ತುಮಕೂರು :
ರಾಜ್ಯದಲ್ಲಿ ಸುಮಾರು 5 ಲಕ್ಷಕ್ಕಿಂತಲೂ ಅಧಿಕ ಬುಡಕಟ್ಟು ಜನರಿದ್ದು ಬುಡಕಟ್ಟು ಪ್ರಾಧಿಕಾರದ ರಚನೆಯಾಗಬೇಕೆಂದು ಡಾ.ಎಸ್ ಬಾಲಾಜಿ ಅಭಿಪ್ರಾಯಪಟ್ಟರು.
ತುಮಕೂರು ಜಿಲ್ಲಾ ಕನ್ನಡ ಜಾನಪದ ಪರಿಷತ್ ಹಾಗೂ ಸಿದ್ಧಾರ್ಥ ಪದವಿಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಸೇಮಿನಾರ್ ಹಾಲ್‍ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಜಾನಪದ ದಿನಾಚರಣೆ ಹಾಗೂ ವಿಶ್ವ ಬುಡಕಟ್ಟು ದಿನಾಚರಣೆಯನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ರಾಜ್ಯ ಕಾರ್ಯಾಧ್ಯಕ್ಷರಾದ ಡಾ. ಎಸ್ ಬಾಲಾಜಿರವರು ಜರ್ಮನಿ, ಇಟಲಿಗಳಲ್ಲಿ ಜಾನಪದ ಅರಿವು ಹೆಚ್ಚಾಗಿದ್ದು, ನಮ್ಮಲ್ಲೂ ಅರಿವು ಮೂಡಿಸುವ ನಿಟ್ಟನಲ್ಲಿ ನಮ್ಮ ಸರ್ಕಾರಗಳು ಜಾನಪದ ಪ್ರಾಧಿಕಾರಗಳ ರಚನೆಗೆ ಗಮನ ನೀಡಬೇಕಿದೆಯೆಂದರು, ಹಳ್ಳಿಗಾಡಿನ ಜಾನಪದ ಆಚರಣೆಗಳು ಹಾಗೂ ಬುಡಕಟ್ಟು ಆಚರಣೆಳಿಗೆ ಅಡ್ಡಿಪಡಿಸದಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ, ಹಾಗೆಯೇ ಜಾನಪದ ಕಲಾವಿದರಿಗೆ ವಿಶೇಷವಾಗಿ ವಿಮಾ ಸೌಲಭ್ಯಗಳನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆಯೆಂದರು. ಇಂದಿನ ವಿದ್ಯಾರ್ಥಿಗಳು ಸಿನಿಮಾ ನಟರಿಗೆ ಮಾರುಹೋಗಿದ್ದಾರೆ ಜಾನಪದ ಕಲಾವಿದರ ಜೊತೆ ಬಾಂಧÀವ್ಯವಿಲ್ಲದಂತಾಗಿದೆ, ಸಿನಿಮಾ ನಟರಿಂದಲೂ ಜಾನಪದ ಕಲಾಪ್ರಕಾರಗಳನ್ನು ಹೇಳಿಸುವುದರ ಮೂಲಕ ಯುವ ಸಮುದಾಯವನ್ನು ಜಾನಪದದತ್ತ ಸೆಳೆಯುವ ಪ್ರಯತ್ನ ಮಾಡಬೇಕಿದೆಯೆಂದು ಹಾಸ್ಯಮಯ ಔಚಿತ್ಯವನ್ನು ವ್ಯಕ್ತಪಡಿಸಿದರು, ಜಿಲ್ಲೆಯಲ್ಲಿ ಕಲಾವಿದರ ಕೈಪಿಡಿಯನ್ನು ತರುವಂತಹ ಪ್ರಯತ್ನವನ್ನು ಶೀಘ್ರವಾಗಿ ನೆರವೇರಿಸುವಂತೆ ಜಿಲ್ಲಾ ಕನ್ನಡ ಜಾನಪದ ಪರಿಷತ್ ಗೆ ತಿಳಿಸಿದರು, ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಔಚಿತ್ಯಪೂರ್ಣ ಮಾಹಿತಿಯನ್ನು ಕನ್ನಡ ಜಾನಪದ ಪರಿಷತ್ ಫೇಸ್ಬುಕ್,ಟ್ವಿಟರ್, ಯುಟ್ಯೂಬ್ ಜಾನಪದ ಆಫ್ ಮುಂತಾದವುಗಳ ಮೂಲಕ ಒದಗಿಸಲಾಗುತ್ತಿದೆಯೆಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಮಂಜೇಗೌಡರವರು ಕನ್ನಡ ಸಾಹಿತ್ಯ ಶ್ರೀಮಂತಗೊಳ್ಳಲು ಬೀಜ ಜಾನಪದದಿಂದ ಎರವಲು ಪಡೆಯಲಾಗಿದೆಯೆಂದರು, ಸಂಸ್ಕøತಿಗಳ ಮೂಲಬೇರು ಜಾನಪದದಲ್ಲಿದೆ, ಸಾಮಾಜಿಕವಾಗಿ ಬದುಕು ಮಾದರಿಯಾಗಬೇಕಾದರೆ ಜಾನಪದ ಸಂಸ್ಕಾರ ಅಗತ್ಯವೆಂದರು, ಗ್ರಾಮೀಣ ಸಂಸ್ಕøತಿ ಆಚಾರ-ವಿಚಾರಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕಿದೆಯೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಸಿದ್ಧಾರ್ಥ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಎಸ್.ಕುಮಾರ್‍ರವರು ಜೀವರಾಶಿಗಳು ಉಗಮದೊಂದಿಗೆ ಜನಪದ ಪ್ರಾರಂಭವಾಗಿದ್ದು, ವೈವಿದ್ಯತೆಯನ್ನು ಒಳಗೊಂಡಿದೆಯೆಂದರು, ವಿಜ್ಞಾನ ಗಿಡಮರಗಳಲ್ಲಿ ಅಡಕವಾಗಿರುವ ಔóಷದಿ ಗುಣಗಳನ್ನು ಪತ್ತೆ ಹಚ್ಚಲು ತೊಡಗಿದೆ, ಹಾಗೇಯೆ ಜಾನಪದ ಕಲಾಪ್ರಕಾರಗಳನ್ನು ಪತ್ತೆ ಹಚ್ಚಿ ಬಳಸುವ ಮೂಲಕ ಸ್ವಾಸ್ಥ ಸಮಾಜವನ್ನು ನಿರ್ಮಿಸಬೇಕಿದೆಯೆಂದರು. ವಿದ್ಯಾರ್ಥಿಗಳು ಜಾನಪದ ಸಂಸ್ಕøತಿಯನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬುಡ್ಗ ಜಂಗಂ ಕಲಾವಿದರಾದ ಶ್ರೀ ಎಸ್ ಮಾರಪ್ಪರವರನ್ನು ಹಾಗೂ ಜಾನಪದ ಗಾಯಕರಾದ ಪ್ರೊ. ಶಶಿಕುಮಾರ್‍ರವರನ್ನು ಸನ್ಮಾನಿಸಲಾಯಿತು. ಇಬ್ಬರು ತಮ್ಮ ಕಲಾಪ್ರಕಾರಗಳನ್ನು ಪ್ರಸ್ತುತಪಡಿಸಿದರು, ಉಪಸ್ಥಿತರಿದ್ದ ತುಮಕೂರು ತಾಲ್ಲೂಕು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಭಾಗ್ಯಲಕ್ಷ್ಮೀ ನಾಗರಾಜ್‍ರವರು ಹಾಗೂ ವಿದ್ಯಾರ್ಥಿನಿ ಕುಮಾರಿ ಅಶ್ವಿನಿ ಎಸ್. ರವರು ಜಾನಪದ ಗೀತೆಯನ್ನು ಹಾಡಿದರು, ಕಾರ್ಯಕ್ರಮದಲ್ಲಿ ಪ್ರೊ. ಆರಾಧ್ಯ,ಎಸ್.ಆರ್, ಕಜಾಪ ಪಧಾಧಿಕಾರಿಗಳಾದ ಶ್ರೀ ಪರಮೇಶ್ ಸಿಂಧಗಿ, ವರುಣ್, ಮಾಳಿಂಗರಾಯ, ವಿಜಯಲಕ್ಷ್ಮೀ ಉಪಸ್ಥಿತರಿದ್ದರು. ತುಮಕೂರು ಜಿಲ್ಲಾ ಕಜಾಪ ಕಾರ್ಯದರ್ಶಿಗಳಾದ ಶ್ರೀಮತಿ ಮಂಜುಳ ಲೋಕೇಶ್‍ರವರು ಕಾರ್ಯಕ್ರಮ ನಿರೂಪಿಸಿದರೆ, ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ತುಮಕೂರು ಜಿಲ್ಲಾ ಕಜಾಪ ಅಧ್ಯಕ್ಷರಾದ ಶ್ರೀ ಶ್ರೀನಿವಾಸಮೂರ್ತಿ ಎಲ್. ಗಂಗಾತನಯಸಿರಿರವರು ನಡೆಸಿರು, ಮುಬಿನ್ ತಾಜ್ ಪ್ರಾರ್ಥಿಸಿದರೆ, ತಾಲ್ಲೂಕು ಕಜಾಪ ಸದಸ್ಯರಾದ ನಂದಿನಿ ಬ್ರಹ್ಮದೇವರವರು ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ