ಪಾವಗಡ
ತಾಲ್ಲೂಕು ಸಾಮಾನ್ಯ ಸಭೆಗೆ ಗೈರು ಹಾಜರಾದ ಅಧಿಕಾರಿಗಳ ಮೇಲೆ ಕಾನೂನು ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ತಾ.ಪಂ.ಅಧ್ಯಕ್ಷ ಸೊಗಡುವೆಂಕಟೇಶ್ ಕೆಂಡಮಂಡಲವಾದ ಪ್ರಸಂಗ ನಡೆಯಿತು.
ಅವರು ಶುಕ್ರವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಮಾನ್ಯ ಸಭೆಯಲ್ಲಿ ಮಾತನಾಡಿ, ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಬಗ್ಗೆ ಪರಿಶೀಲಿಸಲು ತಮ್ಮ ಇಲಾಖೆಯವಾರು ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕಾದರೆ ಹರಸಾಹಸ ಪಡೆಯುವಂತಾಗಿದ್ದು, ಗೈರು ಹಾಜರಾದ ಅಧಿಕಾರಿಗಳಿಗೆ ನೋಟೀಸ್ ಜಾರಿಮಾಡಬೇಕೆಂದು ಇ.ಒ ನರಸಿಂಹಮೂರ್ತಿರವರಿಗೆ ಸೂಚಿಸಿದರು.
ಇಂಜಿನಿಯರ್ ದೇಶಪಾಂಡೆ ಸಾರ್ವಜನಿಕರಿಗೆ ಮತ್ತು ಗುತ್ತಿಗೆದಾರರಿಗೆ ಹಾಗೂ ಜನಪ್ರತಿನಿಧಿಗಳ ಕೈಗೆ ಸಿಗದೆ ಅನುಷ್ಟಾನಕ್ಕೆ ಬಂದ ಕಾಮಗಾರಿಗಳ ಅಭಿವೃದ್ಧಿಯಾಗದೆ ಕುಂಠಿತವಾಗುತ್ತಿವೆ ಎಂದು ಸಾರ್ವಜನಿಕರಿಂದ ಆರೋಪಗಳು ಕೇಳಿ ಬರುತ್ತಿದ್ದು, ಇವರಿಂದ ಕೆಲಸ ಮಾಡಿಸಿ ಇಲ್ಲವಾದರೆ ವರ್ಗಾವಣೆ ಮಾಡಿ ಎಂದು ಎಇಇ ಈಶ್ವಯ್ಯರವರಿಗೆ ತಾಲ್ಲೂಕು ಪಂಚಾಯಿತಿ ಸದಸ್ಯರು ಮತ್ತು ಅಧ್ಯಕ್ಷರು ಸೂಚಿಸಿದರು.
ಎಇಇ ಈಶ್ವರಯ್ಯ ಪ್ರತಿಕ್ರಿಯಿಸಿ ಸಮಾನ್ಯ ಸಭೆಯಲ್ಲಿ ಏನು ನಿರ್ಣಯ ತೆಗೆದುಕೊಳ್ಳತ್ತಾರೆ ಅದರಂತೆ ನೋಟೀಸ್ ಜಾರಿ ಮಾಡುವುದಾಗಿ ತಿಳಿಸಿದರು.
ಎಸ್.ಸಿ.ಪಿ/ಟಿಎಸ್‍ಪಿ ಯೋಜನೆಯಲ್ಲಿ ತಾಲ್ಲೂಕಿನ ಗ್ರಾಮೀಣಾ ಪ್ರದೇಶದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಶಿಫಾರಸ್ ಮಾಡಬೇಕೆಂದು ಸಚಿವರ ಗಮನಕ್ಕೆ ತಂದು ತಾ.ಪಂ.ಕ್ಷೇತ್ರಗಳ ವ್ಯಾಪ್ತಿಯ ಸದಸ್ಯರು 50 ಲಕ್ಷ ಕ್ರಿಯಾ ಯೋಜನೆ ತಯಾರಿಸಿ ಅಭಿವೃದ್ಧಿ ಪಡಿಸಲು ಶ್ರಮವಹಿಸಲು ಎಲ್ಲರೂ ಶ್ರಮವಹಿಸಬೇಕೆಂದು ಸದಸ್ಯರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ನೂತನವಾಗಿ 20 ತಿಂಗಳ ಅವಧಿಗೆ ಸಾಮಾಜಿಕ ಸ್ಥಾಯಿ ಸಮಿತಿ, ಸಾಮಾನ್ಯ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರುಗಳನ್ನು ನೇಮಿಸಲಾಯಿತು.
ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನರಸಿಂಹಮೂರ್ತಿ, ಉಪಾಧ್ಯಕ್ಷರಾದ ಕೃಷ್ಣವೇಣಿ ಆದಿನಾರಾಯಣ, ಸದಸ್ಯರಾದ ಗೋವಿಂದಪ್ಪ, ನಾಗರಾಜು, ನರಸಿಂಹ, ಹನುಮಂತರಾಯಪ್ಪ, ಶಿವಮ್ಮ, ರಾಧಮ್ಮ, ರವಿಕುಮಾರ್, ಕೃಷಿ ಅಧಿಕಾರಿ ಹನುಮಂತರಾಜ್, ತೋಟಗಾರಿಕೆ ಸಹಾಯ ನಿರ್ದೇಶಕ ಸುಧಾಕರ್, ಬಿ.ಇ.ಒ ಕುಮಾರಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ಶಿವಣ್ಣ, ಸಿ.ಡಿ.ಪಿ.ಒ ಶಿವಕುಮಾರ್, ಕೆ.ಇ.ಬಿ ಹರೀಶ್, ಇಂಜಿನಿಯರ್ ಬಸವಲಿಂಗಪ್ಪ, ಪಶು ಇಲಾಖೆ ನಿರ್ದೇಶಕರಾದ ಡಾ.ನಾಗಭೂಷಣ, ಹನುಂತರಾಯಪ್ಪ ಹಾಗೂ ತಾಲ್ಲೂಕಿನ ಅಧಿಕಾರಿಗಳು ಹಾಜರಿದ್ದರು.