ್ಲಿ 2000ಕ್ಕೂ ಅಧಿಕ ಮಕ್ಕಳ ಮತ್ತು ಮಹಿಳೆಯರ ಸಾಗಾಣೆ ಮಾಡಲಾಗಿದೆ ಇದಕ್ಕಾಗಿಯೇ ವ್ಯವಸ್ಥಿತ ಜಾಲ ಹುಟ್ಟಿಕೊಂಡಿದ್ದು ಕೆಲಸ ಕೊಡಿಸುವ ಆಸೆ ಹುಟ್ಟಿಸಿ ಮಹಿಳೆಯರನ್ನ ಗುರಿಯಾಗಿಸಿಕೊಂಡು ವಿದೇಶಗಳಿಗೆ ಸಾಗಾಣೆ ಮಾಡುತ್ತಿದ್ದರೆ, ಇತ್ತ ಮಕ್ಕಳಿಗೆ ಚಾಕ್ಲೆಟ್ ತೋರಿಸಿ ಸಾಗಣೆ ಮಾಡೋ ಗ್ಯಾಂಗ್ ಕೂಡ ಹುಟ್ಟಿಕೊಂಡಿವೆಯಂತೆ.ಅದರಲ್ಲೂ 40 ವರ್ಷದ ಕೆಳಗಿರುವ ಮಹಿಳೆಯರು ಹಾಗೂ 18 ವರ್ಷಕ್ಕೂ ಕೆಳಗಿರುವ ಮಕ್ಕಳನ್ನ ಗುರಿಯಾಗಿಸಿಕೊಳ್ಳಲಾಗಿದೆ.
ವರದಿಯಲ್ಲಿ ಉಲ್ಲೇಖ
ಅಲ್ಲದೆ ಇದರಲ್ಲಿ ಗಂಡಸರೂ ಸೇರಿದ್ದು, ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳ ಸಾಗಾಣೆ ಅಧಿಕ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ನಗರದಲ್ಲಿ ಮಕ್ಕಳು ಮಹಿಳೆಯರ ಕಳ್ಳಸಾಗಾಣೆ ತಡೆದು ಆರೋಪಿಗಳಿಗೆ ಎಡೆಮುರಿಕಟ್ಟಲು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಯಲ್ಲಿ ವಿಶೇಷ ತಂಡಗಳನ್ನು ಸಜ್ಜುಗೊಳಿಸಲಾಗಿದೆ ಅವುಗಳು ಕಾರ್ಯಾಚರಣೆಗೆ ಇಳಿದಿವೆ.
ಮಕ್ಕಳ ಮತ್ತು ಮಹಿಳಾ ಸಾಗಾಣೆಯಲ್ಲಿ ಮೊದಲ ಸ್ಥಾನ ಪಶ್ಚಿಮ ಬಂಗಾಳ, ಎರಡನೇ ಸ್ಥಾನದಲ್ಲಿ ರಾಜಸ್ಥಾನವಿದ್ದರೆ ತಮಿಳುನಾಡು ಹಾಗೂ ಮಹರಾಷ್ಟ್ರ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದೆ. ಕರ್ನಾಟಕ ಐದನೇ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ ಆರನೇ ಸ್ಥಾನದಲ್ಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ