ನಿಟ್ಟೂರು:
ಗುಬ್ಬಿ ತಾಲ್ಲೂಕು ನಿಟ್ಟೂರಿನ ಶ್ರೀ ಗಂಗಮಾಳಮ್ಮದೇವಿ ಸಮೇತ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ದೇವರುಗಳ ಜಾತ್ರಾ ಮಹೋತ್ಸವವು ಸೆಪ್ಟೆಂಬರ್ 2 ರ ಭಾನುವಾರ ಜರುಗಲಿದೆ.
ಬೆಳಗ್ಗೆ 5 ಗಂಟೆಗೆ ನಿಟ್ಟೂರಿನ ಕೆರೆಯಲ್ಲಿ ಶ್ರೀ ಮರಿಯಮ್ಮ ದುರ್ಗಮ್ಮ, ಶ್ರೀ ಮುಳಕಟ್ಟಮ್ಮ, ಶ್ರೀ ಪಾಂಡುರಂಗಸ್ವಾಮಿ, ಶ್ರೀ ಆಂಜನೇಯಸ್ವಾಮಿ, ಶ್ರೀ ಗಂಗಮಾಳಮ್ಮದೇವಿ ಸಮೇತ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ, ಶ್ರೀ ಶಿವಭಕ್ತ ಬೇಡರ ಕಣ್ಣಪ್ಪಸ್ವಾಮಿ, ಶ್ರೀ ರಾಮದೇವರು, ಶ್ರೀ ರುದ್ರೇಶ್ವರಸ್ವಾಮಿ ದೇವರುಗಳಿಗೆ ಗಂಗಾಸ್ನಾನ, ಪುಣ್ಯಾಹ ಮಾಡಿಸಿ 9 ಗಂಟೆಗೆ ನಂದಿ ಪೂಜೆ ನೆರವೇರಿಸಲಾಗುವುದು.
ಶ್ರೀ ಮೈಲಾರಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ನಂದಿಧ್ವಜ, ವೀರಭದ್ರನ ಕುಣಿತ, ಸೋಮನ ಕುಣಿತ, ಡೊಳ್ಳು ಕುಣಿತ, ಗೊರವರ ಕುಣಿತ, ಮಹಿಳಾ ವೀರಗಾಸೆ, ಪೂಜಾ ಕುಣಿತ, ಹುಲಿವೇಷ ಪಾಳೆಗಾರ, ಗೊಂಬೆ ಕುಣಿತ, ಮೈಸೂರು ನಗಾರಿಯೊಂದಿಗೆ ಉತ್ಸವ ಜರುಗಲಿದೆ. ಅಂದು ಮಧ್ಯಾಹ್ನ 1 ಗಂಟೆಗೆ ಶ್ರೀ ಗುಹೇಶ್ವರಸ್ವಾಮಿ ಸಮುದಾಯ ಭವನದಲ್ಲಿ ದಾಸೋಹ ಏರ್ಪಡಿಸಲಾಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ಭಕ್ತ ಮಂಡಲಿ ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ