ಯುದ್ದಕ್ಕಿಂತಲೂ ಅಪಾಯಕಾರಿ ದೇವರು ಮತ್ತು ಜಾತಿ ಧರ್ಮಗಳ ಜಂಜಾಟ

ಹರಪನಹಳ್ಳಿ:

  ಯುದ್ದಕ್ಕಿಂತಲೂ ಅಪಾಯಕಾರಿ ದೇವರು ಮತ್ತು ಜಾತಿ ಧರ್ಮಗಳ ಜಂಜಾಟ. ಜಾತಿ ಧರ್ಮದ ಹೆಸರಲ್ಲಿ ಕಿತ್ತಾಟ ಬಿಟ್ಟು ಒಗ್ಗಟ್ಟಾಗಿ ಸಹಬಾಳಿನ ಮನೋಭಾವ ಪ್ರತಿಯೊಬ್ಬರಲ್ಲಿ ಬಂದಾಗ ಮಾತ್ರ ದೇಶದ ಸಮಗ್ರ ಪ್ರಗತಿಗೆ ನಾಂದಿಯಾಗುವುದು ಎಂದು ತಹಸಿಲ್ದಾರ್ ಡಾ.ಮಧು ಅಭಿಪ್ರಾಯ ವ್ಯಕ್ತಪಡಿಸಿದರು.

   ಪಟ್ಟಣದ ತಾಲೂಕು ಪಂಚಾಯಿತಿ ಆವರಣದ ಸಾಮಥ್ರ್ಯಸೌಧದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಬ್ರಹ್ಮಶ್ರೀ ಶ್ರೀ ನಾರಾಯಣಗುರುಗಳ 164 ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಮನುಷ್ಯನ ಆತ್ಮಕ್ಕೆ ಸ್ವಾತಂತ್ರ್ಯದ ಅವಶ್ಯಕತೆಯಿದೆ. ಆತ್ಮಕ್ಕೆ ಸಿಕ್ಕ ಸ್ವಾತಂತ್ರವೇ ನಿಜವಾದ ಸ್ವಾತಂತ್ರ ಎಂಬ ಮಂತ್ರ ಪಠಿಸಿದವರು ಬ್ರಹ್ಮಶ್ರಿ ನಾರಾಯಣ ಗುರುಗಳು 18 ನೇ ಶತಮಾನದಲ್ಲೇ ಮೌಢ್ಯ ಹಾಗೂ ಅಶ್ಪೃ್ಶ್ಯತೆ  ವಿರುದ್ದ ಕ್ರಾಂತಿಕಾರಿ ಹೋರಾಟವನ್ನೇ ಮಾಡಿದವರು. ನಿಜವಾದ ಮಾನವೀಯತೆ ಹಾಗೂ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣದಿಂದ ಮಾತ್ರ ಸಾದ್ಯ ಎಂದು ಚಳುವಳಿಯನ್ನೆ ಆರಂಭಿಸಿದ್ದರು. ಇಂತಹ ಸೃಜನಶೀಲ, ಕಾರ್ಯಶೀಲ ಗುರುವಿನ ಜಯಂತೋತ್ಸವ ಅರ್ಥಪೂರ್ಣ ಎಂದರು.

   ಪುರಸಭೆ ಅಧ್ಯಕ್ಷ ಹೆಚ್.ಕೆ.ಹಾಲೇಶ್ ಮಾತನಾಡಿ. ಮೌಢ್ಯತೆ ವಿರೋಧಿಸಿ ಪಾದಯಾತ್ರೆಯ ಮೂಲಕ ಅರಿವು ಮೂಡಿಸಿದ್ದ ಅಪ್ರತಿಮ ಗುರುಗಳು ದೇಶದ ಕಟ್ಟಕಡೆಯ ವ್ಯಕ್ತಿಕೂಡ ಶಿಕ್ಷಣ ಹೊಂದಬೇಕು ಎಂಬ ಮಹದಾಶಯ ಹೊಂದಿದವರಾಗಿದ್ದರು. ಜಾತ್ಯಾತೀತ ಮನೋಭಾವನೆಯಿಂದ ನಾರಾಯಣ ಗುರುಗಳ ಆಶಯಗಳನ್ನು ಹಿಂಬಾಲಿಸಿದರೆ ಅವರ ಜಯಂತೋತ್ಸವಕ್ಕೆ ಅರ್ಥಬರುತ್ತದೆ. ಮಹಾತ್ಮ ಗಾಂಧೀಜಿಯವರೆ ನಾರಾಯಣಗುರುಗಳನ್ನು ಶ್ರೇಷ್ಟಗುರು ಎಂದು ಒಪ್ಪಿಕೊಂಡಿದ್ದರು. ಬಲಿ ಸಂಸ್ಕೃತಿಯನ್ನು ಬಿಟ್ಟು ಶಿಕ್ಷಿತರಾಗಿ ಸಾಮಾಜಿಕ ಆರ್ಥಿಕ ಸದೃಢರಾಗುವಲ್ಲಿ ಸಮಾಜ ಸಂಘಟಿತರಾಗಬೇಕಿದೆ ಎಂದರು.

   ಪ್ರೋ. ಕೆ.ಎನ್.ಮಂಜುನಾಥ್ ಉಪನ್ಯಾಸ ನೀಡಿ ಮಾತನಾಡಿ. ಬಾಲ್ಯದಲ್ಲಿಯೇ ಹೋರಾಟದ ಮನೋಭಾವ ಹೊಂದಿದ್ದ ಗುರುಗಳು, ಕೇರಳದಲ್ಲಿದ್ದ ಕೆಳವರ್ಗದವರ ಅತಿಯಾದ ಶೋಷಣೆಯನ್ನು ವಿರೋಧಿಸಿ ಅಶ್ಪೃ್ಶ್ಯತೆ  ಮನೆ ಪಾಠ ಆರಂಭಿಸಿದ್ದರು. ಇಂದೀಗೂ ಕೇರಳದಲ್ಲಿ ಅಶ್ಪೃ್ಶ್ಯತೆ ಜೀವಂತವಾಗಿದೆ ಎನ್ನಲು ನೆರೆ ಹಾವಳಿಯಿಂದ ಹಾನಿಯಾಗಿದ್ದ ಕೇರಳ ಪ್ರಾಂತಗಳಲ್ಲಿ ತೆರೆಯಲಾಗಿದ್ದ ಗಂಜೀಕೇಂದ್ರದಲ್ಲಿ ಕೆಳವರ್ಗದವರು ಮಾಡಿದ ಗಂಜೀ ಸ್ವೀಕರಿಸಲು ಮೇಲ್ವರ್ಗದವರು ನಿರಾಕರಿಸಿರುವುದು ಜೀವಂತ ಉದಾಹರಣೆಯಾಗಿದೆ. ರಕ್ತ ರಹಿತ ಕ್ರಾಂತಿಯಿಂದ ಈಡಿಗ ಸಮುದಾಯಕ್ಕೆ ನ್ಯಾಯ ಒದಗಿಸಿದವರು ನಾರಾಯಣಗುರುಗಳು. ದಲಿತ ಮಕ್ಕಳೇ ಪೂಜಾರಿಗಳಾಗಬೇಕು ದಲಿತರೇ ದೇವಸ್ಥಾನದ ಉಸ್ತುವಾರಿಗಳಾಗಬೇಕು ಎಂದು ಹೋರಾಟ ಮಾಡಿದವರು. ಇವರ ಜಯಂತಿ ಮಾಡಿದಾಕ್ಷಣ ಜಾತಿ ವ್ಯವಸ್ಥೆ ನಿರ್ಮೂಲವಾಗಿದೆಯೇ ? ಜಾತಿ ವ್ಯವಸ್ಥೆ ನಿರ್ಮೂಲವಾಗುವುವರೆಗೂ ಮಹನೀಯರ ಜಯಂತಿಗಳಿಗೆ ಅರ್ಥಬರುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಪಿಎಸ್‍ಐ ಉಮೇಶ್ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.

  ತಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ ಸಂತೋಷ್ ಕುಮಾರ್, ಜಿಪಂ ಸದಸ್ಯೆ ಸುವರ್ಣ ಆರುಂಡಿ ನಾಗರಾಜ್, ಸಮಾಜದ ತಾಲೂಕು ಗೌರವಾಧ್ಯಕ್ಷ ಈ.ದೇವದಾಸ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಡಿ.ಸಿದ್ದಪ್ಪ, ಡಾ.ಮಂಜುನಾಥ್ ಉತ್ತಂಗಿ, ಹೆಚ್.ಬಿ.ಪರಶುರಾಮ್, ಪುರಸಭೆ ಉಪಾಧ್ಯಕ್ಷ ಕೆ.ಸತ್ಯನಾರಾಯಣ, ತಾಪಂ ಉಪಾಧ್ಯಕ್ಷ ಮಂಜ್ಯಾನಾಯ್ಕ್, ಸದಸ್ಯ ನಾಗರಾಜ್, ನಿಚ್ಚವ್ವನಹಳ್ಳಿ ಭೀಮಪ್ಪ, ತೊಗರಿಕಟ್ಟೆ ದುರುಗಪ್ಪ, ಇ. ವೆಂಕಟೇಶ್, ಆನಂದಪ್ಪ, ಇಓ ಆರ್.ತಿಪ್ಪೇಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link