ರಾಜ್ಯ ಕಲಾವಿದರ ಬೃಹತ್ ಸಾಂಸ್ಕೃತಿಕ ಸಮಾವೇಶ

ತುರುವೇಕೆರೆ:

              ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದವತಿಯಿಂದ ತುರುವೇಕೆರೆ ವಿಧಾನ ಸಭಾ ಕ್ಷೇತ್ರದ ಕಲ್ಲೂರು ಗ್ರಾಮದಲ್ಲಿ ಸೆ.6,7 ರಂದು ಜನಪದ ಕಲಾಯಾತ್ರೆ, ನಾಟಕೋತ್ಸವ ಹಾಗೂ ರಾಜ್ಯ ಕಲಾವಿದರ ಬೃಹತ್ ಸಾಂಸ್ಕೃತಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ಗುಬ್ಬಿವೀರೇಶ್ ತಿಳಿಸಿದರು.
                ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 6 ರಂದು ಬೆಳಿಗ್ಗೆ ಕಲ್ಲೂರಿನ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಾಲಯದ ಆವರಣದಿಂದ ನಂದಿದ್ವಜ, ಚಿಟ್ಟಿಮೇಳ, ವೀರಗಾಸಿ, ಕಹಳೆ, ನಾಸಿಕ್ ಡೋಲ್. ಕೀಲುಕುದುರೆ, ಸೋಮನಕುಣಿತ, ಅರೆವಾದ್ಯ, ಜಾನಪದ, ಭಜನಾ ತಂಡಗಳು, ಗಾರುಡಿಗೊಂಬೆ, ತಮಡಿ, ಗಾಯನತಂಡಗಳು, ರಂಗಗೀತೆತಂಡಗಳು ಸೇರಿದಂತೆ ನೂರಾರು ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಆಗಮಿಸಲಿದ್ದಾರೆ. ನಂತರ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರನ್ನು ಜನಪದ ರತ್ನ ಬಿರುದು ನೀಡಿ ಗೌರವಿಸಲಾಗುವುದು. ಸಂಜೆ 7ಕ್ಕೆ ಗಂಗೇಗೌರಿ ಎಂಬ ಸುಂದರ ಪೌರಾಣಿಕ ನಾಟಕವನ್ನು ಹಮ್ಮಿಕೊಳ್ಳಲಾಗಿದೆ.
                ಕಾರ್ಯಕ್ರಮದ ಉದ್ಘಾಟನೆಯನ್ನು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ನೆರವೇರಿಸಲಿದ್ದು. ಕನ್ನಡ ಸಂಸ್ಕೃತಿ ಸಚಿವರಾದ ಜಯಮಾಲ ಬಿರುದು ಪ್ರದಾನ ಮಾಡಲಿದ್ದಾರೆ, ಶಾಸಕ ಮಸಾಲ ಜಯರಾಮ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಅಹ್ವಾನಿತರಾಗಿ ಸಣ್ಣ ಕೈಗಾರಿಕ ಸಚಿವರಾದ ಎಸ್.ಆರ್.ಶ್ರೀನಿವಾಸ್, ಸಂಸದ ಮುದ್ದಹನುಮೇಗೌಡ, ಮಾಜಿ ಶಾಸಕ ಲಕ್ಷ್ಮೀನಾರಾಯಣ್, ಶಾಸಕರಗಳಾದ ಡಿ.ಸಿ.ಗೌರಿಶಂಕರ್, ಬಿ.ಸಿ.ನಾಗೇಶ್, ಜ್ಯೋತಿಗಣೇಶ್, ಎಂ.ವೀರಭದ್ರಯ್ಯ, ಜೆ.ಸಿ.ಮಾದುಸ್ವಾಮಿ, ಡಾ.ರಂಗನಾಥ್, ಎಸ್.ಸತ್ಯನಾರಾಯಣ್, ವಿಧಾನಪರಿಷತ್ ಸದಸ್ಯ ಚೌಡರೆಡ್ಡಿತೂಪಲ್ಲಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿ ಗೋಷ್ಟಿಯಲ್ಲಿ ರಮೇಶ್, ಶ್ರೀನಿವಾಸ್, ಮಿಮಿಕ್ರಿಶ್ರೀಧರ್, ಪೆದ್ದನಹಳ್ಳಿಶ್ರೀದರ್, ಉಮಾಶಂಕರ್, ರವೀಶ್, ತೇಜಸ್ಸ್, ಶರಣಪ್ಪ ಇತರರು ಇದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link