ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‍ಗೆ ಚಾಲನೆ

ಚಿತ್ರದುರ್ಗ;

          ಗ್ರಾಮೀಣ ಪ್ರದೇಶದಲ್ಲಿ ಹೊಸ ಬ್ಯಾಂಕಿನ ಪದ್ದತಿ ಬಗ್ಗೆ ಜಾಗೃತಿ ಮೂಡಿಸುವಂತೆ ಜಿಲ್ಲಾ ರಕ್ಷಣಾಧಿಕಾರಿ ಶ್ರೀನಾಥ್ ಜೋಶಿ ಸಲಹೆ ನೀಡಿದರು.

           ನಗರದ ಶಾರದಮ್ಮರುದ್ರಪ್ಪ ಕಲ್ಯಾಣಮಂಟಪದಲ್ಲಿ ಶನಿವಾರ ಅಂಚೆ ಇಲಾಖೆಯಿಂದ ಆಯೋಜಿಸಿದ್ದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಪ್ರಾರಂಭೋತ್ಸವ ನೆರವೇರಿಸಿ ಮಾತನಾಡಿ ಬ್ಯಾಂಕಿಂಗ್ ವ್ಯವಸ್ಥೆ ಬಂದ ಮೇಲೆ ಅಂಚೆ ಇಲಾಖೆ ಸಂಪೂರ್ಣ ಮುಚ್ಚುವ ಹಂತ ತಲುಪುತ್ತಿದೆ ಎನ್ನುವ ಮಾತು ಕೇಳಿಬಂದಿತ್ತು. ಕಾಗಧಪತ್ರಗಳ ಜೊತೆಗೆ ಹಣವನ್ನು ಜಮಾ ಮತ್ತು ಡ್ರಾ ಮಾಡುವ ವ್ಯವಸ್ಥೆ ಜನರಿಗೆ ಉಪಯುಕ್ತವಾಗಿದೆ. ಅಂಚೆಪಾಲಕರ ಮೇಲೆ ಇರುವ ವಿಶ್ವಾಸ ನಂಬಿಕೆ ಇಂದಿಗೂ ಕಡಿಮೆಯಾಗಿಲ್ಲ. ಜನರು ಹೆಚ್ಚಾಗಿ ಅವರನ್ನೇ ನಂಬುತ್ತಾರೆ. ಏಕೆಂದರೆ ಅಷ್ಟೊಂದು ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತಾರೆ. ಇದನ್ನು ಮುಂದುವರೆಸಿಕೊಂಡು ಹೋಗುವಂತೆ ತಿಳಿ ಹೇಳಿದರು.

          ಅಂಚೆ ಇಲಾಖೆ ಸಿಬ್ಬಂದಿ ಜನರೊಂದಿಗೆ ಸೌಜನ್ಯದಿಂದ ವರ್ತಿಸಿದರೆ ಸಾಲದು ಇದರ ಜೊತೆಗೆ ಕಚೇರಿಗೆ ಬರುವ ಸಾರ್ವಜನಿಕರನ್ನು ನಗುಮುಖದಿಂದ ಸ್ವಾಗತಿಸಿದರೆ ಜನರು ಆಕರ್ಷಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಪಡೆಯಲು ಬರುತ್ತಾರೆ. ನಗುಮುಖದವರ ಮೇಲೆ ಜನರು ವಿಶ್ವಾಸ ಇಡುತ್ತಾರೆ. ಆಗ ಇಲಾಖೆಯಲ್ಲಿ ಠೇವಣೆ ಇಡುವವರ ಸಂಖ್ಯೆಯೂ ಹೆಚ್ಚಾಗಲಿದೆ ಎಂದು ಹೇಳಿದರು

          ಜಗತ್ತಿನಲ್ಲಿಯೇ ಮನೆ ಬಾಗಿಲಿನಲ್ಲಿ ಹಣದ ವ್ಯವಹಾರ ಮಾಡುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ದಾಪುಗಾಲು ಹಾಕುವುದರಲ್ಲಿ ಸಂದೇಹವಿಲ್ಲ. ಇದಕ್ಕೆ ಮುಖ್ಯವಾಗಿ ಸೆಕ್ಯೂರಿಟಿ ಇರಬೇಕು ಈ ಮೊದಲು ಖಾತೆ ತೆರೆಯಲು ಬ್ಯಾಂಕಿನಲ್ಲಿ ಪ್ರಯಾಸಪಡಬೇಕಾಯಿತು. ನಂತರ ಖಾತೆ ತೆರೆದ ಮೇಲೆ ಹಣ ಕಟ್ಟಲು ತೆಗೆದುಕೊಳ್ಳಲು ಸರದಿ ಸಾಲಿನಲ್ಲಿ ನಿಲ್ಲಬೇಕಾಯಿತು. ಇದನ್ನು ತಪ್ಪಿಸಲು ಎಟಿಎಂ ಸೌಲಭ್ಯ ಕಲ್ಪಿಸಲಾಯಿತು. ಇದರಲ್ಲಿ ಹಣ ದುರುಪಯೋಗವಾದ ಮೇಲೆ ಈಗ ಮನೆ ಬಾಗಿಲಿನಲ್ಲಿಯೇ ವ್ಯವಹಾರ ನಡೆಸುವ ಪದ್ದತಿ ಜಾರಿಗೊಳಿಸಲಾಗಿದೆ. ಇದೊಂದು ಉತ್ತಮ ಕಾರ್ಯ. ಇದು ಜನಸಾಮಾನ್ಯರಿಗೂ ಅದರಲ್ಲಿಯೂ ಕೂಲಿ ಕಾರ್ಮಿಕರು, ರೈತರಿಗೆ ತಲುಪಬೇಕಾದರೆ ಗ್ರಾಮೀಣ ಪ್ರದೇಶದಲ್ಲಿ ಹೊಸ ಬ್ಯಾಂಕಿನ ಪದ್ದತಿ ಬಗ್ಗೆ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.

           ಮನೆ ಬಾಗಿಲಿಗೆ ಹೋಗಿ ಖಾತೆ ತೆರೆದು ಹಣ ಜಮಾ ಮಾಡಿಕೊಳ್ಳುವುದು ಮತ್ತು ಹಣ ಡ್ರಾ ಮಾಡಿಕೊಳ್ಳುವ ವ್ಯವಸ್ಥೆ ಇರುವುದು ಅಂಚೆ ಇಲಾಖೆಯಲ್ಲಿ ಮಾತ್ರ. ಯಾವುದೇ ಬ್ಯಾಂಕಿನಲ್ಲಿಯೂ ಈ ವ್ಯವಸ್ಥೆ ಇಲ್ಲ. ಹಣದ ವ್ಯವಹಾರ ಮಾಡುವಾಗ ಭದ್ರತೆ ಮುಖ್ಯ. ಕೇಂದ್ರಸರ್ಕಾರ ಇದರ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಿಯೇ ಇಂತಹ ಕಾರ್ಯಕ್ರಮ ರೂಪಿಸಿದೆ. ಜನರು ಇದನ್ನು ಬಳಕೆ ಮಾಡಿಕೊಳ್ಳುವಂತೆ ಹೇಳಿದರು.

          ಅಂಚೆ ಇಲಾಖೆ ಬೆಂಗಳೂರು ವಿಭಾಗದ ಸಹಾಯಕ ನಿರ್ದೇಶಕ ರಾಮಲಿಂಗಯ್ಯ ಮಾತನಾಡಿ, ವಿಮಾನ ಟಿಕೆಟ್, ರೈಲ್ವೆ, ವಿದ್ಯುತ್ ಬಿಲ್, ಟೆಲಿಪೋನ್ ಬಿಲ್ ಎಲ್ಲವನ್ನು ಈ ಬ್ಯಾಂಕಿನ ಮೂಲಕ ಪೇಮೆಂಟ್ಸ್ ಮಾಡಬಹುದು. 31.12.2018ಕ್ಕೆ ಇಡೀ ದೇಶದ ಎಲ್ಲಾ ಅಂಚೆ ಶಾಖೆಗಳಲ್ಲಿಯೂ ಬ್ಯಾಂಕಿನ ಸೌಲಭ್ಯ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಸರ್ಕಾರಿ ಕಲಾ ಕಾಲೇಜಿನ ಪ್ರಾಚಾರ್ಯ ಪ್ರೊ.ಸುಧಾಕರ್, ಪೋಸ್ಟ್ ಮಾಸ್ಟರ್ ಕೆ.ದೇವರಾಜ್ ಹಾಗೂ ಇತರರು ಭಾಗವಹಿಸಿದ್ದರು. ಬ್ಯಾಂಕಿನ ಚೀಪ್ ಮ್ಯಾನೇಜರ್ ಮಂಜುನಾಥ್ ಸ್ವಾಗತಿಸಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap