ನ್ಯೂಯಾರ್ಕ್: 
ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ಇಮ್ರಾನ್ ಖಾನ್ ನೇತೃತ್ವದ ಹೊಸ ಸರ್ಕಾರ ದಕ್ಷಿಣ ಏಷ್ಯಾವನ್ನು ಉಗ್ರಮುಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗುತ್ತದೆ ಎಂಬ ಆಶಾಭಾವನೆ ಹೊಂದಿದ್ದೇವೆ ಎಂದು ಭಾರತ ಹೇಳಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಭಾರತದ ಶಾಶ್ವತ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್, ಪಾಕಿಸ್ತಾನದ ಹೊಸ ಸರ್ಕಾರ ಇನ್ನು ಮುಂದೆ ಯಾವ ರೀತಿಯಲ್ಲೂ ವಾದ ವಿವಾದಗಳಲ್ಲಿ ತೊಡಗದೆ ಸುರಕ್ಷಿತ, ಸ್ಥಿರ ಮತ್ತು ಅಭಿವೃದ್ಧಿಪರ, ಉಗ್ರ ಮತ್ತು ಹಿಂಸಾಚಾರ ಮುಕ್ತ ದಕ್ಷಿಣ ಏಷ್ಯಾ ನಿರ್ಮಿಸುವತ್ತ ಗಮನ ಹರಿಸಲಿದೆ ಎಂದು ಭಾವಿಸುತ್ತೇವೆ ಎಂದಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಣ ವಿವಾದಭರಿತ ಪ್ರಾಂತ್ಯಗಳ ಕುರಿತು ಪಾಕಿಸ್ತಾನ ಪದೇಪದೇ ಉಲ್ಲೇಖ ಮಾಡುತ್ತಿರುವ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಅಕ್ಬರುದ್ದೀನ್, ಪ್ರತ್ಯೇಕ ನಿಯೋಗ ಭಾರತದ ಆಂತರಿಕ ಭಾಗವನ್ನು ಉಲ್ಲೇಖ ಮಾಡುತ್ತಿದೆ ಎಂದು ಕಠುವಾಗಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
