ಮಂತ್ರಾಲಯ:

ಮಠಗಳು ಧಾರ್ಮಿಕ ಕೇಂದ್ರಗಳಲ್ಲ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿವೆ. ಎಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಿಳಿಸಿದರು.
ಮಂತ್ರಾಲಯದಲ್ಲಿ 62 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶ್ರೀ ಸುಜಯೀಂದ್ರ ಮಿನಿ ಆಸ್ಪತ್ರೆಯ ಆರೋಗ್ಯಾಲಯವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದ ಅವರು ಸಾಮಾಜಿಕ ಕಾರ್ಯ ಮಾಡಿ ಜನರಿಗೆ ಅನುಕೂಲ ಮಾಡಿಕೊಡುತ್ತಿರುವ ಮಠಗಳ ಸೇವೆ ಅನನ್ಯ ಎಂದು ಹೇಳಿದರು.
‘ನಮ್ಮ ದೇಶದ ಸಂಸ್ಕೃತಿ, ಪರಂಪರೆಯಲ್ಲಿ ಸುಕ್ಷೇತ್ರ ಹಾಗೂ ಮಠ ಮಾನ್ಯಗಳು ಸಮಾಜದ ಜನರೊಂದಿಗೆ ಗುರುತಿಸಿಕೊಂಡಿವೆ. ಶ್ರೀ ರಾಘವೇಂದ್ರ ಸ್ವಾಮೀಜಿ ಸನ್ನಿಧಿ ಇರುವ ಮಂತ್ರಾಲಯದಲ್ಲಿ ಆಸ್ಪತ್ರೆ ಉದ್ಘಾಟನೆ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ’ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








