ಚಿತ್ರದುರ್ಗ;
ನಗರಸಭೆ ಚುನಾವಣೆಯಲ್ಲಿ ಮತದಾರರು ತಮ್ಮ ಪಕ್ಷಕ್ಕೆ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸಿಕೊಟ್ಟರೆ ಬಡವರಿಗೆ ಹಂತ ಹಂತವಾಗಿ ವಸತಿ ವ್ಯವಸ್ಥೆ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಭರವಸೆ ನೀಡಿದರು
ಮಂಗಳವಾರ ನಗರಸಭೆಯ ಒಂದನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ನಾಗಮ್ಮ ಅವರ ಪರವಾಗಿ ಬಿರುಸಿನ ಮತಯಾಚನೆ ನಡೆಸಿದ ಬಳಿಕ ದಾರುಕಾ ಬಡಾವಣೆಯಲ್ಲಿ ಸಾರ್ವಜನಿಕು ಮತ್ತು ಕಾರ್ಯರ್ತರನ್ನು ಉದ್ದೇಶಿಸಿ ಮಾತನಾಡಿದರು
ಕಾಂಗ್ರೆಸ್ ಮತ್ತು ಜೆಡಿಎಸ್ನವರು ಸೇರಿಕೊಂಡು ನಗರಸಭೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸಿದ್ದು, ಕೋಟ್ಯಾಂತರ ರೂಪಾಯಿ ದುರಪಯೋಗವಾಗಿದೆ. ಹಾಗಾಗಿ ಮತ್ತೆ ಎರಡೂ ಪಕ್ಷಗಳಿಗೆ ಮತಹಾಕಿ ಮೋಸ ಹೋಗಬೇಡಿ ಎಂದು ಕರೆ ನೀಡಿದರು.
1ನೇ ವಾರ್ಡಿನಲ್ಲಿ ಜಾತ್ಯಾತೀತ ಜನತಾ ಜನತಾ ದಳದ ಅಭ್ಯರ್ಥಿಯಾಗಿರುವ ರಾಜೇಶ್ ಈ ಹಿಂದೆ ತಮ್ಮನ್ನು ಗೆಲ್ಲಿಸಿದ ಜನರಿಗೆ ಯಾವುದೇ ಸೌಲಬ್ಯ ಕಲ್ಪಿಸಿಕೊಡದೆ ವಂಚನೆ ಮಾಡಿದ್ದಾರೆ. ಈ ಕಾರಣಕ್ಕಾಗಿ ಅವರಿಗೆ ಯಾರೂ ಮತಹಾಕಬಾರದು.ಅವರಿಗೆ ಬೆಂಬಲ ನೀಡಿ ಮೋಸ ಹೋಗಬೇಡಿ. ನಮ್ಮ ಪಕ್ಷದ ಅಭ್ಯರ್ಥಿ ನಾಗಮ್ಮ ಅವರಿಗೆ ಅತ್ಯಧಿಕ ಮತಗಳಿಂದ ಆಯ್ಕೆ ಮಾಡಬೇಕು. ಈ ವಾರ್ಡಿಗೆ ಬಿಜೆಪಿ ಉತ್ತಮ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದೆ. ಈ ಕಾರಣಕ್ಕಾಗಿ ಬೆಂಬಲಿಸಬೇಕೆಂದರು
ನಗರಸಭೆ ಚುನಾವಣೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. 25ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲು ಗುರಿ ಹಾಕಿಕೊಂಡಿದ್ದೇವೆ. ಚುನಾವಣೆಯಲ್ಲಿ ಎಲ್ಲಾ ವಾರ್ಡಿನಲ್ಲಿ ಅರ್ಹರಿಗೆ ಟಿಕೆಟ್ ಕೊಡಲಾಗಿದೆ. ದಲಿತರು, ಹಿಂದುಳಿದವರು, ಮುಸ್ಲಿಂರು, ಲಿಂಗಾಯತರು ಸೇರಿದಂತೆ ಎಲ್ಲಾ ಜಾತಿಗಳಿಗೂ ಟಿಕೆಟ್ ಕೊಟ್ಟಿದ್ದೇವೆ ಎಂದು ಹೇಳಿದರು
ಈ ಚುನಾವಣೆಯಲ್ಲಿ ಬಿಜೆಪಿಯನ್ನು ಮತದಾರರು ಗೆಲ್ಲಿಸಿ ಅಧಿಕಾರ ಕೊಟ್ಟರೆ ಬಡವರಿಗೆ ನಗರಸಭೆಯಿಂದ ವಸತಿ ಸೌಲಬ್ಯ ಕಲ್ಪಿಸಿಕೊಡಲಾಗುವುದು. ನಗರದಲ್ಲಿ ಸಾವಿರಾರು ಕುಟುಂಬಗಳಿಗೆ ನಿವೇಶನ ಮತ್ತು ಮನೆ ಇಲ್ಲ. ಬಡವರು ಸುಮಾರು 13 ಸಾವಿರ ಅರ್ಜಿ ಹಾಕಿದ್ದಾರೆ. ಎಲ್ಲರಿಗೂ ಈ ಸೌಲಬ್ಯವನ್ನು ಒದಗಿಸಿಕೊಡಲು ಸುಮಾರು ಒಂದು ಸಾವಿರ ಎಕರೆ ಬೇಕಾಗುತ್ತದೆ. ಸಾಧ್ಯವಾದಷ್ಟು ಅರ್ಹರು ಮತ್ತು ಅತೀ ಬಡವರಿಗೆ ಈ ಸೌಲಬ್ಯ ದೊರೆಕಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಪ್ಪಾರೆಡ್ಡಿ ಭರವಸೆ ನೀಡಿದರು
ಇದಕ್ಕೂ ಮೊದಲು ಶಾಸಕರು ಗೋಕಟ್ಟೆಯಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸಿದರು. ಗೋಕಟ್ಟೆ, ಸ್ವಾಮಿ ವಿವೇಕಾನಂದ ನಗರ, ಜಟ್ಪಟ್ನಗರ, ದಾರುಕಾಬಡಾವಣೆ, ಜೋಗಿಮಟ್ಟಿ ರಸ್ತೆ ಸೇರಿದಂತೆ 1ನೇ ವಾರ್ಡಿನ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ನಾಗಮ್ಮ ಅವರ ಪರವಾಗಿ ಮನೆ ಮನೆಗೆ ತೆರಳಿ ಮತಯಾಚಿಸಿದರು
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ನಾಗಮ್ಮ, ನಗರಸಭೆ ಮಾಜಿ ಸದಸ್ಯ ಮಹೇಶ್, ಮುಖಂಡರಾದ ಶಿವಕುಮಾರ್, ಅಶೋಕ್, ರಾಮಸ್ವಾಮಿ, ಜಯರಾಮ್, ಓಂಕಾರ್ ಇನ್ನಿತರರು ಹಾಜರಿದ್ದರು.
ವಿವಿಧ ವಾರ್ಡ್ಗಳಲ್ಲಿ ಮತಯಾಚನೆ;
ಶಾಸಕ ತಿಪ್ಪಾರೆಡ್ಡಿ ಅವರು ಮಂಗಳವಾರ ಇಡೀ ದಿನ ಬಿಡುವಿಲ್ಲದಂತೆ ವಿವಿಧ ವಾರ್ಡ್ಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಮತಯಾಚನೆ ಮಾಡಿದರು.
ಬೆಳಿಗ್ಗೆಯಿಂದಲೇ ನೂರಾರು ಮುಖಂಡರು, ಕಾರ್ಯಕರ್ತರ ಜೊತೆಗೆ ವಿವಿಧ ವಾರ್ಡ್ಗಳಲ್ಲಿ ಮನೆ ಮನೆಗೆ ಬೇಟಿ ಕೊಟ್ಟು ಅಭಿವೃದ್ದಿಯ ದೃಷ್ಟಿಯಿಂದ ಬಿಜೆಪಿಗೆ ಬೆಂಬಲಿಸುವಂತೆ ಮತದಾರರನ್ನು ವಿನಂತಿಸಿಕೊಂಡರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ