ತುಮಕೂರು
ಮಹಾನಗರ ಪಾಲಿಕೆ 24ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಓಂಕಾರ್ ವಿರುದ್ದ ಸೋಲಿನ ಹತಾಶೆಯಿಂದ ಪಕ್ಷೇತರ ಅಭ್ಯರ್ಥಿಯೊಬ್ಬರು ಬಿಜೆಪಿ ಪಕ್ಷವು ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಪಕ್ಷದ ಟಿಕೆಟ್‍ನ್ನು ನೀಡಿದೆ ಎಂದು ಅಪಪ್ರಚಾರ ಮಾಡುತಿದ್ದಾರೆ.
ಓಂಕಾರ್‍ರವರು ತುಮಕೂರು ನಗರದ ನಿವಾಸಿಯಾಗಿದ್ದು, ವಿದ್ಯಾರ್ಥಿದೆಸೆಯಿಂದಲೇ ಎಬಿವಿಪಿ ಸಂಘಟನೆಯಲ್ಲಿದ್ದವರು, ಪ್ರಸ್ತುತ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದಲ್ಲಿ ರಾಜ್ಯ ಕಾರ್ಯಕರಣಿ ಸದಸ್ಯನಾಗಿ ಜವಾಬ್ದಾರಿ ಹೊಂದಿರುತ್ತಾರೆ.
ಭಾರತೀಯ ಜನತಾ ಪಾರ್ಟಿಯ 24ನೇ ವಾರ್ಡಿನ ಆಧಿಕೃತ ಅಭ್ಯರ್ಥಿ ಓಂಕಾರ್‍ರವರೇ, ಇದರಲ್ಲಿ ಯಾವುದೇ ಗೊಂದಲಗಳಲ್ಲ ಎಂದು ಸಾರ್ವಜನಿಕರ ಗಮನಕ್ಕೆ ತರಲು ಭಾರತೀಯ ಜನತಾ ಪಕ್ಷ ತುಮಕೂರು ನಗರ ಮಂಡಲ ಈ ಮೂಲಕ ತಿಳಿಸುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ