ತುಮಕೂರು-
ಗ್ರಾಮಾಂತರಕ್ಷೇತ್ರ ವ್ಯಾಪ್ತಿಯ ದೊಡ್ಡನಾರವಂಗಲ ಕೆರೆಗೆ ಶಾಸಕ ಡಿ.ಸಿ.ಗೌರಿಶಂಕರ್ ರವರು ಹೇಮಾವತಿ ನೀರು ಹರಿಸಿ ನಾಲಾ ವಿಭಾಗದ ಅಧಿಕಾರಿಗಳು ಹಾಗೂ ರೈತರುಸ್ಥಳೀಯರೊಂದಿಗೆ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಭಾನುವಾರದಂದೇದೊಡ್ಡನಾರವಂಗಲಕೆರೆಗೆ ನೀರು ಹರಿದಿದ್ದುಅಂದೇ ಶಾಸಕರು ಅಧಿಕಾರಿಗಳೊಂದಿಗೆ ಕೆರೆಗೆಭೇಟಿ ನೀಡಿ ನೀರಿನ ಹರಿಯುವಿಕೆಯನ್ನು ವೀಕ್ಷಿಸಿದರು.
ಈ ವೇಳೆ ಸ್ಥಳಿಯರೊಂದಿಗೆ ಮಾತನಾಡಿದ ಶಾಸಕರು ಗೌಡಿಹಳ್ಳಿ, ಅಸಲೀಪಿರ ಕೆರೆಗಳಿಗೆ ಹೇಮಾವತಿ ನೀರು ಹರಿಸಿ ಕೆರೆಗಳನ್ನು ತುಂಬಿಸಲಾಗಿದೆ, ಈಗ ದೊಡ್ಡನಾರವಂಗಲ ಕೆರೆಗೆ ನೀರು ಹರಿಯುತ್ತಿದೆ ಮುಂದಿನ 15 ದಿನದೊಳಗೆ ಬೆಳ್ಳಾವಿ ಹೋಬಳಿ ಬಹುತೇಕ ಕೆರೆಗಳಿಗೆ ಆದ್ಯತೆ ಮೇರೆಗೆ ನೀರು ಹರಿಸಲಾಗುವುದುರೈತರು ಹಾಗೂ ಜನತೆ ನೀರು ಹರಿಸುವ ವಿಚಾರವಾಗಿ ಭಯ ಪಡುವಅಗತ್ಯವಿಲ್ಲ ಎಂದರು.
ಈ ವೇಳೆ ಹೇಮಾವತಿ ನಾಲಾ ವಿಭಾಗದಇಂಜನೀಯರ್ ನಾಗಭೂಷಣ್, ಮಾಜಿ ಎಪಿಎಂಸಿ ಅಧ್ಯಕ್ಷರಾದ ವಿಜಯ್‍ಕುಮಾರ್,ಗ್ರಾಮ ಪಂಚಾಯ್ತಿ ಸದಸ್ಯರಾವ್, ಮಂಜು, ಜೆ.ಡಿ.ಎಸ್. ಮುಖಂಡರಾದಜ್ಞಾನದೇವ್ ಹಾಗೂ ಸ್ಥಳಿಯರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ