ಬಸವಾಪಟ್ಟಣಕ್ಕೆ ಮೂಲಭೂತ ಸೌಲಭ್ಯಕ್ಕೆ ಮನವಿ

ತುಮಕೂರು:

            ತುಮಕೂರು ಗ್ರಾಮಾಂತರ ಮೈದಾಳ ಪಂಚಾಯತಿ ವ್ಯಾಪ್ತಿಗೆ ಬರುವ ಸಿದ್ಧಗಂಗಾ ಮಠ ಹಾಗೂ ಕ್ಯಾತ್ಸಂದ್ರ ಸಮೀಪದಲ್ಲಿರುವ ಬಸವಾಪಟ್ಟಣ ಗ್ರಾಮವು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಲೋಕಸಭಾ ಕ್ಷೇತ್ರದ ಅನುದಾನದಲ್ಲಿ ಸದರಿ ಗ್ರಾಮಕ್ಕೆ ಸೌಲಭ್ಯ ಕಲ್ಪಿಸಬೇಕೆಂದು ಸಂಸದ ಎಸ್.ಪಿ.ಮುದ್ದಹನುಮೇಗೌಡರಲ್ಲಿ ಮನವಿ ಮಾಡಿದರು.
              ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಂಸದರು ಕೆಲವೊಂದು ಅಭಿವೃದ್ಧಿ ಕಾರ್ಯಗಳನ್ನು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿದರು. ಉಳಿದವುಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಕೈಗೊಳ್ಳಲಾಗುವುದು ಎಂದರು.
            ಗ್ರಾಮಸ್ಥರ ಬೇಡಿಕೆಗಳಾದ ಸಿಡಿಪಿ ಪ್ರೋಗ್ರಾಮ್ಸ್‍ನಲ್ಲಿ ಶ್ರೀರಾಜ್ ಟಾಕೀಸ್‍ನಿಂದ ಮೈದಾಳದವರೆಗೂ ಸಾರ್ವಜನಿಕ ರಸ್ತೆ ಕಾಮಗಾರಿ ನಡೆಸುವ ಬಗ್ಗೆ, ಬಸವಾ ಪಟ್ಟಣ ಗ್ರಾಮಕ್ಕೆ ಡ್ರೈನೇಜ್ ಹಾಗೂ ರಸ್ತೆ ಸೌಲಭ್ಯ ಕಲ್ಪಿಸುವಂತೆ, ಹೈಮಾಸ್ಕ್ ವಿದ್ಯುತ್ ದೀಪ ಅಳವಡಿಸಲು ಅನುದಾನ ಕೋರಿಕೆ, ರಾಮದೇವರ ಬೆಟ್ಟಕ್ಕೆ ರೂಪ್‍ವೇ ರಸ್ತೆ ನಿರ್ಮಾಣ, ಬಸವಾ ಪಟ್ಟಣ ಗ್ರಾಮದಲ್ಲಿ ವೈಫೈ ಹಾಗೂ ಇಂಟರ್‍ನೆಟ್ ಬಿ.ಎಸ್.ಎನ್.ಎಲ್.ನಿಂದ ಸಂಪರ್ಕ ಸೇರಿದಂತೆ ಇನ್ನೂ ಅನೇಕ ಸೌಲಭ್ಯಗಳನ್ನು ಕಲ್ಪಿಸುವಂತೆ ಸಂಸದರಲ್ಲಿ ಮನವಿ ಮಾಡಲಾಯಿತು.

Recent Articles

spot_img

Related Stories

Share via
Copy link