ಸಂವಿಧಾನದ ಗ್ರಂಥವನ್ನು ಸುಟ್ಟು ಹಾಕಿರುವವರ ವಿರುದ್ಧ ಕಾನೂನು ರೀತ್ಯ ಕ್ರಮಕೈಗೊಳ್ಳಲು ಆಗ್ರಹ

ಹಿರಿಯೂರು:
              ನಂಜನಗೂಡು ತಾಲ್ಲೂಕಿನ ಹುಳಿಮಾವು ಗ್ರಾಮದ ಮುಖ್ಯ ದ್ವಾರದ ಬಳಿ ಇದ್ದ ಡಾ||ಬಾಬು ಜಗಜೀವನರಾಂ ಪುತ್ಥಳಿಯನ್ನು ದಿನಾಂಕ:29-08-2018ರ ಬುಧವಾರದಂದು ಕಿಡಿಗೇಡಿಗಳು ದ್ವಂಸ ಕುತ್ತಿಗೆಯ ಭಾಗವನ್ನು ಕತ್ತರಿಸಲಾಗಿದೆ. ಮತ್ತು ದೆಹಲಿಯಲ್ಲಿ ಸಂವಿಧಾನದ ಗ್ರಂಥವನ್ನು ಸುಟ್ಟು ಹಾಕಲಾಗಿದೆ. ಈ ರೀತಿಯ ಕೃತ್ಯವೆಸಗಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ, ಕಾನೂನು ರೀತಿ ಕ್ರಮಕೈಗೊಂಡು ಕಠಿಣ ಶಿಕ್ಷೆಗೊಳಪಡಿಸಬೇಕು. ಹಾಗೂ ಕೂಡಲೇ ಬಾಬು ಜಗಜೀವನ್‍ರಾಂ ಪುತ್ಥಳಿಯನ್ನು ಹೊಸದಾಗಿ ನಿರ್ಮಾಣ ಮಾಡಿ ಪ್ರತಿಮೆಗೆ ಸೂಕ್ತ ರಕ್ಷಣೆ ನೀಡಬೇಕೆಂದು ಸರ್ಕಾರಕ್ಕೆ ಡಾ||ಬಾಬು ಜಗಜೀವನರಾಂ ಸಂಘದಅಧ್ಯಕ್ಷರಾದ ಜಿ.ಎಲ್.ಮೂರ್ತಿರವರು ಒತ್ತಾಯಿಸಿದರು.
                         ನಗರದ ತಾಲ್ಲೂಕುಕಛೇರಿಗೆ ತೆರಳಿ ತಾಲ್ಲೂಕುದಂಡಾಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಜೀವೇಶ್ ಬೋರನಕುಂಟೆ, ಚಂದ್ರಪ್ಪಘಾಟ್, ದಯಾನಂದ್ ಹರ್ತಿಕೋಟೆ, ರವಿಘಾಟ್, ಕೆ.ಪಿ.ಶ್ರೀನಿವಾಸ್, ಕೆ.ರಂಗಸ್ವಾಮಿ ಕಂಬತ್‍ಹಳ್ಳಿ, ನಂದಕುಮಾರ್, ಶಿವಕುಮಾರ್ ವಿ,ಮಹಂತೇಶ್ ಗಾಂಧಿನಗರ, ಹನುಮಂತರಾಯಪ್ಪ ಮಟ್ಟಿ, ನಾಗರಾಜ್ ವಕೀಲರು, ಮೋಹನ್‍ಕುಮಾರ್, ಕುಮಾರ್ ಬಾಲೇನಹಳ್ಳಿ, ಹೆಚ್.ರಾಜಣ್ಣ, ಸಂತೋಷ್ ಕೆಕೆ ಹಟ್ಟಿ, ನಂದಿಹಳ್ಳಿ ಗಿರೀಶ್, ಸೀಗೆಹಟ್ಟಿ ರಂಗನಾಥ, ದಿವು, ಎಸ್.ಎ.ಮಾರುತಿ, ಕೀರ್ತಿ, ಪ್ರಭು, ಮತ್ತಿತರರು ಭಾಗವಹಿಸಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link