ಯಾದವರ ಸಂಘದಿಂದ ಶ್ರೀಕೃಷ್ಣಜನ್ಮಾಷ್ಠಮಿ

ಚಿತ್ರದುರ್ಗ:

               ಪೈಪೋಟಿ ಯುಗದಲ್ಲಿ ಉನ್ನತ ಮಟ್ಟಕ್ಕೆ ಹೋಗಬೇಕಾದರೆ ಕಠಿಣ ಪರಿಶ್ರಮ ಮುಖ್ಯ ಎಂದು ಮಾಜಿ ಶಾಸಕ ಎ.ವಿ.ಉಮಾಪತಿ ಗೊಲ್ಲ ಜನಾಂಗದ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
               ಜಿಲ್ಲಾ ಯಾದವ ಗೊಲ್ಲರ ಸಂಘದಲ್ಲಿ ಭಾನುವಾರ ಆಚರಿಸಿದ ಶ್ರೀಕೃಷ್ಟ ಜನ್ಮಾಷ್ಟಮಿಯಲ್ಲಿ ಭಾಗವಹಿಸಿ ಮಾತನಾಡಿದರು.
ಸಾಧಕನಿಗೆ ಮಾತ್ರ ವಿದ್ಯೆ ಒಲಿಯುತ್ತದೆ. ಅದಕ್ಕಾಗಿ ವಿದ್ಯಾರ್ಥಿ ಜೀವನದಲ್ಲಿ ತಪಸ್ಸು ಸಾಧನೆ ಮಾಡಿದಾಗ ಮಾತ್ರ ನಿಗಧಿತ ಗುರಿಮುಟ್ಟಬಹುದು. ಅಚಲವಾದ ಛಲ ಬೇಕು. ವಿದ್ಯಾವಂತರಿರುವ ಸಮಾಜ ಮಾತ್ರ ಮುಂದುವರೆಯಲಿದೆ. ವಿದ್ಯೆಯ ಮುಂದೆ ಯಾವ ಶಕ್ತಿಯೂ ಇಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಯಾದವ ಸಮಾಜದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಶಿಕ್ಷಣಕ್ಕೆ ಹೆಚ್ಚಿನ ಗಮನ ಕೊಡಬೇಕು ಎಂದು ತಿಳಿಸಿದರು.
                  ನೆರೆ ಹಾವಳಿಯಿಂದ ಕೊಡಗು ಕೇರಳದಲ್ಲಿ ನಿರಾಶ್ರಿತರಾದವರ ನೆರವಿಗಾಗಿ ಶ್ರೀಕೃಷ್ಣಜಯಂತಿಗೆ ಸರ್ಕಾರ ಬಿಡುಗಡೆಗೊಳಿಸಿದ್ದ ಹಣವನ್ನು ನೀಡಲು ತೀರ್ಮಾನಿಸಿರುವುದು ಸಂತೋಷದ ಸಂಗತಿ. ಹಾಗಾಗಿ ಎಲ್ಲಾ ಕಡೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ನಿಮ್ಮ ಶದ್ದೆ ಸಾಧನೆಗೆ ಶ್ರೀಕೃಷ್ಣ ಪರಮಾತ್ಮನ ಆಶೀರ್ವಾದ ಇದ್ದೆ ಇರುತ್ತದೆ. ಪಠ್ಯದ ಜೊತೆಗೆ ಕ್ರೀಡೆಯಲ್ಲಿಯೂ ಭಾಗವಹಿಸಿ ನಿಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಿ ಎಂದು ಹೇಳಿದರು.
ಜಿಲ್ಲಾ ಯಾದವ ಗೊಲ್ಲರ ಸಂಘದ ಅಧ್ಯಕ್ಷ ಸಿ.ಮಹಲಿಂಗಪ್ಪ ಮಾತನಾಡಿ ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಿಗೆ ಗೊಲ್ಲ ಜನಾಂಗ ಎಚ್ಚರಿಕೆ ನೀಡಿದೆ. ನಮ್ಮ ಜನಾಂಗಕ್ಕೆ ಅನ್ಯಾಯವಾದಾಗ ಪ್ರತಿಭಟಿಸುತ್ತೇವೆ. ನಂತರ ರಾಜಕೀಯ ಎಂದು ಗುಡುಗಿದರು.
                 ಹೆಚ್.ಆಂಜನೇಯ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಅಲೆಮಾರಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಿ ಎಂದು ಕೇಳಿದ್ದಕ್ಕೆ ಹಾಸ್ಟೆಲ್ ಎಂದರೆ ಏನು ಎಂದು ವ್ಯಂಗ್ಯವಾಗಿ ಕೇಳಿದರು. ಅದಕ್ಕಾಗಿ ಚುನಾವಣೆಯಲ್ಲಿ ಮತ ಎಂದರೆ ಏನು ಎಂದು ತೋರಿಸಿದ್ದರಿಂದ ಸೋಲು ಅನುಭವಿಸಿದರು. ಅನ್ಯಾಯವಾದಾಗ ಪ್ರತಿಭಟಿಸಿದರೆ ಮಾತ್ರ ನಿಮಗೆ ಸಿಗಬೇಕಾದ ಸೌಲತ್ತುಗಳನ್ನು ಸರ್ಕಾರದಿಂದ ಪಡೆದುಕೊಳ್ಳಲು ಸಾಧ್ಯ ಎಂದು ಗೊಲ್ಲ ಸಮಾಜದ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
                 ರಾಜ್ಯದಲ್ಲಿ ಎಲ್ಲೂ ಅಲೆಮಾರಿಗಳಿಗೆ ಹಾಸ್ಟೆಲ್‍ಗಳಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ 1200 ಅಲೆಮಾರಿ ವಿದ್ಯಾರ್ಥಿಗಳಿದ್ದಾರೆ. ನಿರಂತರ ಹೋರಾಟ ಹಾಗೂ ವಿದ್ಯಾರ್ಥಿಗಳ ಪತ್ರಚಳುವಳಿಯಿಂದ ಎಲ್ಲರಿಗೂ ಹಾಸ್ಟೆಲ್ ಸಿಕ್ಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗೊಲ್ಲ ಜನಾಂಗ ಮೊದಲು ಕಂದಾಚಾರ, ಅಸ್ಪøಶ್ಯತೆಯನ್ನು ಬಿಡಬೇಕು ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ ಸಿ.ಮಹಲಿಂಗಪ್ಪನವರು ಎಲ್ಲಾ ಜಯಂತಿಗಳಿಗೂ ರಾಜ್ಯ ಸರ್ಕಾರ 89 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ.ಅದಕ್ಕೆ ಬದಲಾಗಿ ಅಲೆಮಾರಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ಕೊಡಬೇಕು ಎಂದು ಆಗ್ರಹಿಸಿದರು.
                 ಕಳೆದ ಬಾರಿ ಶ್ರೀಕೃಷ್ಣಜನ್ಮಾಷ್ಟಮಿ ಜಯಂತಿಯ ಹಣವನ್ನು ಬರಗಾಲಕ್ಕೆ ನೀಡಿದ್ದೆವು. ಈ ಸಾರಿ ಕೊಡಗು ಮತ್ತು ಕೇರಳದ ನಿರಾಶ್ರಿತರಿಗೆ ನೀಡಲು ತೀರ್ಮಾನಿಸಿದ್ದೇವೆ. ಯುವಶಕ್ತಿ ಸಂಘಟಿತರಾದಾಗ ಮಾತ್ರ ಸಾಮಾಜಿಕ ನ್ಯಾಯ ಪಡೆಯಬಹುದು ಎಂದು ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸಿದರು.
                 ಪ್ರೊ.ವೆಂಕಟೇಶ್ ಉಪನ್ಯಾಸ ನೀಡಿ ಶ್ರೀಕೃಷ್ಣ ಒಂದು ಜಾತಿಗೆ ಸೀಮಿತನಲ್ಲ. ಇಡಿ ಜಗತ್ತಿನಲ್ಲೆ ಪೂಜಿಸಲ್ಪಟ್ಟ ಪರಮಾತ್ಮ. ಚಾಣಾಕ್ಷ, ಚತುರಮತಿ, ಬುದ್ದಿವಂತನಾಗಿದ್ದ ಶ್ರೀಕೃಷ್ಣನನ್ನು ಪ್ರತಿಯೊಬ್ಬರು ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.
ಸರ್ವಾಂತರ್‍ಯಾಮಿಯಾಗಿದ್ದ ಶ್ರೀಕೃಷ್ಣ ಸ್ನೇಹಕ್ಕೆ ಕಟ್ಟುಬಿದ್ದವನು. ನಂಬಿದವರನ್ನು ಕೈಬಿಡುತ್ತಿರಲಿಲ್ಲ. ಮಹಾಭಾರತದಲ್ಲಿ ಪಾಂಡವರ ನೆರವಿಗೆ ನಿಂತಿದ್ದ. ಶ್ರೀಕೃಷ್ಣ-ಕುಚೇಲ ಪ್ರಾಣ ಸ್ನೇಹಿತರಾಗಿದ್ದರು ಎಂಬುದನ್ನು ನೆನಪಿಸಿದರು.
                 ಕಪಟನಾಟಕ ಸೂತ್ರಧಾರಿಯಾಗಿದ್ದ ಶ್ರೀಕೃಷ್ಣನದು ಪರಿಪೂರ್ಣ ವ್ಯಕ್ತಿತ್ವ. ಗೋವರ್ಧನಗಿರಿಯನ್ನು ಮೇಲೆತ್ತಿದ ಮಹಾನ್‍ಶಕ್ತಿಶಾಲಿ. ಬುಡಕಟ್ಟಿನ ಲಕ್ಷಣವುಳ್ಳವನಾಗಿದ್ದರಿಂದ ಎಂದು ಕೈಯಲ್ಲಿ ಕತ್ತಿ, ಶಸ್ತ್ರಾಸ್ತ್ರಗಳನ್ನು ಹಿಡಿಯಲಿಲ್ಲ. ಮಹಾಭಾರತ ಯುದ್ದದಲ್ಲಿ ಪಾಂಡವರಿಗೆ ಸಾರಥಿಯಾಗಿದ್ದುಕೊಂಡೆ ಎಲ್ಲವನ್ನು ಜಯಸಿದ ಎಂದರು.
                 ಜಿಲ್ಲಾ ಯಾದವ ಗೊಲ್ಲರ ಸಂಘದ ಪ್ರಧಾನ ಕಾರ್ಯದರ್ಶಿ ಆನಂದಣ್ಣ, ಸಂಘಟನಾ ಕಾರ್ಯದರ್ಶಿ ವೆಂಕಟೇಶ್‍ಯಾದವ್, ಗೊಲ್ಲ ಜನಾಂಗದ ಮುಖಂಡರುಗಳಾದ ಪಲ್ಗುಣೇಶ್, ಪ್ರೊ.ಜಿ.ಪರಮೇಶ್, ಬಿ.ಕೃಷ್ಣಪ್ಪ, ಟಿ.ರಂಗಸ್ವಾಮಿ, ಅಳ್ಳಪ್ಪಗೌಡ್ರು, ಚಂದ್ರಪ್ಪ ವೇದಿಕೆಯಲ್ಲಿದ್ದರು. ನೂರಾರು ವಿದ್ಯಾರ್ಥಿಗಳು ಶ್ರೀಕೃಷ್ಣಜನ್ಮಾಷ್ಟಮಿಯಲ್ಲಿ ಭಾಗವಹಿಸಿದ್ದರು

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ.

Recent Articles

spot_img

Related Stories

Share via
Copy link