ಪೊಲೀಸ್ ಇಲಾಖೆಯಿಂದ ದೂರು ಪೆಟ್ಟಿಗೆ

ಹಿರಿಯೂರು:
             ನಗರದ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯ ಓಬವ್ವ ಪಡೆ ವತಿಯಿಂದ ನೂತನವಾಗಿ ದೂರು ಪೆಟ್ಟಿಗೆಯನ್ನು ಸ್ಥಾಪಿಸಲಾಯಿತು.
                    ಈ ಸಂದರ್ಭದಲ್ಲಿ ಮಾತನಾಡಿದ ಡಿ.ವೈ.ಎಸ್.ಪಿ ವೆಂಕಟಪ್ಪನಾಯಕ ರವರು ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಈ ದೂರು ಪೆಟ್ಟಿಗೆಯನ್ನು ಸ್ಥಾಪಿಸಲಾಗಿದೆ, ವಿದ್ಯಾರ್ಥಿನಿಯರು ತಮ್ಮ ಯಾವುದೇ ದೂರುಗಳು ಇದ್ದಲ್ಲಿ ಲಿಖಿತ ರೂಪದಲ್ಲಿ ಬರೆದು ಈ ದೂರು ಪೆಟ್ಟಿಗೆಗೆ ಹಾಕಬಹುದು ಇಲಾಖೆ ಮುಂದಿನ ಕ್ರಮ ಕೈಗೊಳ್ಳುತ್ತದೆ ಎಂದರು.
                ಈ ಸಂದರ್ಭದಲ್ಲಿ ನಗರಠಾಣೆ ಪಿ.ಎಸ್.ಐ ಮಂಜುನಾಥ್, ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಡಿ.ಚಂದ್ರಶೇಖರಪ್ಪ, ಪ್ರಾಧ್ಯಾಪಕರಾದ ಡಾ.ರವಿಂಚಂದ್ರನ್ ಹಾಗೂ ವಿದ್ಯಾರ್ಥಿನಿಯರು ಇದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link