ಅನಾದಿಕಾಲದಿಂದಲೂ ಸ್ತ್ರೀಯರನ್ನು ಭಾರತದಲ್ಲಿ ಗೌರವಿಸುತ್ತಲೇ ಬಂದಿದ್ದೇವೆ : ಡಾ ಧರಣೇಂದ್ರಯ್ಯ

ಹಿರಿಯೂರು :

               ಅನಾದಿಕಾಲದಿಂದಲೂ ಸ್ತ್ರೀಯರನ್ನು ಭಾರತದಲ್ಲಿ ಗೌರವಿಸುತ್ತಲೇ ಬಂದಿದ್ದೇವೆ. ಎಲ್ಲಿ ಸ್ತ್ರೀಯರನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬುದಾಗಿ ನಮ್ಮ ಪೂರ್ವಿಕರು ಬಾವಿಸಿದ್ದರು ಎಂಬುದಾಗಿ ವಾಣಿ ಕಾಲೇಜಿನ ಪ್ರಾಂಶುಪಾರಾದ ಡಾ|| ಡಿ.ಧರಣೇಂದ್ರಯ್ಯ ಹೇಳಿದರು.

               ನಗರದ ವಾಣಿಸಕ್ಕರೆ ಪ್ರಥಮದರ್ಜೆ ಕಾಲೇಜಿನಲ್ಲಿ, ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಲಾಗಿದ್ದ ಮಹಿಳಾ ಸಬಲೀಕರಣ ಮತ್ತು ಮಹಿಳಾ ಶಕ್ತಿ ಎನ್ನುವ ವಿಷಯದಲ್ಲಿ 2 ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
              ಭಾರತ್ ಸ್ಕೌಟ್ಸ್ & ಗೈಡ್ಸ್‍ನ ಜಿಲ್ಲಾ ಆಯುಕ್ತರಾದ ಶ್ರೀಮತಿ ಶಶಿಕಲಾರವಿಶಂಕರ್ ಮಾತನಾಡಿ, “ಮನುಸ್ಮøತಿ” ಯಲ್ಲಿನ ನಾರಿ ನಸ್ವತಂತ್ರ್ಯಃ ಎನ್ನುವ ಶ್ಲೋಕದಿಂದ ನಾರಿ ಸ್ವತಂತ್ರ್ಯಃ ಎನ್ನುವಂತಾಗಬೇಕು ಎಂದರು.
ರೋಟರಿಯ ಅಧ್ಯಕ್ಷರಾದ ಎಂ.ಎಸ್.ರಾಘವೇಂದ್ರ ರವರು ಮಾತನಾಡಿ ಈ ಕಾರ್ಯಾಗಾರ ಇಂದಿನ ಸಮಾಜಕ್ಕೆ ಬಹಳ ಅತ್ಯವಶ್ಯಕ, ಮಹಿಳೆಯರು ತಮ್ಮ ಒತ್ತಡವನ್ನು ಹೇಗೆ ನಿರ್ವಹಣೆ ಮಾಡಿಕೊಳ್ಳಬಹುದು ಎಂಬುದನ್ನು ಈ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಗುವುದು ಎಂದರು.
              ತರಬೇತುದಾರರಾದ ಶ್ರೀಮತಿ ಅಸ್ಮಿತಾ ದೇಸಾಯಿ, ಇನ್ನರ್‍ವ್ಹೀಲ್ ಅಧ್ಯಕ್ಷರಾದ ಸ್ವಪ್ನ ಸತೀಶ್, ವಾಣಿ ಕಾಲೇಜಿನ ಸಾಂಸ್ಕøತಿಕ ಕಾರ್ಯದರ್ಶಿ ಶ್ರೀಮತಿ ಪುಷ್ಪಲತಾ ರವರು ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರಾದ ಬಿ.ಕೆ.ನಾಗಣ್ಣ, ವಸಂತಕುಮಾರ್.ಹೆಚ್.ಡಿ., ವಿಶಾಲ್‍ಬಾಫ್ನ, ಜಯರಾಜ್‍ಜೈನ್, ರೋಟರಿ ಸಹಕಾರ್ಯದರ್ಶಿ ಎಂ.ವಿ.ಹರ್ಷ, ಮತ್ತಿತರರು ಹಾಜರಿದ್ದರು. ರೋಟರಿಯ ಸದಸ್ಯರಾದ ಹೆಚ್.ಕಿರಣ್‍ಕುಮಾರ್ ನಿರೂಪಿಸಿದರು, ರೋಟರಿಯ ಕಾರ್ಯದರ್ಶಿ ಯಾದ ಹೆಚ್.ವೆಂಕಟೇಶ್ ವಂದನಾರ್ಪಣೆ ಮಾಡಿದರು.

Recent Articles

spot_img

Related Stories

Share via
Copy link
Powered by Social Snap