ನಿಡಗಲ್ ದುರ್ಗ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲಾಗುವುದು: ಸಚಿವ ವೆಂಕಟರಮಣಪ್ಪ

ಪಾವಗಡ;-

             ನಿಡಗಲ್ ದುರ್ಗ ಅಭಿವೃದ್ದಿ ಪಡಿಸಲು ಅಗತ್ಯ ಅನುದಾನ ನೀಡಿ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲಾಗುವುದೆಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿಳಿಸಿದರು.
              ಸೋಮವಾರ ಪಾವಗಡ ತಾಲ್ಲೂಕಿನ ನಿಡಗಲ್ ದುರ್ಗದ ರಾಮತೀರ್ಥದಲ್ಲಿ ನಡೆದಾ ನಿಡಗಲ್ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು ನಿಡಗಲ್ ಎಂದರೆ ಒಂದು ಐತಿಹಾಸಿಕ ಸ್ಥಳ ಈ ಬೆಟ್ಟದಲ್ಲಿ ನೂರಾರು ದೇವಾಲಯಗಳನ್ನು ಹೊಂದಿರುವಾ ಪ್ರವಾಸೋದ್ಯಮ ಕೇಂದ್ರವಾಗಿದ್ದು , ಇದು ರಾಜಾಮನೆತನಗಳ ಬೀಡಾಗಿದ್ದು ಇಲ್ಲಿನ ಗ್ರಾಮದೇವತೆಗಳು ಅತ್ಯಂತ ಪ್ರಸಿದ್ದಿಹೋಂದಿದ್ದು, ಈ ಪ್ರೇಕ್ಷಣೆಯ ಸ್ಥಳ ಅಭಿವೃದ್ದಿ ಪಡಿಸಲು ಹೆಚ್ಚು ಅನುದಾನ ನೀಡಿ ಜಿಲ್ಲೆಯಲ್ಲೆ ನಿಡಗಲ್ ಒಂದು ಸುಂದರ ಪ್ರೇಕ್ಷಣೆಯ ಸ್ಥಳವಾಗಿ ಮಾಡುವುದಾಗಿ ಎಂದು ಹೇಳಿದರು.
              ನಿಡಗಲ್ ದುರ್ಗದಲ್ಲಿ ಶ್ರೀ ವಾಲ್ಮೀಕಿ ಶಾಖಾ ಮಠ ಅಭಿವೃದ್ದಿಗೆ ಐದು ಲಕ್ಷ ನೀಡುವುದಾಗಿ ತಿಳಿಸಿದರು.
            ಸಂಸದರಾದ ಮುದ್ದೆಹನುಮೇಗೌಡರು ಮಾತನಾಡಿ ಇಲ್ಲಿನ ಪ್ರಕೃತಿ ಹಾಗೂ ನೂರಾರು ದೇವಾಲಯಗಳು ಪ್ರೇಕ್ಷಕರ ಕಣ್ಮನ ಸೇಳೆಯಲ್ಲಿದ್ದು, ಇಲ್ಲಿನ ಪರಂಪರೆಯನ್ನು ಸಾರುವಾ ನಿಟ್ಟಿನಲ್ಲಿ ನಿಡಗಲ್ ಉತ್ಸವಕ್ಕೆ ಕೈ ಜೋಡಿಸಲಾಗುವುದೆಂದು ತಿಳಿಸಿದರು.ಚಿತ್ರದುರ್ಗ ಸಂಸದರಾದ ಚಂದ್ರಪ್ಪರವರು ಮಾತನಾಡಿ ರಾಜಾಮನೆತನಗಳ ಕಾಲದಲ್ಲಿ ಘತ ವೈಭವವನ್ನು ಮುಂದಿನ ಪೀಳಿಗೆಗೆ ಸಾರುವಾ ನಿಟ್ಟಿನಲ್ಲಿ ಅಂದಿನ ಕಾಲದ ಅಡಳಿತಕ್ಕೆ ಸಾಕ್ಷಿಯಾಗಿ ಇಲ್ಲಿ ಇಂದು ನೂರಾರು ದೇವಾಲಯಗಳನ್ನು ನಾವು ಕಾಣುತ್ತಿದ್ದು ಶಿಥಿಲಗೊಂಡ ದೇವಾಲಯಗಳನ್ನು ಅಭಿವೃದ್ದಪಡಿಸುವಾ ಕಾರ್ಯಕ್ಕೆ ಕೈ ಜೋಡಿಸಬೇಕಾಗಿದ್ದು, ಸಂಸದ ನಿಧಿಯಿಂದ ನಿಡಗಲ್ ಶ್ರೀ ವಾಲ್ಮೀಕಿ ಶಾಖಾ ಮಠ ಅಭಿವೃದ್ದಿಗೆ ಐದು ಲಕ್ಷ ನೀಡುವುದಾಗಿ ಎಂದರು.
              ಮಾಜಿ ಶಾಸಕ ಕೆ.ಎಮ್.ತಿಮ್ಮರಾಯಪ್ಪ ಮಾತನಾಡಿ ರಾಜ್ಯ ಸರ್ಕಾರದ ಗಮನಕ್ಕೆ ತಂದು ರಾಜ್ಯದಲ್ಲೆ ಎರಡನೆ ಹಂಪೆಯಾದ ಐತಿಹಾಸಿಕ ನಿಡಗಲ್ ಅಭಿವೃದ್ದಿಗೆ ಹೆಚ್ಚು ಅನುದಾನ ಬಿಡುಗಡೆಮಾಡಿಸಿ ಅಭಿವೃದ್ದಿ ಪಡಿಸಲಾಗುವುದೆಂದು ತಿಳಿಸಿದರು.ನಿಡಗಲ್ ಉತ್ಸವದ ಧಿವ್ಯ ಸಾನಿದ್ಯವನ್ನು ಶಿಡ್ಲಕೋಣೆ ಸಂಜಯ್ ಕುಮಾರ್ ಸ್ವಾಮಿಜಿ ವಹಿಸಿ ಅಶಿರ್ವಚನ ನೀಡಿದರು.

              ನಿಡಗಲ್ ಉತ್ಸವದ ಪ್ರಯುಕ್ತ ನಿಡಗಲ್ ದುರ್ಗದ ಲಕ್ಷ್ಮಿನರಸಿಂಹ್ಮ ಸ್ವಾಮಿ ದೇವಾಲಯ , ವೀರಭದ್ರ ಸ್ವಾಮಿ ದೇವಾಯ , ರಾಮಲಿಂಗೇಶ್ವರ ಸ್ವಾಮಿ ದೇವಾಲಯ ,ಶೂಲದ ವೀರಣ್ಣ ಇನ್ನು ಮುಂತಾಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಹಾಗೂ ನಿಡಗಲ್ ಉತ್ಸವಕ್ಕೆ ಆಗಮಿಸಿದ್ದಾ ಸಾವಿರಾರು ಭಕ್ತರಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಎಲ್.ಜಿ.ಹಾವನೂರು ಸಾಂಕೃತಿಕ ಕಲಾತಂಡದವತಿಯಿಂದ ನಿಡಗಲ್ ಗ್ರಾಮದಿಂದ ರಾಮತಿರ್ಥದವರೆಗೂ ಕಲಾತಂಡಗಳ ಸಾಂಕೃತಿಕ ಪ್ರದರ್ಶನ ನಡೆಯಿತ್ತು.
             ನಿಡಗಲ್ ಉತ್ಸವದಲ್ಲಿ ಜಿ.ಪಂ.ಸದಸ್ಯರಾದ ಹೆಚ್.ವಿ.ವೆಂಕಟೇಶ್ ,ಪಾಪಣ್ಣ , ಎಪಿಎಮ್‍ಸಿ ಅದ್ಯಕ್ಷರಾದ ಮಂಜುನಾಥ್ , ಉಪಾದ್ಯಕ್ಷರಾದ ಮಾರಫ್ಪ ,ತಾಲ್ಲೂಕು ಪಂಚಾಯ್ತಿ ಅದ್ಯಕ್ಷರಾದ ಸೊಗುಡು ವೆಂಕಟೇಶ್ , ಪುರಸಭ ಸದಸ್ಯರಾದ ರಾಜೇಶ್ , ತಾ.ಪಂ.ಸದಸ್ಯರಾದ ಪುಟ್ಟಣ್ಣ , ಶಿವಮ್ಮ , ಗಿರಿಜನ ನಾಯಕ ನೌಕರರ ಸಂಘದ ಅದ್ಯಕ್ಷರಾದ ಅನಿಲ್ ಕುಮಾರ್ , ವಾಲ್ಮೀಕಿ ಜಾಗೃತಿ ವೇದಿಕೆಯ ಅದ್ಯಕ್ಷರಾದ ಲೋಕೆಶ್ ಪಾಳ್ಳೆಗಾರ್ ,ಕಾರ್ಯದರ್ಶಿ ಚಿತ್ತಗಾನ ಹಳ್ಳಿ ಚಂದ್ರು , ಡಿಸಿಸಿ ಬ್ಯಾಂಕ್ ಸೀನಪ್ಪ , ಹಾಗೂ ಮುಖಂಡರಾದ ಓಂಕಾರ್ ನಾಯಕ ,ತಿಮ್ಮರೆಡ್ಡಿ , ತಿಮ್ಮ,ರೆಡ್ಡಿ , ನಾರಾಯಣಪ್ಪ ,ದಿವಾಕರ ,ಬಲರಾಂ ,ಮೋಹನ್ ಕುಮಾರ್ ಉಪಸ್ಥಿತರಿದ್ದರು .

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap