ನಗರಸಭಾ ಆಡಳಿತ ನಡೆಸಲು ಜೆಡಿಎಸ್‍ನಿಂದಲೂ ತೆರೆಮರೆಯ ಕಸರತ್ತು

ಚಳ್ಳಕೆರೆ

              ನಗರಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ 26 ಸ್ಥಾನಗಳಲ್ಲಿ ಮಾತ್ರ ಜೆಡಿಎಸ್ ಸ್ಪರ್ಧಿಸಿದ್ದು, ಅದರಲ್ಲಿ 10 ಸ್ಥಾನಗಳಲ್ಲಿ ಜಯ ಗಳಿಸಲು ಸಾಧ್ಯವಾಗಿದ್ದು, ಇನ್ನೂ ಮೂರ್ನಾಲ್ಕು ಸ್ಥಾನಗಳಲ್ಲಿ ಅಲ್ಪ ಮತದಿಂದ ಜೆಡಿಎಸ್ ಪಕ್ಷ ಸೋಲು ಅನುಭವಿಸಿದ್ದು, ಪಕ್ಷಕ್ಕೆ ಮತ ನೀಡಿದ ಎಲ್ಲಾ ಮತದಾರರನ್ನು ಹಾಗೂ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸುವುದಾಗಿ ಜೆಡಿಎಸ್ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ತಿಳಿಸಿದರು.
              ಅವರು, ಇಲ್ಲಿನ ಜೆಡಿಎಸ್ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಜೆಡಿಎಸ್, ಬಿಜೆಪಿ, ಪಕ್ಷೇತರ ಸದಸ್ಯ ಹಾಗೂ ಕಾಂಗ್ರೆಸ್‍ನ ಕೆಲ ನೂನತ ಸದಸ್ಯರೊಂದಿಗೆ ಸಂಪರ್ಕ ಹೊಂದಿದ್ದು, ಸಾಧ್ಯವಾದಲ್ಲಿ ನಗರಸಭೆಯ ಆಡಳಿತ ಚುಕ್ಕಾಣಿಯನ್ನು ಸಹ ಪಡೆಯುವ ವಿಶ್ವಾಸ ವ್ಯಕ್ತ ಪಡಿಸಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರಿಗೆ ಹಲವಾರು ರೀತಿಯ ಆಮಿಷಗಳನ್ನು ವಿವಿಧ ಪಕ್ಷಗಳು ಒಡ್ಡುತ್ತವೆ. ಈ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸದಂತೆ ಜೆಡಿಎಸ್ ಪಕ್ಷವನ್ನು ನಿಯಂತ್ರಿಸಲು ವಿರೋಧ ಪಕ್ಷಗಳು ಹೆಚ್ಚಿನ ಪ್ರಮಾಣದ ಹಣವನ್ನು ಹಾಗೂ ಇತರೆ ಆಮಿಷವನ್ನು ಮತದಾರರಿಗೆ ಒಡ್ಡಿದ್ದಾರೆ. ಇಂತಹ ಸಂದರ್ಭದಲ್ಲೂ ಸಹ ನಗರ ಮತದಾರರು ಜೆಡಿಎಸ್‍ಗೆ 10 ಸ್ಥಾನಗಳಲ್ಲಿ ಜಯ ಗಳಿಸುವ ಅವಕಾಶವನ್ನು ಮಾಡಿಕೊಟ್ಟಿದ್ಧಾರೆ. ನಗರಸಭೆಯಲ್ಲಿ ವಿರೋಧ ಪಕ್ಷವಾಗಿ ಉತ್ತಮ ಕಾರ್ಯನಿರ್ವಹಿಸುವುದಾಗಿ ಅವರು ತಿಳಿಸಿದರು.
              ವಿಜೇತ ಅಭ್ಯರ್ಥಿಗಳ ಪರವಾಗಿ ಮಾತನಾಡಿದ ಕೆ.ಸಿ.ನಾಗರಾಜು, ನಾನು ಇದೇ ಮೊದಲ ಬಾರಿಗೆ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಜೆಡಿಎಸ್ ಪಕ್ಷ ನನಗೆ ಸ್ಪರ್ಧಿಸಲು ಅವಕಾಶ ನೀಡಿತ್ತು. ಪ್ರಚಾರವೂ ಸೇರಿದಂತೆ ಎಲ್ಲಾ ರೀತಿಯ ಸಹಕಾರ ಪಕ್ಷದ ಮುಖಂಡರ ಮಾರ್ಗದರ್ಶನದಿಂದ ನಾನು ಈ ಬಾರಿ ವಿಜಂiÀiವನ್ನು ಸಾಧಿಸಿದ್ದೇನೆ. ಜಯಗಳಿಸಿದ 10 ಸದಸ್ಯರು ಸದಾಕಾಲ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತೇವೆಂದರು.
                ಹಿರಿಯ ಮುಖಂಡ ಎಚ್.ಆನಂದಪ್ಪ ಮಾತನಾಡಿ, ನಗರಸಭೆ ಚುನಾವಣೆಯಲ್ಲಿ ಕ್ಷೇತ್ರದ ಶಾಸಕರು ಜಯ ಸಾಧಿಸಲು ಹಣದ ಹೊಳೆಯನ್ನೇ ಹರಿಸಿದ್ದಾರೆ. ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ತೊಡಕಾಗಿದ್ಧಾರೆ. ಪ್ರಾಮಾಣಿಕ ಚುನಾವಣೆ ನಡೆದಿದ್ದಲ್ಲಿ ಜೆಡಿಎಸ್ ಕನಿಷ್ಟ ಪಕ್ಷ 15 ಸ್ಥಾನಗಳಲ್ಲಿ ಜಯಗಳಿಸುತ್ತಿತ್ತು. ಆದರೆ, ಮತದಾರರ ತೀರ್ಪು ನಮಗೆ ಅಂತಿಮವಾಗಿದ್ದು, ನಗರಸಭೆಯಲ್ಲಿ ಎಲ್ಲಾ ಸದಸ್ಯರು ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸುವರು.
                ಪತ್ರಿಕಾಗೋಷ್ಠಿಯಲ್ಲಿ ನೂತನ ಸದಸ್ಯರಾದ ಸಿ.ಶ್ರೀನಿವಾಸ್, ತಿಪ್ಪಕ್ಕ, ಎಚ್.ಪ್ರಶಾಂತ್‍ಕುಮಾರ್, ನಾಗವೇಣಮ್ಮ, ಕವಿತಾನಾಯಕಿ, ನಿರ್ಮಲ, ವಿಶುಕುಮಾರ್, ವಿ.ವೈ.ಪ್ರಮೋದ್ ಮುಂತಾದವರು ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link