ಸಂಘಟಿತ ಹೋರಾಟವಿದ್ದರೆ ಮಾತ್ರ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ- ಷಡಾಕ್ಷರಿಮುನಿ ಸ್ವಾಮೀಜಿ

ಜಗಳೂರು :

      ಸಂಘಟಿತ ಹೋರಾಟವಿದ್ದರೆ ಮಾತ್ರ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ, ಒಗ್ಗಟ್ಟು ಒಡೆಯದೇ ಎಲ್ಲಾ ಸಮುದಾಯದವರೊಂದಿಗೆ ಸಾಮರಸ್ಯ ಬೆರೆತು ಜೀವನ ನಡೆಸುವ ಮೂಲಕ ಮಾದರಿ ಸಂಘಟನೆ ಎನಿಸಿಕೊಳ್ಳಬೇಕೆಂದು ಹಿರಿಯೂರಿನ ಆದಿಜಾಂಬವ ಮಠದ ಷಡಾಕ್ಷರಿಮುನಿ ಸ್ವಾಮೀಜಿ ಹೇಳಿದರು.

      ತಾಲೂಕಿನ ಚಿಕ್ಕಬನ್ನಿಹಟ್ಟಿ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿಯ ನೂತನ ಗ್ರಾಮಶಾಖೆ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಅಸಂಖ್ಯಾತ ಬಹುಜನರ ಜೀವನಕ್ಕೆ ಸಾಕ್ಷಿಯಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸಿನ ದೇಶವನ್ನು ನಿರ್ಮಾಣ ಮಾಡಲು ಪ್ರತಿಯೊಬ್ಬರು ಅವರಂತೆಯೇ ಸ್ವಾಭಿಮಾನದ ಹೋರಾಟವನ್ನು ಮೈಗೂಡಿಸಿಕೊಳ್ಳಬೇಕು. ಆಸೆ ಆಮೀಷಗಳಿಗೆ ಒಳಗಾಗದೆ ಪ್ರೋ.ಬಿ.ಕೃಷ್ಣಪ್ಪ ಅವರಂತೆ ಸಮಾಜದಲ್ಲಿ ತುಳಿತಕ್ಕೆ ಒಳಗಾದಂತಹ ಅಥವಾ ಸೌಲಭ್ಯಗಳಿಂದ ವಂಚಿತವಾದಂತಹ ಯಾವುದೇ ಸಮುದಾಯವಿದ್ದರೂ ಸಹ ಅಂತವರನ್ನು ಗುರುತಿಸಿ ಸೌಲಭ್ಯ ದೊರಕಿಸಿಕೊಡಲು ದಲಿತ ಸಂಘರ್ಷ ಸಮಿತಿ ಶ್ರಮಿಸಬೇಕು. ಇದರ ಜೊತೆಗೆ ಮೂಡನಂಭಿಕೆಗಳನ್ನು ದೂರವಿಟ್ಟು ಶಿಕ್ಷಣವಂತರಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುಂದೆ ಬರಲು ಯುವಕರು ಗಮನಹರಿಸಬೇಕು ಎಂದರು.

      ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಿಂದಲೇ ಇಂದು ಶೋಷಿತ ಸಮುದಾಯಗಳು ಮುಂದುವರೆದ ಸಮಾಜಗಳ ಮಧ್ಯ ಸಮಾನತೆಯಿಂದ ಬಾಳುತ್ತಿವೆ ಎಂದರು.

     ಡಿಎಸ್‍ಎಸ್ ಜಿಲ್ಲಾ ಸಮಿತಿ ಸಂಚಾಲಕ ಹೂವಿನಮಡು ಅಂಜಿನಪ್ಪ ಮಾತನಾಡಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅನೇಕ ಹೋರಾಟಗಳ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಹಾಗೂ ಸರ್ಕಾರದ ಸೌಲಭ್ಯಗಳಿಗಾಗಿ ನಮ್ಮ ಹಕ್ಕುಗಳನ್ನು ಪಡೆಯಲು ಶ್ರಮಿಸುತ್ತಿವೆ ಎಂದರು. 

      ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ಡಿಎಸ್‍ಎಸ್ ರಾಜ್ಯ ಸಂಘಟನಾ ಸಂಚಾಲಕ ಕಬ್ಬಳ್ಳಿ ಮೈಲಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಪುಣಬಗಟ್ಟ ನಿಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿಗೌಡ, ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಡಿಎಸ್‍ಎಸ್ ಸಂಚಾಲಕ ಬಿ.ಸತೀಶ್, ಮುಖಂಡರಾದ ಪೂಜಾರ್‍ಸಿದ್ದಪ್ಪ, ಕುಬೇರಪ್ಪ, ರಾಜಪ್ಪ, ವಿಜಯ್‍ಕೆಂಚೋಳ್, ರವಿಕುಮಾರ್, ಬಸವರಾಜ್, ಉಮೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link