ಮನುಷ್ಯ ಕಾಯಕ ಶ್ರದ್ಧೆ ರೂಢಿಸಿಕೊಳ್ಳಬೇಕು;ಶಿಮೂಶ

ಚಿತ್ರದುರ್ಗ:

             ಸಮಾಜದ ಆರೋಗ್ಯದ ಕಡೆ ಕಾಳಜಿ ನೀಡುವುದರ ಜೊತೆಗೆ ಮರ-ಗಿಡಗಳನ್ನು ನೆಡುವ ಮೂಲಕ ಲಯನ್ಸ್ ಕ್ಲಬ್ ಚಿತ್ರದುರ್ಗ ಫೋರ್ಟ್ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾದುದು ಎಂದು ಮುರುಘಾಮಠದ ಡಾ.ಶಿವಮೂರ್ತಿ ಶರಣರು ಮೆಚ್ಚುಗೆ ವ್ಯಕ್ತಪಡಿಸಿದರು.

            ಲಯನ್ಸ್ ಕ್ಲಬ್ ದೊಡ್ಡಬಳ್ಳಾಪುರ, ಲಯನ್ಸ್ ಕ್ಲಬ್ ಚಿತ್ರದುರ್ಗ ಫೋರ್ಟ್ ಇವರುಗಳ ಸಂಯುಕ್ತಾಶ್ರಯದಲ್ಲಿ ಮುರುಘಾಮಠದ ಅಲ್ಲಮಪ್ರಭು ಸಭಾಂಗಣದಲ್ಲಿ ಶನಿವಾರ ನಡೆದ ಅವಳಿ ಕಾರ್ಯಕ್ರಮ ಮತ್ತು ಸಾಮಾಜಿಕ ಸೇವಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.

             ಲಯನ್ಸ್ ಕ್ಲಬ್‍ಗಳು ಪರಿಸರವನ್ನು ಉಳಿಸುವುದಕ್ಕಾಗಿ ಅನೇಕ ಗಿಡಗಳನ್ನು ನೆಟ್ಟು ಹಸಿರುಕ್ರಾಂತಿಯನ್ನು ಮಾಡುತ್ತಿವೆ. ಶ್ರೀಮಠವು ಸಹಾ ಅನೇಕ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತ ಜನರಲ್ಲಿ ಮೂಢನಂಬಿಕೆಯನ್ನು ನಿವಾರಿಸಿ ವೈಚಾರಿಕತೆಯನ್ನು ಮೂಡಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ವರ್ಕಿಂಗ್ ಪರ್ಸನಾಲಿಟಿಗಿಂತ ವಾಕಿಂಗ್ ಪರ್ಸನಾಲಿಟಿ ಜನತೆಯಲ್ಲಿ ಹೆಚ್ಚಾಗಿದೆ ಎಂದರು.

              ಮಾನವ ಕಾಯಕ ಶ್ರದ್ದೆ ಮತ್ತು ಸೇವಾಮನೋಭಾವನೆಯನ್ನು ಹೊಂದಿದಾಗ ಮಾತ್ರ ಆರೋಗ್ಯವಂತನಾಗಿ ಬಹುದಿನಗಳ ಕಾಲ ಬದುಕಬಹುದು. ನಿಮ್ಮೆಲ್ಲರಿಗೂ ನಿರಂತರವಾಗಿ ಸೇವೆ ಮಾಡುವ ಮನಸ್ಸು ಹಾಗೂ ಶಕ್ತಿ ಕೊಡಲಿ ಎಂದು ನಾವಾದರೂ ಆಶಿಸುತ್ತೇವೆ ಎಂದು ಶರಣರು ಹೇಳಿದರು.

               ಲಯನ್ಸ್ ಕ್ಲಬ್ ದೊಡ್ಡಬಳ್ಳಾಪುರದ ಲ.ಹುಲಿಕಲ್ ನಟರಾಜ್ ಮಾತನಾಡಿ ಮನುಷ್ಯ ಮೌಢ್ಯತೆಯಿಂದ ಹೊರಬಂದು ವಿಚಾರವಂತನಾಗಿ ಸಮಾಜದಲ್ಲಿನ ಅನಿಷ್ಟ ಪಿಡುಗುಗಳನ್ನು ಹೋಗಲಾಡಿಸಬೇಕು. ಈ ನಿಟ್ಟಿನಲ್ಲಿ ಶ್ರೀಮಠದ ಕಾರ್ಯ ಶ್ಲಾಘನೀಯ ಎಂದು ಗುಣಗಾನ ಮಾಡಿದರು.

               ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಲ.ಕೆ.ವಿ.ಪ್ರಭುಸ್ವಾಮಿ ಮಾತನಾಡುತ್ತ ಸುಮಾರು ಒಂದು ಕೋಟಿ ಸೇವಾ ಕಾರ್ಯಕ್ರಮಗಳನ್ನು ವಿವರಿಸಿದರು.ಲಯನ್ಸ್ ಕ್ಲಬ್ ಚಿತ್ರದುರ್ಗ ಫೋರ್ಟ್‍ನ ಲ.ಪಿ.ನಾಗೇಂದ್ರಚಾರ್ ಹಸಿರು ಕರ್ನಾಟಕ ಇನ್ನು ಅನೇಕ ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಬಗ್ಗೆ ಮಾಹಿತಿ ನೀಡಿದರು.ಲಯನ್ಸ್ ಕ್ಲಬ್ ಚಿತ್ರದುರ್ಗ ಫೋರ್ಟ್‍ನ ಅಧ್ಯಕ್ಷೆ ಎಂ.ವಿ.ವೀಣ ಅಧ್ಯಕ್ಷತೆ ವಹಿಸಿದ್ದರು.

              ವಕೀಲರ ಸಂಘದ ಅಧ್ಯಕ್ಷ ಎನ್.ಬಿ.ವಿಶ್ವನಾಥ್, ಮಾಜಿ ಶಾಸಕ ಲ.ಟಿ.ಹೆಚ್.ಬಸವರಾಜ್, ಸುನಿತಾಮಲ್ಲಿಕಾರ್ಜುನ್, ಎಂ.ಟಿ.ಶಂಕರಪ್ಪ, ಎಂ.ವಿಜಯಕುಮಾರ್, ಲ.ಎಸ್.ಶಿವಮೂರ್ತಿ, ಬಂಡಿವಾಡ್, ಶಿವಾನಂದಮೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಲ.ಪ್ರೇಮಾದೇಸಾಯಿ ಪ್ರಾರ್ಥಿಸಿದರು. ಸ್ಥಾಪಕ ಅಧ್ಯಕ್ಷ ಲ.ಕೆ.ಎಸ್.ವಿಜಯ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap