ಹಾಲು ಹೆಚ್ಚಳದ ಪೌಡರ್ ಪಡೆಯುವಲ್ಲಿ ರೈತರ ಹಿಂದೆಟು

ಪಾವಗಡ :-

ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯದೆ ಜಾನುವಾರುಗಳ ಫಸಲಿಕರಣ ಶಿಭಿರ ಆಯೋಜನೆ ರೈತರಿಗೆ ನೀಡಲು ತಂದಿದ್ದಾ ಹಾಲು ಹೆಚ್ಚಳದ ಪೌಡರ್ ಪಡೆಯುವಲ್ಲಿ ರೈತರು ಹಿಂದೆಟು ಹಾಕಿದ ಘಟನೆ ಕೆ.ರಾಮಪುರ ಗ್ರಾಮದಲ್ಲಿ ಬುದವಾರ ನಡೆದಿದೆ.

ಕರ್ನಾಟಕ ಜಾನುವಾರು ಅಭಿವೃದ್ದಿ ಸಂಸ್ಥೆ ಬೆಂಗಳೂರು , ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳು ಪಾವಗಡ ಸಂಯುಕ್ತಶ್ರಯದಲ್ಲಿ ಜಾನುವಾರುಗಳ ಫಸಲಿಕರಣ ಹಾಗೂ ರೈತರಿಗೆ ಪಶುಪಾಲನಾ ಜಾಗೃತಿ ಕಾರ್ಯಕ್ರಮವನ್ನು ತಾಲ್ಲೂಕಿನ ಕೆ.ರಾಮಪುರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು , ಕಾರ್ಯಕ್ರಮದಲ್ಲಿ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿದರ್ಶಕರಾದ ಡಾ,ಆರ್.ಎಂ.ನಾಗಭೂಷಣರವರು ಮಾತನಾಡಿ ಗ್ರಾಮದ ರೈತರು ಸಾಕಿರುವಾ ಹಸುಗಳಲ್ಲಿನ ತೊಂದರೆಗಳು ಹಾಗೂ ಸಕಾಲದಲ್ಲಿ ರೈತರು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಗ್ರಾಮದ ರೈತರಿಗೆ ಯಾವುದೇ ಮಾಹಿತಿ ನೀಡದೆ ಅಥವಾ ಟಾಮ್ ಟಾಮ್ ಹೊಡೆಸದೆ ಏಕಾಏಕಿ ಕಾರ್ಯಕ್ರಮ ಆಯೊಜಿಸಿದ ಕಾರಣ ಸಾಕಷ್ಟು ರೈತರಿಗೆ ಮಾಹಿತಿ ಇಲ್ಲದ ಕಾರಣ ಶಿಬಿರದಲ್ಲಿ ಭಾಗಿಯಾಗಿಯಾಗಿರುವುದಿಲ್ಲ ಹಾಗೂ ಯಾವಾ ಉದ್ದೇಶಕ್ಕೆ ಈ ಕಾರ್ಯಕ್ರಮವನ್ನು ಇಲ್ಲಿ ಆಯೋಜನೆ ಮಾಡಲಾಗಿದೆ ಎಂದು ರೈತರೆ ಗುಸುಗುಸು ಮಾತನಾಡುತ್ತಿದ್ದದು ಆಲವು ಆನುಮಾನಗಳಿಗೆ ಕಾರಣವಾಗಿದೆ.

ಜಾನುವಾರುಗಳ ಫಸಲಿಕರಣ ಹಾಗೂ ರೈತರಿಗೆ ಪಶುಪಾಲನಾ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲು ತಾಲ್ಲೂಕು ಪಂಚಾಯ್ತಿ ಸಭೆಯಲ್ಲಿ ಕಾರ್ಯಕ್ರಮದ ಪ್ರಯೊಗಳನ್ನು ತಿಳಿಸಿ ಸಭೆ ಅನುಮೊದಿಸಿದರೆ ಮಾತ್ರ ಕಾರ್ಯಕ್ರವನ್ನು ನಡೆಸಬೇಕಾಗಿದೆ ಆದರೆ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿದರ್ಶಕರಾದ ಡಾ,ಆರ್.ಎಂ.ನಾಗಭೂಷಣರವರು ತಾ.ಪಂ.ನಿಂದ ಅನುಮೊದನೆ ಪಡೆಯದೇ ಈಶಿಬಿರಗಳನ್ನು ನಡೆಸುತ್ತಿದ್ದು ಹಾಗೂ ಇದೇ ತಿಂಗಳು ಆಗಸ್ಟ್ ಮೂವತ್ತರಂದು ತಾ.ಪಂ.ಸಾಮಾನ್ಯ ಸಭೆ ನಡೆಯಲಿದ್ದು ಅನುಮೊದನೆ ಪಡೆಯದೆ ಯಾವರೀತಿ ಶಿಬಿರಗಳನ್ನು ನಡೆಸುತ್ತಿದ್ದಾರೆಂಬುದು ತಿಳಿದು ಬಂದಿರುವುದಿಲ್ಲ.

ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ರೈತರು ಹೊಂದಿರುವಾ ಹಸುಗಳಲ್ಲಿ ಹಾಲು ಹೆಚ್ಚಳವಾಗಲು ಪೌಡರ್ ನೀಡಲಾಗುತ್ತದೆ ಇಲಾಖೆವತಿಯಿಂದ ಪ್ಯಾಕೆಟ್‍ನಲ್ಲಿ ಪೌಡರ್ ಸರಬರಾಜು ಮಾಡಲಾಗುತ್ತದೆ, ಆದರೆ ಪ್ಯಾಕೆಟ್‍ಗಳನ್ನು ಹರಿದು ಒಂದು ಪ್ಲಾಸ್ಟೀಕ್ ಬಾಕ್ಸ್‍ನಲ್ಲಿ ತುಂಬಿ ತಂದಿದ್ದಾ ಪೌಡರ್ ಯಾವುದೇ ರೈತರು ಪಡೆದಿರುವುದಿಲ್ಲ ಕಾರಣ ಆವದಿ ಮುಗಿದಿರುವಾ ಪೌಡರ್ ಆದಲ್ಲಿ ರೈತರು ಹೊಂದಿರುವಾ ಹಸುಗಳಲ್ಲಿ ಹಾಲಿನ ಪ್ರಮಾಣ ಕಡಿಮೆಯಾಗಿ ಆರೋಗ್ಯದಲ್ಲಿ ಏರುಪೇರಾಗಿ ವರ್ಷಗಳೆ ಕಳೆದರು ಮತ್ತೆ ಹಾಲು ಹೆಚ್ಚಳವಾಗುವುದಿಲ್ಲ ಎಂಬ ಭಯದಿಂದ ಪಡೆದಿರುವುದಿಲ್ಲ.

ಆಗಸ್ಟ್ ಇಪ್ಪತ್ತರಂದು ಮದುಗಿರಿಗೆ ವರ್ಗವಣೆಗೊಂಡಿದ್ದು ರಿಲೀವ್ ಆಗದೇ ಹಾಗೂ ಶಿಭಿರಗಳನ್ನು ನಡೆಸಲು ತಾಲ್ಲೂಕು ಪಂಚಾಯ್ತಿ ಅನುಮೊದನೆ ಪಡೆಯದೆ ಶಿಭಿರಗಳನ್ನು ನಡೆಸುತ್ತಿದ್ದು ಹಾಗೂ ಸರ್ಕಾರದಿಂದ ರೈತರಿಗೆ ನೀಡಬೇಕಾದ ಸೌಲತ್ತುಗಳನ್ನು ನೀಡುವಲ್ಲಿ ರೈತರಿಗೆ ಗೊಂದಲಸೃಷ್ಟೀಸಿ ಕಾರ್ಯಕ್ರಮ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿ ಇಲಾಖೆಯ ಮಾನದಂಡಗಳನ್ನೆ ಗಾಳಿಗೆತೂರಿದಂತೆ ಕಂಡುಬರುತ್ತಿದೆ.

Recent Articles

spot_img

Related Stories

Share via
Copy link